ಕ್ರಾಂತಿಕಾರಿ ನಾಯಕ ಚಾರು ಮಜೂಂದಾರ್ ಸ್ಮರಣೆ ದಿನ
ಗಂಗಾವತಿ: ನಗರದ ಸಿ.ಪಿ.ಐ.ಎಂ.ಎಲ್ ಕಛೇರಿಯಲ್ಲಿ ಜುಲೈ-೨೮ ರಂದು ನಕ್ಸಲ್‌ಬಾರಿ ಚಳುವಳಿಯ ನಾಯಕ ಮತ್ತು ಸಿಪಿಐ(ಎಂ.ಎಲ್) ಮೊದಲ ಪ್ರಧಾನ ಕಾರ್ಯದರ್ಶಿ ಕಾ|| ಚಾರು ಮಜುಂದಾರ್ ಅವರ ಹುತಾತ್ಮ ದಿನಾಚರಣೆ ಹಾಗೂ ಸಿ.ಪಿ.ಐ.ಎಂ.ಎಲ್ ಪಕ್ಷ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ವಿಜಯ ದೊರೆರಾಜು ಪ್ರಕಟಣೆಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಹೋರಾಟಗಾರರಾದ ಕಾ|| ಭಾರದ್ವಾಜ್‌ರವರು, ಚಾರು ಮಜುಂದಾರ್ ಅವರನ್ನು ಕೋಲ್ಕತ್ತಾ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಚಿತ್ರಹಿಂಸೆ ನೀಡಿ ಕೊಲ್ಲಲಾಯಿತು. ಬ್ರಿಟೀ? ವಸಾಹತುಶಾಹಿಗಳ ವಿರುದ್ಧದ ವಿಮೋಚನಾ ಹೋರಾಟದ ದಿನಗಳಿಂದ ಹತ್ತಾರು ಸಾವಿರ ಒಡನಾಡಿಗಳು, ಊಳಿಗಮಾನ್ಯ ವಿರೋಧಿ ಹೋರಾಟಗಳಲ್ಲಿ, ಹಾಗೆಯೇ ನಕ್ಸಲ್‌ಬಾರಿ ದಂಗೆಯ ಸಮಯದಲ್ಲಿ ಸಾವಿರಾರು ಒಡನಾಡಿಗಳು ಈ ಸುದೀರ್ಘ ಹೋರಾಟದಲ್ಲಿ ಈ ಎಲ್ಲಾ ಹುತಾತ್ಮರನ್ನು ಮತ್ತು ಲಕ್ಷಾಂತರ ಜನರು ಚಿತ್ರಹಿಂಸೆ ಮತ್ತು ಜೈಲುವಾಸವನ್ನು ಎದುರಿಸಿದರು. ಈ ಎಲ್ಲಾ ಹುತಾತ್ಮರಿಗೆ ಕೆಂಪು ನಮನಗಳನ್ನು ತಿಳಿಸಿದರು.
ಸಣ್ಣ ಹನುಮಂತಪ್ಪ ಹುಲಿಹೈದರ್ ಮಾತನಾಡಿ ಚಾರು ಮಜುಂದಾರ್‌ರವರು ಸಾವಿರಾರು ಎಕರೆ ಭೂಮಿಯನ್ನು ಬಡವರಿಗೆ ದಾನ ಮಾಡಿ ಹಳ್ಳಿ, ಹಳ್ಳಿ ಸುತ್ತಿ ದುಡಿಯುವ ವರ್ಗದ ಜನರ ಪರ ಹೋರಾಟ ನಡೆಸಿದ ಮಹಾನ್ ಕ್ರಾಂತಿಕಾರಿಗಳಿಗೆ ಕೆಂಪು ವಂದನೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಪರಶುರಾಮ್, ಬಾಬರ್, ರಮೇಶ ಕೆ, ಅಬ್ದುಲ್, ಗಿಡ್ಡಪ್ಪ, ಹನುಮಂತಪ್ಪ, ಪರಮೇಶಿ, ಹುಸೇನ್ ಭಾ? ಗೋವಾ, ಗೌಸ್, ಚಿತ್ತುಸಾಬ, ಹನುಮಂತ ಮಲ್ಲಾಪುರ ಇತರೆ ನೂರಾರು ಜನ ಕಾರ್ಯಕರ್ತರು ಭಾಗವಹಿಸಿದ್ದರು.
Comments are closed.