Sign in
Sign in
Recover your password.
A password will be e-mailed to you.
ಭಾಗ್ಯನಗರ ಹುಣ್ಣಿಮೆಯ ಕಾರ್ಯಕ್ರಮವು ಬಹಳ ವಿಜೃಂಭಣೆಯಿಂದ ನಡೆಯಿತು ಶ್ರೀ ಮಾರ್ಕಡೇಶ್ವರ ದೇವಾಲಯ ಮುಂಜಾನೆ 6 ಗಂಟೆಗೆ ರುದ್ರಾಭಿಷೇಕ, 9 ಗಂಟೆಗೆ ಸಮಾಜದ ಗುರು ಹಿರಿಯರು ಜನಿವಾರ ಹಾಕಿಕೊಳ್ಳುವ ಮೂಲಕ
ಭಾಗ್ಯನಗರ ದೇವಸ್ಥಾನದಿಂದ ಸಮಾಜದ ಎಲ್ಲಾ ಮಹಿಳೆಯರು ಕಳಸದೊಂದಿಗೆ ಕುಣೀಕೆರಿ ತಂಡದ ಡೋಲು ಮಜಲು ಸಂಗೀತ ವಾದ್ಯದೊಂದಿಗೆ ಯುವಕ ಮಂಡಳಿ ಹಾಗೂ ಹಿರಿಯರು ತಾಳಕ್ಕೆ ತಕ್ಕ ಹಾಗೆ ಕುಣಿತದೊಂದಿಗೆ ಗಾಂಧಿ ಸರ್ಕಲ್, ಊರಮ್ಮ ದೇವಿ, ಕನಿಕಾ ಪರಮೇಶ್ವರಿ, ವೀರಭದ್ರೇಶ್ವರ ದೇವಾಲಯಗಳ ಮುಖಾಂತರ ವಿಜೃಂಭಣೆಯಿಂದ ಭಕ್ತ ಮಾರ್ಕಂಡೇಶ್ವರ ಮೂರ್ತಿಯ ಮೆರವಣಿಗೆ ನಡೆಯಿತು, ಹಿರಿಯರು ಹಾಗೂ ಮಹಿಳಾ ಮಂಡಳಿಯವರು ಯುಪಿಎಸ್ ಉದ್ಘಾಟನೆಯ ಮಾಡಿದರು, ದೇವಾಲಯದ ಮುಖ್ಯ ವೇದಿಕೆಯಲ್ಲಿ ಗೌರವ ಅಧ್ಯಕ್ಷರಾದ ಏಕನಾಥಪ್ಪ ದೇವದುರ್ಗ ಅಧ್ಯಕ್ಷರು ನಾರಾಯಣಪ್ಪ ಚಳಮರದ, ಮಹದೇವಪ್ಪ ಏರಿ, ಅಶೋಕ್ ಗೊರಂಟ್ಲಿ, ತಿಪ್ಪಣ್ಣ ಮ್ಯಾಡಂ,
ರಾಘವೇಂದ್ರ ನೀಲಿ, ರಾಮಚಂದ್ರಪ್ಪ ಚಳಮರದ, ಟೂರ್ನಮೆಂಟ್ ಕ್ರೀಡಾ ಪ್ರಶಸ್ತಿಗಳನ್ನು ವಿತರಿಸಿದರು,
ಯುವಕ ಸಂಘದ ಅದ್ಯಕ್ಷರು ಈರಣ್ಣ ಪಗಾಡಾಲ್, ಮಾರ್ಕಡೆಪ್ಪ ಬಿ, ಶಂಕರ ಜಿ, ರವಿ, ಲಕ್ಷಣ, ಸಮಾಜದ ಯುವಕರು ಉಪಸ್ಥಿತರಿದರು,
ಭಕ್ತಿ ಪರಂಪರೆಯಲ್ಲಿ ಸಾವನ್ನೇ ಗೆದ್ದ ಭಕ್ತ ಮಾರ್ಕಂಡೇಯ ಉತ್ಸವವನ್ನು ಭಾಗ್ಯನಗರದ ನೇಕಾರ ಪದ್ಮಶಾಲಿ ಕುಲ ಬಾಂಧವರು ಪ್ರತಿ ವರ್ಷ ನೂಲು ಹುಣ್ಣಿಮೆಯ ದಿನಾ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ*
Get real time updates directly on you device, subscribe now.
Comments are closed.