ಛಾಯಾಗ್ರಾಹಕರನ್ನು ವಾರ್ತಾ ಮತ್ತು ಪ್ರಚಾರ ಇಲಾಖೆಗೆ ಸೇರಿಸಿ : ಕೆ.ಟಿ.ಶ್ರೀನಿವಾಸ
ಕೊಪ್ಪಳ : ವಾರ್ತಾ ಮತ್ತು ಪ್ರಚಾರ ಇಲಾಖೆಗೆ ಛಾಯಾಗ್ರಾಹರನ್ನು ಸೇರಿಸಿ ಕಾರ್ಮಿಕರ ಇಲಾಖೆಯ ಅಸಂಘಟಿತ ವಲಯಕ್ಕೆ ಸೇರಿಸಿದ್ದು ಸರಿಯಲ್ಲ. ಈಚೆಗೆ ಅಗಷ್ಟ ೧೫ ರಂದು ಅಸಂಘಟಿತ ವಲಯಕ್ಕೆ ಸೇರಿಸಿದ್ದನ್ನು ನಾವು ವಿರೋಧಿಸುತ್ತೇವೆ. ಎಂದು ಶಿವಮೊಗ್ಗ ಜಿಲ್ಲೆಯ ಛಾಯಾಗ್ರಾಹಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಕೆ.ಟಿ.ಶ್ರೀನಿವಾಸ ಹೇಳಿದರು.
ಅವರು ಕೊಪ್ಪಳ ತಾಲೂಕ ಫೋಟೋ ಹಾಗೂ ವಿಡಿಯೋಗ್ರಾಫರ್ ಸಂಘ(ರಿ)ದ ವತಿಯಿಂದ ಸಮೀಪದ ಭಾಗ್ಯನಗರದ ಬಾಲಾಜಿ ಫಂಕ್ಷನ್ ಹಾಲ್‌ನಲ್ಲಿ ೧೮೫ನೇ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಕ್ಯಾಮರಾ ಕ್ಲಿಕ್ಕಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
೨೦೧೯ರಲ್ಲಿ ಕಾರ್ಮಿಕ ಸಚಿವರಾದ ಸುರೇಶ ಹೇಬ್ಬಾಳವರಲ್ಲಿ ನಾನು ನಮ್ಮನ್ನು ಅಂದ್ರೆ ಛಾಯಾಗ್ರಾಹಕರನ್ನು ವಾರ್ತಾ ಮತ್ತು ಪ್ರಚಾರ ಇಲಾಖೆಯಲ್ಲಿ ಸೇರಿಸಿ ಅಂದಿದ್ದೆ ಅವರು ಭರವಸೆಯನ್ನು ಕೊಟ್ಟಿದ್ರು ನಾನು ಯಾವದೇ ವೃತ್ತಿಯನ್ನು ಅಲ್ಲಗಳಿತಿಲ್ಲ ಆದ್ರೇ ಈಗ ನಮ್ಮನ್ನು ಚಿಂದಿ ಆಯುವವರ ಜೊತೆ ನಮ್ಮನ್ನು ಸೇರಿಸಿದ್ದಾರೆ. ಚಿಂದಿ ಆಯುವವನಿಗೂ ಕೂಡ ಕರೋನ ಟೈಮಲ್ಲಿ ಐದರಿಂದ ಹತ್ತು ಸಾವಿರ ರೂಪಾಯಿಗಳನ್ನು ಸರಕಾರ ಕೊಟ್ಟಿತು. ಆದ್ರೇ ಫೋಟೋಗ್ರಾಫರ್ ಕಡೇ ಯಾರು ತಿರುಗಿನೋಡಲಿಲ್ಲ. ನಮಗ ಡ್ರೆಸ್‌ಸೆನ್ಸ್ ಇರೋದ್ರಿಂದ ಇವನಿಗೇನು ಕಮ್ಮಿ ಅಂತ ಜನ, ಸರಕಾರದವರು ತಿಳ್ಕೋಂಡುಬಿಟ್ಟಿದ್ದಾರೆ. ಆದ್ರೆ ನಮಗೂ ಒಂದು ಮನಸು ಇದೆ, ಹೊಟ್ಟೆ ಇದೆ. ಕುಟುಂಬ ಇದೆ. ಅಂತ ಯಾಕ್ ತಿಳ್ಕೋಳ್ತಾಯಿಲ್ಲ ಬೇಜಾರಾಗುತ್ತಣ್ಣ ಒಬ್ಬ ಚಿಂದಿ ಆಯುವವನ ಜೊತೆ ನಮ್ಮನ್ನ ಸರ್ಕಾರದವರು ಸೇರಿಸಿದ್ದಾರೆ. ಸರಕಾರಕ್ಕೆ ಕೇಳಿಕೊಳ್ಳೊದಿಷ್ಟೆ ನಮ್ಮನ್ನು ಸೇರಿಸೋದಿದ್ದರೆ ವಾರ್ತಾ ಮತ್ತು ಪ್ರಾಚಾರ ಇಲಾಖೆಗೆ ಸೇರಿಸಿ ಇಲ್ಲದಿದ್ದರೆ ನಮಗೆ ಅಸಂಘಟಿತ ವಲಯಕ್ಕೆ ಸೇರಿಸಿದ್ದನ್ನು ನಾವು ವಿರೋಧಿಸುತ್ತೇವೆ. ಅದರಿಂದ ತೆಗೆದುಬಿಡಿ. ಆ ವಲಯದಿಂದ ಸಿಗೋ ಸೌಲಭ್ಯಗಳು ಕಾಮನ್ನಾಗಿ ಸಿಕ್ಕೇ ಸಿಗುತ್ತವೆ. ಈಗ ಸೇರಿಸಿರುವದರಿಂದ ಎನೂ ಉಪಯೋಗವಿಲ್ಲ. ಈ ವಿಚಾರವಾಗಿ ನಾವು ಮುಂದಿನ ದಿಗಳಲ್ಲಿ ಶ್ರೀ ಮಾನ್ಯ ಸಚಿವ ಸಂತೋಷ ಲಾಡ್ ಮತ್ತು ಮುಖ್ಯಮಂತ್ರಿಯನ್ನು ನವೆಂಬರ, ಡಿಸೆಂಬರಲ್ಲಿ ದಾವಣಗೇರಿಯಲ್ಲಿ ಎಲ್ಲಾ ಛಾಯಾಗ್ರಾಹರನ್ನು ಸೇರಿಸಿ ಅವರನ್ನು ಆಹ್ವಾನಿಸಿ ನಮ್ಮನ್ನು ವಾರ್ತಾ ಮತ್ತು ಪ್ರಚಾರ ಇಲಾಖೆಗೆ ಸೇರಿಸಲು ಮನವಿ ನೀಡುತ್ತೇವೆ. ನಿಮ್ಮೆಲ್ಲರ ಸಹಕಾರದಿಂದ ಆ ಕೆಲಸವನ್ನು ನಾವು ಮಾಡೇ ಮಾಡುತ್ತೇವೆ. ಎಂದರು.
ಪ್ರಪಂಚದಲ್ಲೆ ರವಿ ಕಾಣದ್ದನ್ನು ಕವಿ ಕಂಡ ಕವಿ ಕಾಣದ್ದನ್ನು ಛಾಯಾಗ್ರಾಹಕ ಕಂಡ ಹೇಗಂದ್ರೆ ತಾಯಿ ಗರ್ಭದಿಂದ ಭೂಗರ್ಭಕ್ಕೆ ಹೋಗೋತನ ಛಾಯಾಗ್ರಹಣ ಮಾಡೋ ಎಕೈಕ ವ್ಯಕ್ತಿ ಎಂದ್ರೆ ಛಾಯಾಗ್ರಾಹಕ. ಎಂದು ಹೇಳಿದರು.
ಮುಂದುವರೆದು ಮಾತನಾಡಿ, ಇತ್ತೀಚಿನ ದಿಗಳಲ್ಲಿ ಮೋಬೈಲ್ ಇದ್ದವರೆಲ್ಲರು ಛಾಯಾಗ್ರಾಹಕರಾಗಿದ್ದಾರೆ, ಕಳೆದ ಒಂದು ದಶಕದ ಹಿಂದೆ ಛಾಯಾಗ್ರಾಹರಗೆ ಇದ್ದ ಗೌರವ ಇಂದು ನಶಿಸಿ ಹೋಗ್ತಾ ಇದೆ. ಹುಟ್ಟು ಹಬ್ಬ, ಸೀಮಂತ ಕಾರಣ, ನಾಮಕರಣ, ಎಂಗೇಜ್‌ಮೆಂಟ್ ಛಾಯಾಗ್ರಾಹರಿಂದ ಕೈಬಿಟ್ಟು ಹೋಗಿವೆ. ಈಗ ಉಳಿದುದ್ದು ಒಂದೇ ಈವೆಂಟು ಅದು ಮದುವೆ ಶುಭಸಮಾರಂಭ ಆ ಮದುವೆ ಫೋಟೋಗಳನ್ನು ಸಾಫ್ಟ್‌ಕಾಫಿ ಅವರಿಗೆ ಹಾಕಿ ಕೊಡೋದು, ಅವರಿಗೆ ಬೇಡವಾದ ಫೋಟೋಗಳನ್ನು ಡಿಲಿಟ್ ಮಾಡಿಸಲು ಕರೆಯುವ ಮೂಲಕ ತಪ್ಪು ಮಾಡುತೀವಿ. ಈಗ ಸದ್ಯದಲ್ಲಿ ಫೋಟೋಗ್ರಫಿಗಾಗಿ ಚಾಲ್ತಿ ಕ್ಯಾಮರಾ ತೆಗೆದುಕೊಳ್ಳಬೇಕೆಂದರೆ ಕಡಿಮೆ ಎಂದರೂ ನಾಲ್ಕು ಲಕ್ಷಕ್ಕೂ ಹೆಚ್ಚು ರೂಪಾಯಿ ಬೇಕು. ಇಷ್ಟಾದ್ರು ಆ ಕ್ಯಾಮರಾ ದಿಂದ ಒಂದು ಮದುವೆ ಅಂದ್ರೆ ಸಾವಿರದಿಂದ ಎರಡು ಸಾವಿರ ಎಕ್ಸ್‌ಪೊಜ್ ಮಾಡ್ತೀರ. ಹಾಗಾಗಿ ಕೇವಲ ಒಂದರಿಂದ ಎರಡು ವರ್ಷ ಮಾತ್ರ ಬಾಳಕೆ ಬರುತ್ತೆ. ಅಷ್ಟರಲ್ಲಿ ಮತ್ತಿಷ್ಷು ಟೆಕ್ನಾಲಜಿ ಅಳವಡಿಸಿ ಮತ್ತೊಂದು ಸೀರಿಜ್ ಬರುತ್ತೆ ಈ ಹಿಂದೆ ರೋಲ್ ಕ್ಯಾಮರಾದಿಂದ ೩ ರಿಂದ ೪ ರೋಲ್‌ನಲ್ಲಿ ಮದುವೆ ಮುಗಿದು ಬಿಡುತಿತ್ತು ಐದಾರು ಸಾವಿರ ಬಿಲ್ ಆದ್ರೆ ಆಗ ದೊಡ್ಡ ಫೋಟೋಗಾಫರ್ ಅಂತಿದ್ರು. ಯಾವದೇ ಪೋಗ್ರಾಂನಲ್ಲಿ ಫೋಟೋ ತೆಗೆರಿ ಅಂತ ಯಾರಾದ್ರೂ ಮೊಬೈಲ್ ಕೊಟ್ರೆ ತೆಗೆಯಬೇಡಿ. ಸಾಫ್ಟ್‌ಕಾಫಿ ಹಾಕಿ ಕೊಡಬೇಡಿ. ಎಂದು ಕಿವಿ ಮಾತು ಹೇಳಿದರು.
ದೇವರು ಕ್ಯಾಮರಾಮನ್‌ಗೆ ಮೂರು ಖಾಯಿಲೆಯನ್ನು ಕೊಟ್ಟಿದ್ದಾನೆ ಯಾಕಂದ್ರೆ ಎಷ್ಟೋ ಮದುವೆಗಳಲ್ಲಿ ನಾವು ಸರಿಯಾದ ಸಮಯದಲ್ಲಿ ಊಟ, ನಿದ್ದೆ ಮಾಡೋದಿಲ್ಲ ನಾವೇನು ಕರ್ಮಮಾಡಿದ್ದೇವೋ ಗೊತ್ತಿಲ್ಲ ಎಷ್ಟೋ ಮದುವೆಗಳಲ್ಲಿ ನಮಗೆ ಯಾರೂ ಊಟ ಮಾಡಿ ಅಂತ ಹೇಳೋದಿಲ್ಲ ಹಾಗಾಗಿ ಗ್ಯಾಸ್ಟ್ರಿಕ್, ಬಿಪಿ, ಶುಗರ್ ಬರ‍್ತವೆ. ಕಲ್ಯಾಣ ಮಂಟಪಕ್ಕೆ ಎಲ್ಲರಿಂತ ಮುಂಚೆ ನಾವು ಬಂದು ಕೋನೆಗೆ ಹೋಗ್ತೆವೆ. ಎನೋ ಒಂದು ಕನಸು ಕಟ್ಟಿಕೋಂಡು ನಾಳೆ ಮಗ/ಮಗಳ ಫೀಜ್ ಕಟ್ಟಬೇಕು, ಮನೆ ಬಾಡಿಗೆ ಕಟ್ಟಬೇಕು ಅಂತ ಹೋಗಿರ‍್ತೀವಿ ಆದ್ರೆ ಅಡ್ವಾನ್ಸ್ ದುಡ್ಡು ಬಿಟ್ರೆ ಮದುವೆ ನಂತ್ರ ನೀ ನಮ್ಮವನೇ ಹೋಗೋ ಆಮೇಲೆ ಕೊಡ್ತಿವಿ ನೀನಗೇನು ಕಮ್ಮಿ ಹೋಗೋ ಅಂತಾ ಕಳ್ಸಿತಾರೆ ಯಾಂಕಂದ್ರೆ ಫೋಟೋಗ್ರಾಫರ್‌ನಿಗೆ ಡ್ರೆಸ್‌ಸೆನ್ಸ್ ಇರುತ್ತಲ್ಲ ಅದಕ್ಕೆ. ನಾವು ನೆಕ್ಟ್ ನಮಗೆ ಹೇಳ್ತಾರೋ ಇಲ್ಲಾ ಅಂತ ಅಂಜಿಕೊಂಡು ಸರಿಯಾಗಿ ಕೇಳೋದಿಲ್ಲ ಹಿಂಗ ನಮ್ಮ ಪರಿಸ್ಥಿತಿ ಇದೆ. ಕೆಲವರು ಸಾಲ ಮಾಡಿ, ಲೋನ್ ತೆಗೆದುಕೊಂಡು ಹೊಸ ಹೊಸ ಸೀರೀಜ್ ಕ್ಯಾಮರಾ ತೆಗೆದುಕೊಂಡು ಅದು ಕಟ್ಟಾಲಾಗದೇ ಒದ್ದಾಡ್ತಿರುವದನ್ನು ಕಣ್ಣಾರೆ ನೋಡಿದ್ದೀನಿ. ಹಿಂಗಾದಿರಲಿ. ಒಂದು ನಮ್ಮ ತನ ಅನ್ನೋದು ಇರಲಿ. ನಮ್ಮ ವೃತ್ತಿಯನ್ನು ಗಟ್ಟಿಗೊಳಿಸಿ. ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಗವಿಮಠದಿಂದ, ಅಶೋಕ ಸರ್ಕಲ್, ಬಸ್‌ನಿಲ್ದಾಣದ ವರೆಗೆ ಬೈಕ್‌ರ‍್ಯಾಲಿ ಹಮ್ಮಿಕೊಳ್ಳಲಾಗಿತ್ತು. ರ‍್ಯಾಲಿಗೆ ಪೂಜ್ಯ ಗವಿಶ್ರೀಗಳು ಗವಿಮಠದಿಂದ ಚಾಲನೆ ನೀಡಿದರು. ಅಧ್ಯಕ್ಷತೆಯನ್ನು ಕೊಪ್ಪಳ ತಾಲೂಕ ಛಾಯಾಗ್ರಾಹರ ಸಂಘದ ಅಧ್ಯಕ್ಷರಾದ ಬಸವರಾಜ ಕಂಪ್ಲಿ, ಉಪಾಧ್ಯಕ್ಷರಾದ ರವಿ ಮುನಿರಾಬಾದ್, ಗೌರವಧ್ಯಕ್ಷತೆಯನ್ನು ಅಶೋಕ ಹುಣಸಿಗಿಡದ, ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಾರ್ಮಿಕ ಆಧಿಕಾರಿಗಳಾದ ಸುಧಾ.ಸಿ. ಗರಗ, ಜಿಲ್ಲಾ ಪಂಚಾಯತ ಸಿ.ಎ.ಓ ಅಮೀನ್ ಎಮ್. ಅತ್ತಾರ, ಛಾಯಾಗ್ರಾಹರ ಸಂಘದ ಜಿಲ್ಲಾಧ್ಯಕ್ಷರಾದ ವಿಜಯಕುಮಾರ ವಸ್ತ್ರದ ವಹಿಸಿದ್ದರು.
ಕಾರ್ಯಕ್ರಮದ ಪ್ರಾರ್ಥನೆಯನ್ನು ಮಂಜು ಕುರುಗೋಡ, ನಿರುಪಣೆಯನ್ನು ಅಮೂಲ್ ಕಠಾರಿ, ಜೆ.ಬಸವರಾಜ ಕುಂಬಾರ ಮಾಡಿದರೆ ವಂದನಾರ್ಪಣೆಯನ್ನು ಈಶ್ವರ ಪೂಜಾರ ಮಾಡಿದರು.
ಈ ಸಂದರ್ಭದಲ್ಲಿ ಹಿರಿಯ ಛಾಯಾಗ್ರಾಹಕರಾದಂತಹ ಬಿಸರಳ್ಳಿಯ ರುದ್ರಯ್ಯ ಬ್ರಹನ್ಮಠ, ಕೊಪ್ಪಳದ ಪಂಡಿತಾರಾಧ್ಯ ಹಿರೇಮಠ ಹಾಗೂ ಎಸ್.ಎಸ್.ಎಲ್.ಸಿ, ಪಿ.ಯು.ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ಛಾಯಾಗ್ರಾಹಕರ ಮಕ್ಕಳನ್ನು ಸನ್ಮಾನಿಸಿ ಗೌರವಿಸಲಾಯಿತು ಜೊತೆಗೆ ಇತ್ತೀಚೆಗೆ ಛಾಯಾಗ್ರಾಹರ ವತಿಯಿಂದ ಕ್ರಕೇಟ್ ಟೂರ್ನಾಮೆಂಟ್ ಹಮ್ಮಿಕೊಳ್ಳಲಾಗಿತ್ತು. ಗೆದ್ದ ಛಾಯಾ ಚಾಂಪಿಯನ್ ತಂಡಕ್ಕೆ ಕಪ್ ನೀಡಿ ಗೌರವಿಸಲಾಯಿತು.
Comments are closed.