ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಧಾನಿ ಮೋದಿ ಕೊಡುಗೆ ಶೂನ್ಯ- ಶಾಸಕ ಕೆ.ರಾಘವೇಂದ್ರ ಹಿಟ್ನಾಳ

Get real time updates directly on you device, subscribe now.

ನಿರುದ್ಯೋಗದಲ್ಲಿ ಜಗತ್ತಿನಲ್ಲೇ ದೇಶ  ನಂಬರ್ ಒನ್

– ರಾಜ್ಯದ ಜನತೆಗೆ ನೀಡಿದ ಭರವಸೆ ಉಳಿಸಿಕೊಳ್ಳುತ್ತೇವೆ

– ವಿವಿಧ ಗ್ರಾಮದಲ್ಲಿ ಶಾಸಕರಿಂದ ಕೃತಜ್ಞತಾ ಮತ್ತು ಅಹವಾಲು ಸ್ವೀಕಾರ ಸಮಾರಂಭ

 

ಕೊಪ್ಪಳ:

ದೇಶದಲ್ಲಿ ಅಚ್ಛೇ ದಿನ್ ಬರಲಿದೆ ಎಂಬ ಪ್ರಧಾನಿ ಮೋದಿ ಅವರ ಮಾತುಗಳು ಕೇವಲ ಭಾಷಣಕ್ಕೆ ಸಿಮೀತವಾಗಿದ್ದು, ದೇಶದಲ್ಲಿ ಉದ್ಯೋಗ ಸೃಷ್ಟಿ, ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು.

 

ತಾಲೂಕಿನ ಹಿರೇಸಿಂದೋಗಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಕಾತರಕಿ-ಗುಡ್ಲಾನೂರು, ಬೇಳೂರು, ಡಂಬ್ರಳ್ಳಿ, ಬೂದಿಹಾಳ, ಬಿಸರಳ್ಳಿ, ಬಿಕನಳ್ಳಿ, ಮೈನಳ್ಳಿ, ಹಂದ್ರಾಳ, ಹಣವಾಳ ಹಾಗೂ ವದಗನಾಳ ಗ್ರಾಮಗಳಲ್ಲಿ ಸೋಮವಾರ ಹಮ್ಮಿಕೊಂಡ ಕೃತಜ್ಞತಾ ಹಾಗೂ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

 

ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಕೊಡುಗೆ ಶೂನ್ಯ. ಮೋದಿ ಅವರು ಅಧಿಕಾರಕ್ಕೆ ಬಂದಾಗ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದರೂ, ಈವರೆಗೂ ಶೇ.1ರಷ್ಟೂ ಭರವಸೆ ಈಡೇರಿಲ್ಲ. ರೈತರ ಹಿತಕ್ಕಿಂತ ಕಾರ್ಪೊರೇಟ್ ಸಂಸ್ಥೆಗಳ ಮಾಲೀಕರ ಹಿತವೇ ಮೋದಿಯವರಿಗೆ ಮುಖ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

 

ಸಿದ್ದರಾಮಯ್ಯನವರಿಂದ ಜನಪರ ಯೋಜನೆ ಜಾರಿ:

ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರಕಾರದ ಯೋಜನೆ ತಲುಪಬೇಕು ಎಂಬ ಉದ್ದೇಶದಿಂದ ಅನೇಕ ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸಿದ ಕೀರ್ತಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ.

ಶಕ್ತಿ ಯೋಜನೆಯಿಂದ ದೇವಸ್ಥಾನಕ್ಕೆ ದೇಣಿಗೆ ಹರಿದುಬರುತ್ತಿದೆ, ಪ್ರವಾಸಕ್ಕೂ ಉತ್ತೇಜನ ಸಿಕ್ಕಂತಾಗಿದೆ. ಆದರೆ, ಬಿಜೆಪಿಯವರು ಮಾತ್ರ ಶಕ್ತಿ ಯೋಜನೆ ಬಗ್ಗೆ ಅಪಹಾಸ್ಯ ಮಾಡುತ್ತಿದ್ದಾರೆ. ಇವರಿಗೆ ನಮ್ಮ ಸರ್ಕಾರದ ಬಗ್ಗೆ ಮಾತನಾಡುವ, ಪ್ರಶ್ನಿಸುವ ಯಾವ ನೈತಿಕತೆ ಇಲ್ಲ ಎಂದರು.

 

2013ರಲ್ಲಿ ಸಿದ್ದರಾಮಯ್ಯನವರು 165 ಆಶ್ವಾಸನೆಗಳ ಪೈಕಿ ಬಹುತೇಕ ಯೋಜನೆ ಜಾರಿಗೊಳಿಸಿ, ಪ್ರತಿ ಕುಟುಂಬಕ್ಕೂ ಸರ್ಕಾರದ ಸೌಲಭ್ಯ ಕಲ್ಪಿಸಿದ್ದಾರೆ. ಅನ್ನಭಾಗ್ಯ ಯೋಜನೆ ಜಾರಿಗೆ ಬಂದು ಹತ್ತು ವರ್ಷ ಪೂರೈಸಿದ್ದು, ಸಿದ್ದರಾಮಯ್ಯನವರ ಜನಪ್ರಿಯ ಯೋಜನೆ ಸದಾಕಾಲ ಅಚ್ಚಳಿಯದೆ ಜನಮಾನಸದಲ್ಲಿ ಉಳಿಯಲಿದೆ. ನಮ್ಮದು ನುಡಿದಂತೆ ನಡೆದ ಸರ್ಕಾರ. ರಾಜ್ಯದ ಜನತೆಗೆ ನೀಡಿದ ಎಲ್ಲ ಐದು ಗ್ಯಾರಂಟಿಗಳನ್ನು ಐದು ವರ್ಷವೂ ಈಡೇರಿಸುತ್ತೇವೆ. ಜನತೆಗೆ ಸುಳ್ಳು, ಮೋಸ ಮಾಡುವ ಜಾಯಾಮಾನ ನಮ್ಮದಲ್ಲ. ಅದು ಏನಿದ್ದರೂ ಬಿಜೆಪಿ ನಾಯಕರದ್ದು ಎಂದರು.

 

ಇಂದಿನಿಂದ ಅನ್ನಭಾಗ್ಯ ಯೋಜನೆಯಡಿ ಪ್ರತಿ ಕುಟುಂಬದ ಸದಸ್ಯರಿಗೆ ಐದು ಕೆಜಿ ಅಕ್ಕಿ ಹಾಗೂ 175 ರೂ., ನಗದು ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡುತ್ತೇವೆ. ಅನ್ನಭಾಗ್ಯ ಯೋಜನೆಯಡಿ ರಾಜ್ಯದ 1.20 ಕೋಟಿ ಕುಟುಂಬಗಳಿಗೆ ಅನುಕೂಲವಾಗಲಿದೆ. ಐದು ಗ್ಯಾರಂಟಿಗಳನ್ನು ಪ್ರತಿ ಮನೆಗೆ ತಲುಪಿಸುವ ಕೆಲಸವನ್ನು ಸಂಬಂಧಿಸಿದ ಅಧಿಕಾರಿಗಳು ಮಾಡಬೇಕು. ಯಾರೊಬ್ಬರೂ ಸರಕಾರದ ಯೋಜನೆಯಿಂದ ದೂರು ಉಳಿಯುವಂತಾಗಬಾರದು ಎಂದು ಸಲಹೆ ನೀಡಿದರು.

ಆರೋಗ್ಯ ಕ್ಷೇತ್ರದ ಸುಧಾರಣೆಗೆ ಆದ್ಯತೆ: ಕ್ಷೇತ್ರದ ಜನರ ಆರೋಗ್ಯದ ಹಿತದೃಷ್ಟಿಯಿಂದ ಈ ಬಾರಿಯ ಬಜೆಟ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು

ಜಿಲ್ಲಾಸ್ಪತ್ರೆಯ 450 ಹಾಸಿಗೆಯ ಉನ್ನತಿಕರಣಕ್ಕೆ ಅನುದಾನ ನೀಡಿದ್ದಾರೆ. ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರ ಮೇಲ್ದರ್ಜೆಗೆರಿಸಲು ಈಗಾಗಲೇ ಸರ್ಕಾರಕ್ಕೆ ಮನವಿ ಮಾಡಿದ್ದು, ಶೈಕ್ಷಣಿಕ ವರ್ಷದಲ್ಲೇ ಮೇಲ್ದರ್ಜೆಗೆ ಏರಿಸಲಾಗುವುದು ಎಂದರು.

 

ಕ್ಷೇತ್ರದ ಅಭಿವೃದ್ಧಿಗೆ ಈ ಐದು ವರ್ಷದಲ್ಲಿ ಸಾವಿರಾರು ಕೋಟಿ ಅನುದಾನ ಬಿಡುಗಡೆಗೊಳಿಸುವ ಮೂಲಕ ಬಾಕಿ ಉಳಿದ ಎಲ್ಲ ರಸ್ತೆ, ನೀರಾವರಿ ಯೋಜನೆ, ಶಾಲಾ ಕೊಠಡಿ, ಕುಡಿಯುವ ನೀರಿಗೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು ಎಂದರು.

 

 

 

 

ನಿರುದ್ಯೋಗದಲ್ಲಿ ನಮ್ಮ ದೇಶ ಪ್ರಥಮ ಸ್ಥಾನಕ್ಕೆ ತಂದಿರುವುದೇ ಮೋದಿಯ ದೊಡ್ಡ ಸಾಧನೆಯಾಗಿದೆ.

ಪಕೋಡ, ಚಹಾ ಮಾರಾಟ ಮಾಡಿ ಎನ್ನುವ ಮೋದಿಗೆ ಯುವಕರಿಗೆ ಯಾಕೆ ಉದ್ಯೋಗ ನೀಡಲಿಲ್ಲ. ರಾಜ್ಯದಲ್ಲಿ ಮೋದಿ ಮೋದಿ ಎಂದು ಘೋಷಣೆ ಕೂಗುವವರೇ ಇಲ್ಲದಂತಾಗಿದೆ. ಸಧ್ಯ ರಾಜ್ಯದಲ್ಲಿ  ಮೋದಿಯವರ ಬಂಡವಾಳ  ಕಳಚಿದೆ. ಮುಂದೆ ದೇಶದ ಎಲ್ಲ ರಾಜ್ಯದಲ್ಲೂ ಕಳಚಲಿದೆ.

ಕೆ.ರಾಘವೇಂದ್ರ ಹಿಟ್ನಾಳ, ಶಾಸಕರು, ಕೊಪ್ಪಳ

Get real time updates directly on you device, subscribe now.

Comments are closed.

error: Content is protected !!
%d bloggers like this: