ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರಿಸ್ ಲಿಮಿಟೆಡ್ – ಬೀಡು ಕಬ್ಬಿಣ ಮತ್ತು ಫೌಂಡ್ರಿಯ ಪ್ರಸ್ತಾವಿತ ವಿಸ್ತರಣೆ ಹಾಗೂ ಹೊಸ ಯೋಜನೆಗಳಿಗೆ ಅನುಮತಿ

Get real time updates directly on you device, subscribe now.

Koppal :  ಕಿರ್ಲೋಸ್ಕರ್‌  ಕಾರ್ಖಾನೆಯು ಕೊಪ್ಪಳದ ಬೇವಿನಹಳ್ಳಿ ಗ್ರಾಮದ ಹತ್ತಿರ ಸುಮಾರು ೩೦ ವರ್ಷಗಳ ಹಿಂದೆ ಬೀಡು ಕಬ್ಬಿಣ ಮತ್ತು ಫೌಂಡ್ರಿ ಘಟಕಗಳನ್ನು ಸ್ಥಾಪಿಸಿದ್ದು. ಶ್ರೇಷ್ಠ ಮಟ್ಟದ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಬೀಡು ಕಬ್ಬಿಣ ಮತ್ತು ಕ್ಯಾಸ್ಟಿಂಗ್ಸ್‌ಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ.ಈ ಕಾರ್ಖಾನೆಯು ಉತ್ಪಾದನೆಯನ್ನು ಮಾಡುವುದರಜೊತೆಗೆ ಸಾಂಸ್ಥಿಕ ಸಾಮಾಜಿಕಜವಾಬ್ದಾರಿಯನ್ನು ನಿರ್ವಹಿಸುತ್ತಾ ಬಂದಿದ್ದು, ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯ ಹಾಗೂ ಸಮುದಾಯದಅಭಿವೃದ್ಧಿಗಾಗಿ ಅನೇಕ ಚಟುವಟಿಕೆಗಳನ್ನು ಮಾಡುತ್ತಾ ಬಂದಿದ್ದು ಈ ವಲಯದಲ್ಲಿಅತ್ಯತ್ತಮ ಸಂಸ್ಥೆಯಾಗಿ ಹೊರಹೊಮ್ಮಿದೆ.  ಗ್ರಾಹಕರ ಅತ್ಯಗತ್ಯ ಬೇಡಿಕೆಗಳನ್ನು ಪೂರೈಸಲು ಈ ಕಾರ್ಖಾನೆಯು ಪ್ರಸ್ತುತ ಇರುವ ಬೀಡುಕಬ್ಬಿಣ ಮತ್ತು ಫೌಂಡ್ರಿಯ ಪ್ರಸ್ತಾವಿತ ವಿಸ್ತರಣೆ ಹಾಗೂ ಹೊಸ ಯೋಜನೆಗಳ ಅನುಮತಿಗಾಗಿ ದಿ೦೬ ರಂದು ಯೋಜನೆಯ ಪ್ರಸ್ತಾವಿತ ಪ್ರದೇಶದಲ್ಲಿ ಪರಿಸರ ಸಾರ್ವಜನಿಕ ಆಲಿಕೆ ಸಭೆಯನ್ನುಕರೆಯಲಾಗಿತ್ತು.

ಈ ಸಭೆಗೆ ಕೊಪ್ಪಳದ ಜಿಲ್ಲಾಡಳಿತದ ವತಿಯಿಂದ ಅಪರ ಜಿಲ್ಲಾಧಿಕಾರಿ , ಅಪರ ಜಿಲ್ಲಾದಂಡಾಧಿಕಾರಿ   ಸಿದ್ದರಾಮೇಶ್ವರ,  , ಕರ್ನಾಟಕರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವಿಜಯನಗರದ ವಲಯದ ಹಿರಿಯ ಪರಿಸರ ಅಧಿಕಾರಿಗಳಾದ   ಬಿ. ಎಸ್. ಮುರಳೀಧರ್, ಕೊಪ್ಪಳದ ಪ್ರಾದೇಶಿಕ ಕಛೇರಿಯ ಪರಿಸರ ಅಧಿಕಾರಿಗಳಾದ  .ವೈ.ಎಸ್. ಹರಿಶಂಕರ್, ಕಾರ್ಖಾನೆಯ ಉನ್ನತ ಅಧಿಕಾರಿಗಳು, ಜಿಲ್ಲಾಡಳಿತ ಸಿಬ್ಬಂದಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳಿಂದ ಬಂದ ಪ್ರತಿನಿಧಿಗಳು, ಸ್ಥಳಿಯ ಗ್ರಾಮಗಳ ವಿವಿಧ ನಾಗರೀಕರು, ಸಾರ್ವಜನಿಕರು ಹಾಜರಿದ್ದರು. ವೈ.ಎಸ್. ಹರಿಶಂಕರ್‌ ಇವರು ಪ್ರಸ್ತಾವಿಕ ಭಾಷಣ ಮಾಡಿ ಕಾರ್ಖಾನೆ ವಿಸ್ತರಣೆಯ ಕುರಿತು ವಿವರಿಸಿದರು.ಕಾರ್ಖಾನೆಯ ಪರಿಸರ ಅಧಿಕಾರಿಗಳಾದ  ಮಹಮದ್‌ಅಜೀಜ್ iತ್ತುತಾಂತ್ರಿಕಅಧಿಕಾರಿಯಾದ ಶ್ರೀಕಾಂತ್ ಇವರುಗಳು ಯೋಜಿತ ವಿಸ್ತರಣೆಯ ಕುರಿತು ಸಭೆಗೆ ಮಾಹಿತಿಯನ್ನು ಅಂಕಿ-ಅಂಶಗಳ ಸಹಿತ ವಿವರಿಸಿದರು.

ಯೋಜನೆಯ ವಿಸ್ತರಣೆಯ ಮಾಹಿತಿಯನ್ನು ತಿಳಿಸಿದ ನಂತರ ಪರಿಸರ ಅಧಿಕಾರಿಗಳು ಸಾರ್ವಜನಿಕರಿಂದ ಮನವಿ ಮತ್ತು ಸಲಹೆಗಳನ್ನು ನೀಡಲು ಅವಕಾಶ ಮಾಡಿಕೊಟ್ಟರು.

ಈ ಸಂದರ್ಭದಲ್ಲಿ ಹಾಜರಿದ್ದ ಅನೇಕ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಸಾರ್ವಜನಿಕರು ಮಾತನಾಡಿ ಉದ್ದೇಶಿತ ಯೋಜನೆಗಳಿಗೆ ತಮ್ಮ ಸಹಮತಿ ಇದೆ, ಕಾರಣ ಈ ಯೋಜನೆಗಳು ಅನುಸ್ಠಾನಗೊಂಡಲ್ಲಿ ಈ ಭಾಗದಲ್ಲಿ ಉದ್ಯೋಗಗಳು ಸೃಷ್ಠಿಯಾಗುತ್ತವೆ, ಯುವಕರಿಗೆ ಉದ್ಯೋಗಗಳು ಸಿಗುತ್ತವೆ, ಕಾರ್ಖಾನೆಯ ಸಮುದಾಯದಅಭಿವೃದ್ಧಿಗಾಗಿ ಮಾಡುವ ಕೆಲಸಗಳಿಂದ ಜನರಆರ್ಥಿಕ ಮಟ್ಟ ಹೆಚ್ಚುತ್ತದೆ, ಕಾರಣ ನಮ್ಮ ಸಮ್ಮತಿಇದೆಎಂದು ತಿಳಿಸಿದರು. ಇದರಿಂದರಾಜ್ಯಮತ್ತುಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಕೊಪ್ಪಳ ಜಿಲ್ಲೆಯಿಂದ ಹೆಚ್ಚಿನ ಅನೂಕೂಲವಾಗಲಿದೆ, ಕೊಪ್ಪಳ ಜಿಲ್ಲೆಯ ಸರ್ವಾಂಗೀಣಾಅಭಿವೃದ್ಧಿಗೆ ಸಹಾಯಕವಾಗುತ್ತದೆಎಂದು ತಿಳಿಸಿದರು.

ಕಾಳಿದಾಸ ಶಿಕ್ಷಣ ಸಂಸ್ಥೆ ಕೊಪ್ಪಳ, ಶ್ರೀ ಗ್ರಾಮದೇವತೆ ಸೇವಾ ಸಮಿತಿ, ಹಳೆಕನಕಾಪುರ, ಬಹುಗ್ರಾಮ ಪಂಚಾಯಿತಿಗಳ ತ್ಯಾಜ್ಯ ಸಂಸ್ಕರಣಾಘಟಕಜಂಟಿ ಸಮಿತಿ, ನೀರು ಬಳಕೆದಾರರ ಸಂಘ, ಹುಲಿಗಿ, ಪರಿಸರ ಹಿತರಕ್ಷಣಾ ಸಂಸ್ಥೆಯಾದ ವನಲೋಕ, ಬೆಂಗಳೂರು, ಸರ್ವೋದಯ ಸಮಗ್ರಗ್ರಾಮೀಣಅಭಿವೃದ್ಧಿ ಸಂಸ್ಥೆ, ಕೊಪ್ಪಳ, ಮಾರಿಕಾಂಬ ಗ್ರಾಮೀಣಅಭಿವೃದ್ಧಿ ಮತ್ತು ಮಹಿಳಾ ಶಕ್ತಿ ಸಂಘ, ಹೊಸಪೇಟೆಕರ್ನಾಟಕರಕ್ಷಣಾ ವೇದಿಕೆ, ಪ್ರಣತಿಗ್ರಾಮೀಣಅಭಿವೃದ್ಧಿ ಸಂಸ್ಥೆ, ಬಣವಿಕಲ್ಲು, ದೀಪಾ ಸಂಜೀವಿನಿ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆ, ವಿಜಯನಗರಜಿಲ್ಲಾ ಪರಿಸರ ಸಂರಕ್ಷಣಾ ಸಮಿತಿ, ಧ್ರವ ಪರಿಸರ ಮಾಲಿನ್ಯ ನಿಯಂತ್ರಣ ಸಂರಕ್ಷಣಾ ಸಂಸ್ಥೆ, ಕೊಪ್ಪಳ ಶ್ರೀ ಜಗದ್ಗುರುಅನ್ನದಾನೀಶ್ವರ ವಿದ್ಯಾ ಸಮಿತಿ, ಮುಂಡರಗಿ ಶ್ರೀ ಮಾರುತೇಶ್ವರ ಸೇವಾ ಸಮಿತಿ, ಬೇವಿನಹಳ್ಳಿ ಹಾಗೂ ಹಿಟ್ನಾಳ್ ಗ್ರಾಮ ಪಂಚಾಯತಿಗಳು ಇತ್ಯಾದಿ ಅನೇಕ ಸಂಘ-ಸಂಸ್ಥೆಗಳು ಸಾರ್ವಜನಿಕರು ಪ್ರಸ್ತಾವಿತ ಯೋಜನೆಗಳಿಗೆ ಸಮ್ಮತಿ ಸೂಚಿಸಿ ಮನವಿ ಪತ್ರಗಳನ್ನು ಈ ಸಭೆಯಲ್ಲಿ ನೀಡಿದರು ಹಾಗೂ ಕೆಲವರು ಮಾತನಾಡಿದರು. ಹಾಜರಿದ್ದಇನ್ನೂ ಕೆಲವು ಜನ ಹವಾರು ಬೇಡಿಕೆಗಳಿಗಾಗಿ ಆಗ್ರಹಿಸಿದರು.ಒಟ್ಟಾರೆ ಆಯೋಜಿಸಿದ ಸಭೆಯು ಸಂಪನ್ನವಾಗಿಜರುಗಿತು.

ಈ ಕಾರ್ಯಕ್ರಮವನ್ನುಕಂಪನಿಯ ಮಾನವ ಸಂಪನ್ಮೂಲ, ಆಡಳಿತ, ಇಹೆಚ್‌ಎಸ್ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ   ಪಿ ನಾರಾಯಣರವರು ಅಚ್ಚು ಕಟ್ಟಾಗಿ ರೂಪಿಸಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: