ಕೊಲೆಗೊಳಗಾದ ಯಮನೂರಪ್ಪನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು : ಗಣೇಶ್ ಹೊರತಟ್ನಾಳ

Get real time updates directly on you device, subscribe now.


ಕೊಪ್ಪಳ : ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಸಂಗನಾಳ ಗ್ರಾಮದಲ್ಲಿ ಕ್ಷೌರ ಮಾಡಿಸಿಕೊಳ್ಳುವ ವಿಷಯವಾಗಿ ಮುಡಿಯಪ್ಪ ಹಡಪದ ಎನ್ನುವ ಯುವಕ ಯಮನೂರಪ್ಪ ಹರಿಜನ ಇವನನ್ನು ಕತ್ತರಿಯಿಂದ ಚುಚ್ಚಿ ಕೊಲೆ ಮಾಡಿರುವದು ಸಮಾಜ ತಲೆ ತಗ್ಗಿಸುವಂತೆ ವಾತಾವರಣ ನಿರ್ಮಾಣವಾಗಿದೆ, ಯಮನೂರಪ್ಪನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಬಿಜೆಪಿ ಎಸ್ ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಗಣೇಶ್ ಹೊರತಟ್ನಾಳ ಒತ್ತಾಯಿಸಿದ್ದಾರೆ.
ಸ್ವಾತಂತ್ರ್ಯ 78 ವರ್ಷ ಗತಿಸಿದರೂ ಸಹ ಇಂತಹ ಘಟನೆಗಳು ಏಕೆ ನಡೆಯುತ್ತಿರುತ್ತವೆ ಎನ್ನುವದು ಯಕ್ಷ ಪ್ರಶ್ನೆಯಾಗಿದೆ, ಇಂತಹ ಘಟನೆಗಳು ಮರುಕಳಿಸದಂತೆ ಸಮಾಜ ಕಲ್ಯಾಣ ಇಲಾಖೆ ಮತ್ತು ಪೊಲೀಸ್ ಇಲಾಖೆಗಳು ಪರಿಶಿಷ್ಟರ ಕಾಳಜಿ ಪೂರಕವಾಗಿ ಕೆಲಸಮಾಡಬೇಕಾಗಿದೆ. ಡಾ. ಬಿ. ಆರ್ ಅಂಬೇಡ್ಕರ್ ಅವರ ಆಶಯದಂತೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸಾಮಾಜಿಕ ನ್ಯಾಯ ದೊರಯಬೇಕು ಆದರೆ ಸಮಾಜದಲ್ಲಿ ಇನ್ನು ಕಟಿಂಗ್ ಮಾಡಲು ಪ್ರವೇಶ ನಿರಾಕರಣೆ, ಹೋಟೆಲ್ ಪ್ರವೇಶ ನಿರಾಕರಣೆ, ದೇವಸ್ಥಾನಕ್ಕೆ ಪ್ರವೇಶ ನಿಷೇಧ, ಹೀಗೆ ಹಲವಾರು ರೀತಿಯಲ್ಲಿ ಪರಿಶಿಷ್ಟ ಸಮುದಾಯಕ್ಕೆ ತೊಂದರೆ ಅನುಭವಿಸುತ್ತಿದ್ದಾರೆ ಈ ವಿಷಯದ ಬಗ್ಗೆ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕು ಎಂದರು.
ಆದ್ದರಿಂದ ಕೂಡಲೇ ಮೃತ ಯಮನೂರಪ್ಪ ಕುಟುಂಬಕ್ಕೆ ಕರ್ನಾಟಕ ಸರಕಾರ 50 ಲಕ್ಷ ಪರಿಹಾರ ನೀಡಬೇಕು, ಮೃತನ ಸಹೋದರನಿಗೆ ಸರಕಾರಿ ಹುದ್ದೆ ನೀಡಬೇಕು ಎಂದು ಈ ಮೂಲಕ ಒತ್ತಾಯಿಸುತ್ತೇನೆ
ಈ ಸಂದರ್ಭದಲ್ಲಿ ಮಾರುತಿ ಗೌರಾಳ, ಸಿದ್ದು ಮಣ್ಣಿನವರ್ , ಸಂಗಪ್ಪ ಜೋಗನ್ನವರ್, ದುರ್ಗಪ್ಪ ಮೆಂಬರ್, ರಾಘು , ಅನೇಕ ಮುಖಂಡರು ಇದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: