ಮಿಲಾನ್ ಫೌಂಡೇಶನ್ ವತಿಯಿಂದ ಗರ್ಲ್ ಐಕಾನ್ ಮಕ್ಕಳಿಗೆ ಉಚಿತ ಕಲಿಕಾ ಕಿಟ್ ವಿತರಣೆ

Get real time updates directly on you device, subscribe now.

ಕೊಪ್ಪಳ: ಮಿಲಾನ್ ಫೌಂಡೇಶನ್ ವತಿಯಿಂದ ಕೊಪ್ಪಳ ಹಾಗೂ ರಾಯಚೂರ್ ಜಿಲ್ಲೆಯ ಗರ್ಲ್ ಐಕಾನ್ ಹೆಣ್ಣು ಮಕ್ಕಳಿಗೆ ಕೌಶಲ್ಯ ತರಬೇತಿ ಹಾಗೂ ಶಿಕ್ಷಣ ಪೂರಕವಾದ ಕಲಿಕಾ ಕಿಟ್ ಉಚಿತವಾಗಿ ವಿತರಿಸಲಾಯಿತು. ನಗರದ ವಿದ್ಯಾ ಸರಸ್ವತಿ ಪ್ರಾಥಮಿಕ ಶಾಲೆ ನಂದಿನಗರ ಈ ಕಾರ್ಯಕ್ರಮ ಜರುಗಿತು. ಕೊಪ್ಪಳ ನಲ್ಲಿ ಮಿಲಾನ್ ಫೌಂಡೇಶನ್ ನ ಯೋಜನೆ ಸಂಯೋಜಕರಾದ ಪೂಜಾ ಎಂ ಗಡಗಿ ನೇತೃತ್ವದಲ್ಲಿ ಕಾರ್ಯಕ್ರಮ ಮೂಡಿಬಂದಿತು. 14 ರಿಂದ 18 ವರ್ಷದ ಬಾಲಕಿಯರನ್ನು ಗರ್ಲ್ ಐಕಾನ್ ಅಂತ ಆಯ್ಕೆ ಮಾಡಿಕೊಳ್ಳುವ ಮೂಲಕ ಅವರಿಗೆ ಕೌಶಲ್ಯ ತರಬೇತಿ ಮತ್ತು‌ ಕಲಿಕಾ ಕಿಟ್ ನೀಡಲಾಯಿತು. ಈ ಕಾರ್ಯಕ್ರಮಕ್ಕೆ ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯಿಂದ ಬಂದ 86 ಕ್ಕೂ ಅಧಿಕ ಹೆಣ್ಣು ಮಕ್ಕಳಿಗೆ ಮೊಬೈಲ್, ಬುಕ್ಸ್, ಬ್ಯಾಕ್, ಪೆನ್, ಟಿ ಶರ್ಟ್, ಐಡಿ ಕಾರ್ಡ್ ಗಳನ್ನು ಉಚಿತವಾಗಿ ನೀಡಲಾಯಿತು. ಈ ವೇಳೆ ಯೋಜನೆ ಸಂಯೋಜಕರಾದ ಪೂಜಾ ಎಂ ಗಡಗಿ ಮಾತನಾಡಿ ಗ್ರಾಮೀಣ ಭಾಗದ ಬಡ ಹೆಣ್ಣು ಮಕ್ಕಳು ಯಾವುದರಲ್ಲೂ ಕಡಿಮೆ ಇಲ್ಲ ಎಂಬುದನ್ನು ಹೇಳಿ ಕೊಡುವ ಮೂಲಕ ಬಾಲಕಿಯರಿಗೆ ಪ್ರೋತ್ಸಾಹಿಸಿದರು. ಮಿಲಾನ್ ಪೌಂಡೇಶನ್ 2007 ರಲ್ಲಿ ಅಸ್ತಿತ್ವಕ್ಕೆ ಬಂದಿತು. ಈ ಸಂಸ್ಥೆಯು ಸಾಮಾಜಿಕ ಅಭಿವೃದ್ಧಿ ಸಂಸ್ಥೆಯಾಗಿದ್ದು, ಕಿಶೋರಿಯರ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚು ಪ್ರೋತ್ಸಾಹಿಸಲಿದೆ. ಮಹಿಳೆಯರ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ಮತ್ತು ಅವರ ಕನಸುಗಳನ್ನು ನನಸಾಗಿಸುವಲ್ಲಿ ಈ ಸಂಸ್ಥೆಯು ಸಹಾಯಕವಾಗಿದೆ ಎಂದರು. ಸುರಕ್ಷಿತ, ಆರೋಗ್ಯವಂತ ಮತ್ತು ವಿದ್ಯಾವಂತ ಸಮಾಜದವನ್ನು ಸೃಷ್ಟಿಮಾಡುವಲ್ಲಿ ಮಿಲಾನ್ ಕಿಶೋರಿಯರಿಗೆ ಮಹತ್ವ ಪೂರ್ಣವಾಗಿ ಸಹಾಯವನ್ನು ಒದಗಿಸುತ್ತಿದೆ. ಮಿಲಾನ್ ಫೌಂಡೇಶನ್ ಕಳೆದ 17 ವರ್ಷಗಳಿಂದ ಭಾರತದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಬಾಲಕಿಯರ ಸಬಲೀಕರಣದ ಮೇಲೆ ಗಮನ ಕೇಂದ್ರೀಕರಿಸಿ, ಪ್ರಸ್ತುತ ಈ ಸಂಸ್ಥೆಯ ಕಾರ್ಯಕ್ಷೇತ್ರವು ಮೂರು ರಾಜ್ಯಗಳಲ್ಲಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಕರ್ನಾಟಕ ರಾಜ್ಯದಲ್ಲಿ ಬೇರೆ ಬೇರೆ ಸ್ಥಳಗಳ ಮೂಲಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದೆ ಎಂದರು.

ನಂತರ ಯೋಜನೆ  ಸಂಯೋಜಕರಾದ ಪೂಜಾ ಎಂ ಗಡಗಿ ಮಾತನಾಡಿ, ಹೆಣ್ಣು ಮಕ್ಕಳು ಅಬಲೆಯರಲ್ಲ ಸಬಲೆಯರು ಎಂಬುದರ ಬಗ್ಗೆ ಪ್ರಸ್ತಾಪಿಸಿದರು. ಈ ಮಿಲಾನ್ ಫೌಂಡೇಶನ್ ಕರ್ನಾಟಕದಲ್ಲಿ 2017 ರಲ್ಲಿ ಸ್ಥಾಪಿತವಾಯಿತು. ಅಂದಿನಿಂದ ಇಂದಿನ ವರೆಗೆ ಸಾವಿರಾರು ಹೆಣ್ಣು ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. 14 ವರ್ಷದಿಂದ 18 ವರ್ಷದ ಒಳಗಿನ ಬಾಲಕಿಯರಿಗೆ ಕೌಶಲ್ಯ ತರಬೇತಿ ನೀಡುವ ಮೂಲಕ ಶಿಕ್ಷಣಕ್ಕೆ ಉಪಯೋಗವಾಗುವಂತಹ ಕಿಟ್ ನೀಡಲಾಗುತ್ತದೆ. ಈಗೀನ‌ ಜಮಾಣದಲ್ಲಿ ಮಹಿಳೆಯರು ಹೇಗಿರಬೇಕು? ಅವರ ಪಾತ್ರ ಏನು? ಆರೋಗ್ಯದಲ್ಲಿ ಹೇಗಿರಬೇಕು? ಅವರ ಸುರಕ್ಷತೆ ಏನು ಎಂಬುದನ್ನು ತೋರಿಸಿಕೊಡಲು ಈ ಕಾರ್ಯಗಾರ ನಡೆಯಿತು ಎಂದರು. ಮಹಿಳೆ ಕೇವಲ ಭೋಗದ ವಸ್ತುವಲ್ಲ. ಅವಳು ಅಡುಗೆ ಮನೆಗೆ ಸೀಮಿತಳಲ್ಲ. ಹೆಣ್ಣು ಜಗದ ಕಣ್ಣು‌ ಎಂಬುದನ್ನು ತೋರಿಸಿಕೊಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಜರುಗಿಸಲಾಗುತ್ತಿದೆ. ಗ್ರಾಮೀಣ ಅದರಲ್ಲೂ ಬಡ ಹೆಣ್ಣು ‌ಮಕ್ಕಳ ಶಿಕ್ಷಣಕ್ಕೆ ಅನುಕೂಲ ಆಗಲೆಂದು ಆಯಾ ಕೋರ್ಸ್ ಗಳಿಗೆ ಅನುಗುಣವಾಗಿ ಸ್ಕಾಲರ್ಶಿಪ್, ಮೊಬೈಲ್, ಬುಕ್ಸ್, ಬ್ಯಾಗ್, ಡ್ರೆಸ್ ಕಿಟ್ ಗಳನ್ನು ಸಹ ನೀಡಲಾಗ್ತಿದೆ. ಗರ್ಲ್ ಐಕಾನ್ ಮಹಿಳೆಯರು ಅಭಿವೃದ್ಧಿ ಹೊಂದಲು ರಾಜ್ಯಮಟ್ಟದ ಹಾಗೂ ರಾಷ್ಟ್ರಮಟ್ಟಕ್ಕೆ ತಲುಪಲು ಜೊತೆಗೆ ಸುರಕ್ಷಿತ ಮತ್ತು ಸಮಾನ ವೇದಿಕೆ ಕಲ್ಪಿಸಿ ಕೊಡುವಲ್ಲಿ ಪ್ರಯತ್ನ ನಡೆಸಿದೆ ಎಂದರು. ಈ ವೇಳೆ ಯೋಜನೆ ಸಂಯೋಜಕರಾದ ಲಕ್ಷ್ಮೀ ಪವಾರ್, ಯೋಜನೆ ಸಹಾಯಕರಾದ  ರಾಧಿಕಾ,  ವಿದ್ಯಾ, ಈಶ್ವರಿ, ರೋಶನಿ, ರಕ್ಷಿತಾ, ಸಾವಕ್ಕ, ಕೊಂತೆಮ್ಮ, ಸಿಂಧು, ಸೌಮ್ಯ, ದೀಪಾ, ಅಮೂಲ್ಯ, ಸೇರಿದಂತೆ ಅನೇಕ ಸಿಬ್ಬಂದಿಗಳು, ಗರ್ಲ್ ಐಕಾನ್ಸ್ ಹಾಗೂ ಪಾಲಕರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!