ಉರಿವ ಜೀವದೊಡಲು ಪುಸ್ತಕ ಲೋಕಾರ್ಪಣೆ- ಸನ್ಮಾನ

Get real time updates directly on you device, subscribe now.


ಕೊಪ್ಪಳ : ಶ್ರೀ ಗಣಪತಿ ವಾಣಿಜ್ಯ ಮತ್ತು ಗಣಕ ಶಿಕ್ಷಣ ಸಂಸ್ಥೆ ಕೊಪ್ಪಳ ಮತ್ತು ಶ್ರೀ ಗಣಪತಿ ಪ್ರಕಾಶನ ಕೊಪ್ಪಳ ಇವರ ಸಹಯೋಗದೊಂದಿಗೆ ಜುಲೈ ೨೦೨೩ರ ವಾಣಿಜ್ಯ ಪರೀಕ್ಷೆ ಕುಳಿತವರಿಗೆ ಬೀಳ್ಕೊಡುಗೆ ಸಮಾರಂಭ ಮತ್ತು ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ಪುಷ್ಪಲತಾ ರಾಜಶೇಖರ ಏಳುಭಾವಿ ಇವರ ಉರಿವ ಜೀವದೊಡಲು ಪುಸ್ತಕ ಲೋಕಾರ್ಪಣೆ ಸಮಾರಂಭವನ್ನು ಶ್ರೀ ಗಣಪತಿ ವಾಣಿಜ್ಯ ಮತ್ತು ಕಂಪ್ಯೂಟರ್ ತರಬೇತಿ ಸಂಸ್ಥೆ  ಕಟ್ಟಡದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಪತ್ರಕರ್ತ ಸಿರಾಜ್ ಬಿಸರಳ್ಳಿ, ಫಕೀರಪ್ಪ ವಜ್ರಬಂಡಿ ನೇರವೇರಿಸಿದರು. ಇದೇ ಸಂದರ್ಭದಲ್ಲಿ ಪುಷ್ಪಲತಾ ರಾಜಶೇಖರ ಏಳುಭಾವಿ ಇವರು ಬರೆದ ಉರಿವ ಜೀವದೊಡಲು ಕವನ ಸಂಕಲನವನ್ನು ಲೋಕಾರ್ಪಣೆ ಮಾಡಿದರು. ಪುಸ್ತಕದ ಕುರಿತು ಸಿರಾಜ್ ಬಿಸರಳ್ಳಿ ಮಾತನಾಡಿದರು.

ವಿದ್ಯಾಲಯ ನಡೆದು ಬಂದ ಹಾದಿಯ ಬಗ್ಗೆ ಸಂಸ್ಥೆಯ ಪ್ರಾಚಾರ್ಯ ರಾಜಶೇಖರ ಏಳುಭಾವಿ ಮಾತನಾಡಿದರು. ಫಕೀರಪ್ಪ ವಜ್ರಬಂಡಿ, ಕೋಮಲಾ ಕುದರಿಮೋತಿ, ಆರತಿ ಸಜ್ಜನ, ಶಿವಪ್ರಸಾದ ಹಾದಿಮನಿ, ಗವಿಸಿದ್ಧಪ್ಪ ಬಾರಕೇರ, ಶ್ರೀನಿವಾಸ ಚಿತ್ರಗಾರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ನಿರೂಪಣೆಯನ್ನು ಶ್ರೀಮತಿ ಪುಷ್ಪಲತಾ ರಾಜಶೇಖರ ಏಳುಭಾವಿ, ಅಕ್ಷತಾ ಲೇಬಗೇರಿ ಇವರು ಸ್ವಾಗತ ಗೀತೆ ಹಂಸಾ ಪುನೀತಕುಮಾರ ಏಳುಭಾವಿರವರು ಸ್ವಾಗತ ಕೋರಿದರು.
ಕಳೆದ ಜುಲೈ ೨೦೨೩ರ ವಾಣಿಜ್ಯ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಪಡೆದವರಿಗೆ ಮತ್ತು ವಿದ್ಯಾಲಯದಲ್ಲಿ ಪ್ರಥಮ ಸ್ಥಾನ ಪಡೆದವರಿಗೂ ಸನ್ಮಾನ ಮಾಡಲಾಯಿತು. ವಿದ್ಯಾಲಯದ ಪರವಾಗಿ ಸಂಸ್ಥೆಯ ಪ್ರಾಚಾರ್ಯರಿಗೂ ಮತ್ತು ಪುಷ್ಪಲತಾ ಏಳುಭಾವಿ ರವರಿಗೆ ವಿದ್ಯಾರ್ಥಿಗಳು ಸನ್ಮಾನ ಮಾಡಿದರು. ಕು. ಅಕ್ಷತಾ ಲೇಬಗೇರಿ, ಕು. ಯುಲ್ಲಮ್ಮ, ಕು. ಸಂಗೀತಾ ಬಗನಾಳ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕು. ಯಲ್ಲಮ್ಮ ವಂದನಾರ್ಪಣೆಗೈದರು.

Get real time updates directly on you device, subscribe now.

Comments are closed.

error: Content is protected !!