–
ಗಂಗಾವತಿ: ಪ್ರಸಕ್ತ ಸಾಲಿನ ಬಜೆಟ್ ರಾಜ್ಯಾದ್ಯಂತ ಕಾರ್ಮಿಕರ ಬದುಕುಳಿಯುವ ಬಿಕ್ಕಟ್ಟಿನ್ನು ಗುರುತಿಸಿದ್ದರೂ, ಕಾರ್ಮಿಕರು ಅನುಭವಿಸುತ್ತಿರುವ ಕೆಲಸದ ಮತ್ತು ವೇತನ ಅಭದ್ರತೆಯ ಬಗ್ಗೆ ಇನ್ನೂ ಹೆಚ್ಚಿನ ಗಮನವಹಿಸಿಬೇಕಾಗಿತ್ತು ಎಂದು ಸಿಪಿಐ(ಎಂಎಲ್) ಪಕ್ಷ ಒತ್ತಾಯಿಸಿದೆ ಎಂದು ಪಕ್ಷದ ಕೊಪ್ಪಳ ಜಿಲ್ಲಾ ಕಾರ್ಯದರ್ಶಿಯಾದ ವಿಜಯ್ ದೊರೆರಾಜು ಪ್ರಕಟಣೆಯಲ್ಲಿ ತಿಳಿಸಿದರು.
ಮುಂದುವರೆದು ಅವರು ಮಾತನಾಡುತ್ತಾ, ನಿರುದ್ಯೋಗವು ದೊಡ್ಡ ಸಮಸ್ಯೆಯಾಗಿದೆ ಎಂಬುದನ್ನು ಬಜೆಟ್‌ನಲ್ಲಿ ಒಪ್ಪಿಕೊಳ್ಳಲಾಗಿದೆ. ಆದರೆ ಅಭದ್ರ ಉದ್ಯೋಗಗಳು ವ್ಯಾಪಕವಾಗಿವೇ ದೊರಕುತ್ತಿವೆ. ಅದರಲ್ಲೂ ಗುತ್ತಿಗೆ ಕಾರ್ಮಿಕರು, ಗಿಗ್ ವರ್ಕರ್‍ಸ್ ಹಾಗೂ ಇತರ ಕೆಲಸ ಮಾಡುವ ಕಾರ್ಮಿಕರಿಗೆ ಕೆಲಸದ ಭದ್ರತೆ ಮತ್ತು ಉತ್ತಮ ಕೆಲಸದ ವಾತಾವರಣವನ್ನು ಒದಗಿಸಬೇಕು. ಕಾರ್ಮಿಕರ ಕನಿ? ವೇತನವನ್ನು ೩೫ ಸಾವಿರ ರೂಪಾಯಿಗಳಿಗೆ ಹೆಚ್ಚಳ ಮಾಡುವ ನಿರ್ಧಾರವನ್ನು ಕೈಗೊಳ್ಳಬೇಕಾಗಿತ್ತು ಎಂದು ತಿಳಿಸಿದರು. ಮೊದಲನೆ ಹೆಜ್ಜೆಯಾಗಿ ಎಲ್ಲ ಸರಕಾರಿ ಇಲಾಖೆಗಳಲ್ಲಿ, ಕಂಪನಿಗಳಲ್ಲಿ ಮತ್ತು ಏಜೆನ್ಸಿಗಳಲ್ಲಿ ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಬೇಕು. ಹಾಗೆಯೇ ಹಿಂದಿನ ಬಿಜೆಪಿ ಸರಕಾರದ ಕಾರ್ಮಿಕ ವಿರೋಧಿ ನೀತಿ ಮತ್ತು ಕಾನೂನು ತಿದ್ದುಪಡಿಗಳನ್ನು ಹಿಂಪಡೆಯುವ ಕುರಿತು ಯಾವುದೇ ಉಲ್ಲೇಖ ಬಜೆಟ್‌ನಲ್ಲಿ ಇರುವುದಿಲ್ಲ ಎಂದು ಟೀಕಿಸಿದರು. ಚುನಾವಣಾ ಪ್ರಣಾಳಿಕೆಯಲ್ಲಿ ಪ್ರತ್ಯೇಕವಾಗಿ ಘನತ್ಯಾಜ್ಯ ನಿರ್ವಹಣೆಯಲ್ಲಿ ತೊಡಗಿರುವ ಕಸಗುಡಿಸುವವರು, ವಾಹನ ಚಾಲಕರ, ಸಹಾಯಕರು ಮತ್ತು ಒಳಚರಂಡಿ ಕಾರ್ಮಿಕರನ್ನು ಒಳಗೊಂಡಂತೆ ಎಲ್ಲ ಪೌರಕಾರ್ಮಿಕರನ್ನು ಖಾಯಮಾತಿ ಮಾಡುವ ಕುರಿತು ಉಲ್ಲೇಖವಿದ್ದರೂ, ಆ ಕುರಿತು ಬಜೆಟಿನಲ್ಲಿ ಯಾವುದೇ ಕ್ರಮವಹಿಸಿರುವುದಿಲ್ಲ. ಇದನ್ನು ಬಿಟ್ಟು, ಸಂವಿಧಾನಬಾಹಿರವಾಗಿರುವ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಗಮ ನಿಯಮಿತಕ್ಕೆ ೧,೦೦೦ ಕೋಟಿ ರೂಪಾಯಿಗಳ ಮಂಜೂರಾತಿ ಮಾಡಲಾಗಿದೆ ಎಂದು ಹೇಳಿದರು.
Comments are closed.