ಚಲುವಾದಿ ಸಮುದಾಯದ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ 

Get real time updates directly on you device, subscribe now.

ಕೊಪ್ಪಳ : ಚಲುವಾದಿ ಸಮುದಾಯದ ಹೆಚ್ಚು ಅಂಕ ಪಡೆದುಕೊಂಡು ಉತ್ತಿರ್ಣ ರಾದ ಮಕ್ಕಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ಮಾಡುವ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಮುಖಂಡ ಕಾಶಪ್ಪ ಚಲವಾದಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
      ಮುಂದಿನ ಪೂರ್ವ ಭಾವಿ ಸಭೆಯಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭದ ಸ್ಥಳ ಮತ್ತು ದಿನಾಂಕ ನಿಗದಿ ಪಡಿಸಲಾಗುವುದು. ಛಲವಾದಿ ಮಹಾಸಭಾದ ವತಿಯಿಂದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಉತ್ತಮ ಅಂಕಗಳನ್ನು ಪಡೆದ ಮಕ್ಕಳಿಗೆ ಜಿಲ್ಲಾ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಯಲಬುರ್ಗಾ, ಕುಷ್ಟಗಿ, ಕುಕನೂರು,ಗಂಗಾವತಿ, ಕಾರಟಗಿ,ಕನಕಗಿರಿ ತಾಲೂಕಿನಿಂದ ಛಲವಾದಿ ಸಮುದಾಯದ ಸರ್ವ ಸದಸ್ಯರು ಆಗಮಿಸಿ ಸಲಹೆ ಸೂಚನೆ ನೀಡಿ ಯಶಸ್ವಿಗೊಳಿಸಿದರು.ಈ ಸಂದರ್ಭದಲ್ಲಿ ಸಮುದಾಯದ ಮುಖಂಡರಾದ ಗವಿಸಿದ್ದಪ್ಪ ಬೆಲ್ಲದ್,ಕೃಷ್ಣ ಇಟ್ಟಂಗಿ, ಯಲ್ಲಪ್ಪ ಬಳಗನೂರು, ಮುತ್ತುರಾಜ್ ಕುಷ್ಟಗಿ, ಕಾಶಪ್ಪ ಚಲವಾದಿ, ರಾಘು ಚಾಕ್ರಿ, ಸೋಮಣ್ಣ ಬಡಗೇರ,ಮಹೇಶ ಇಟಗಿ,ಲಕ್ಷ್ಮಣ್ ಕಾಳೆ,ಛೆತ್ರಪ್ಪ ಮುದೋಳ, ಶಂಕರ್ ಜಕ್ಕಲಿ,ದುರುಗೇಶ ನವಲ ಹಳ್ಳಿ ಅಂದಪ್ಪ ಹಾಳಕೇರಿ,ಬಾಲರಾಜ ಮಂಗಳೂರು, ಹುಸೇನಪ್ಪ ಹಂಚನಾಳ ಮುಂತಾದವರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!