ಗಂಗಾವತಿ: ಜನಶಕ್ತಿ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ (ರಿ) ಅಡಿಯಲ್ಲಿ ನಡೆಯುತ್ತಿರುವ ತ್ರಿ-ಟಾ ಶಿಕ್ಷಣ ಹಾಗೂ ಔದ್ಯೋಗಿಕ ತರಬೇತಿ ಕೇಂದ್ರ ಸಂಸ್ಥೆಯ ಅಧ್ಯಕ್ಷರು, ಉಪಾಧ್ಯಕ್ಷರು, ಮುಖ್ಯ ಅತಿಥಿಗಳು, ಸದಸ್ಯರು, ವಿದ್ಯಾರ್ಥಿಗಳ ಪಾಲಕ/ಪೋಷಕರು ಪಾಲ್ಗೊಂಡು ಪಂಪಾನಗರ ವೃತ್ತದಲ್ಲಿರುವ ಮಾತೋಶ್ರೀ ಕಾಂಪ್ಲೆಕ್ಸ್‌ನಲ್ಲಿರುವ ಶಿಕ್ಷಣ ಸಂಸ್ಥೆಯ ಮುಂಭಾಗದಲ್ಲಿ ಗಿಡಗಳನ್ನು ನೆಡುವುದು ಹಾಗೂ ಉಚಿತವಾಗಿ ಸಸಿಗಳನ್ನು ವಿತರಿಸುವ ಮೂಲಕ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು ಎಂದು ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಕೆ. ಮಂಜುನಾಥ ಪ್ರಕಟಣೆಯಲ್ಲಿ ತಿಳಿಸಿದರು.
ಮುಂದುವರೆದು ಅವರು ಮಾತನಾಡುತ್ತಾ ಚಂದ್ರಶೇಖರ ಅಡವಿಹಾಳ, ಶಿಕ್ಷಣ ಇಲಾಖೆ, ಕುವೆಂಪು ನಗರ, ಗಂಗಾವತಿ ಇವರು ಶಿಕ್ಷಣ ಪ್ರೇಮಿಗಳಾಗಿದ್ದು, ನಮ್ಮ ಶಿಕ್ಷಣ ಸಂಸ್ಥೆಯ ಕಾರ್ಯವೈಖರಿಯನ್ನು ಪ್ರಶಂಸಿಸಿ ನಮ್ಮ ಶಿಕ್ಷಣ ಸಂಸ್ಥೆಗೆ ಅಲ್ಮಾರ (ಬ್ಯುರೋ) ಕೊಡುಗೆ ನೀಡಿದ್ದು, ಅವರಿಗೆ ಇದೇ ಸಂದರ್ಭದಲ್ಲಿ ನಮ್ಮ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸಿಬ್ಬಂದಿ ವರ್ಗದಿಂದ ಗೌರವಯುತವಾಗಿ ಸನ್ಮಾನ ಮಾಡಲಾಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶಿಕ್ಷಕರು ಹಾಗೂ ಸಾಹಿತಿಗಳಾದ ಲಿಂಗಾರೆಡ್ಡಿ ಆಲೂರು ಹಾಗೂ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ರಾಘವೇಂದ್ರ ಶ್ರೇಷ್ಠಿ ಮತ್ತು ಬಿ. ರಾಮಣ್ಣ ಶಿಕ್ಷಣ ಇಲಾಖೆ ಇವರುಗಳು ಆಗಮಿಸಿದ್ದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶೇಖ್ ನಬಿಸಾಬ, ಉಪಾಧ್ಯಕ್ಷರಾದ ಕೆ. ಮಂಜುನಾಥ, ಕಾರ್ಯದರ್ಶಿಗಳಾದ ದುರ್ಗಾಪ್ರಸಾದ, ಕೋಶಾಧ್ಯಕ್ಷರಾದ ಡಿ.ಆರ್. ಯುನೂಸ್, ಕಾರ್ಯಕಾರಿ ಮಂಡಳಿ ಸದಸ್ಯರಾದ ತಾಜುದ್ದೀನ್, ಅಯೂಬ್ ನಗರಿ, ಪಾಲಕರಾದ ಪಂಪನಗೌಡ್ರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Sign in
Sign in
Recover your password.
A password will be e-mailed to you.
Get real time updates directly on you device, subscribe now.
Comments are closed.