ನಿವೇಶನ ರಹಿತರಿಂದ ತಹಶೀಲ ಕಛೇರಿ ಮುಂದೆ ಧರಣಿ

Get real time updates directly on you device, subscribe now.

 

ಕೊಪ್ಪಳ: ರಾಜೀವ್ ಗಾಂಧಿ ವಸತಿ ನಿಗಮದ ವೆಬ್ಸೈಟ್ ಕೀಲಿ ತೆಗಿ ಅರ್ಜಿ ತಗೋ ಎಂದು ನಿವೇಶನ ರಹಿತರಿಂದ ತಹಶೀಲ ಕಛೇರಿ ಮುಂದೆ ಸೋಮವಾರ ನಿವೇಶನ ಮತ್ತು ವಸತಿ ರಹಿತರ ಹೋರಾಟ ಸಮಿತಿ ನೇತೃತ್ವದಲ್ಲಿ ಧರಣಿ ನಡೆಸಿ ತಹಶೀಲ್ದಾರರ ಅನುಪಸ್ಥಿತಿಯಲ್ಲಿ ತಹಶೀಲ್ದಾರ್ ಗ್ರೇಡ್ 2 ಗವಿಸಿದ್ದಪ್ಪ ಮಣ್ಣೂರ್ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದರು.

 

ಮನವಿಯಲ್ಲಿ ನಿವೇಶನ ಮತ್ತು ವಸತಿ ರಹಿತರ ಹೋರಾಟ ಸಮಿತಿಯ ತಾಲೂಕಾ ಸಮಿತಿ ತಮ್ಮ ಗಮನಕ್ಕೆ ತರಬಯಸುವುದೇನೆಂದರೆ ರಾಜೀವ್ ಗಾಂಧಿ ವಸತಿ ನಿಗಮದ ವೆಬ್ಸೈಟ್ ಲಾಕ್ ಆಗಿದೆ ಎಂದು ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಮಾಹಿತಿ ನೀಡುತ್ತಿದ್ದಾರೆ. ಆದುದರಿಂದ ತಾವು ಈ ಕೂಡಲೇ ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಜಿಲ್ಲೆಯಲ್ಲಿ ನಿವೇಶನ ಮತ್ತು ವಸತಿ ರಹಿತರಿಗೆ ಅರ್ಜಿ ಸಲ್ಲಿಸಲು ಅನುಕೂಲ ವಾಗುವಂತೆ ವೆಬ್ಸೈಟ್ ಲಾಕ್ ಅನ್ನು ತೆಗೆದು ಅರ್ಜಿಗಳನ್ನು ಸ್ವೀಕರಿಸಲು ಕ್ರಮ ಕೈಗೊಳ್ಳಬೇಕು.ಕೊಪ್ಪಳ ಜಿಲ್ಲೆಯಲ್ಲಿರುವ ಅರ್ಹ ಬಡ ನಿವೇಶನ ಮತ್ತು ವಸತಿರಹಿತರು ಒಟ್ಟು 73,967 ಕುಟುಂಬಗಳು ವಸತಿ ಹೀನವಾಗಿವೆ ಎಂಬ ಅಂಕಿ-ಅಂಶಗಳು ರಾಜೀವ್ ಗಾಂಧಿ ವಸತಿ ನಿಗಮದ ನಿವೇಶನ ಮತ್ತು ವಸತಿ ರಹಿತರ ಸಮೀಕ್ಷಾ ವರದಿಯಿಂದ ಕಂಡುಬಂದಿದೆ.ಆದರೆ ನಮ್ಮ ಸಂಘವು 10 ದಿನಗಳ ಕಾಲ ಕೊಪ್ಪಳ ಜಿಲ್ಲೆಯ ಹಲವು ತಾಲೂಕು ಕೇಂದ್ರಗಳು ಮತ್ತು ಗ್ರಾಮಗಳಿಗೆ ಭೇಟಿ ನೀಡಿ ನಿವೇಶನ ಮತ್ತು ವಸತಿ ರಹಿತರ ಸಮಸ್ಯೆಗಳನ್ನು ಅಧ್ಯಯನ ಮಾಡಿದೆ. ಈ ಸಂದರ್ಭದಲ್ಲಿ ಕೆಳಕಂಡ ಅಂಶಗಳು ನಾವು ಗಮನಿಸಿ ತಮ್ಮ ಅವಗಾಹನೆಗೆ ತರಲು ಇಚ್ಚಿಸಿದ್ದೇವೆ. ಇನ್ನೂ ಜಿಲ್ಲೆಯಾದ್ಯಂತ ವಸತಿ ಮತ್ತು ನಿವೇಶನಕ್ಕಾಗಿ ಅರ್ಜಿ ಸಲ್ಲಿಸದೆ ಇರುವ ಅರ್ಹ ಬಡ ಕುಟುಂಬಗಳು ಸಾವಿರಾರು ಸಂಖ್ಯೆಯಲ್ಲಿ ಇವೆ. ನಿವೇಶನ ಮತ್ತು ವಸತಿಗಾಗಿ ಈಗಾಗಲೇ ಹಲವು ಬಾರಿ ಸಂಬಂಧ ಪಟ್ಟ ಸ್ಥಳೀಯ ಸಂಸ್ಥೆಗಳಿಗೆ ಅರ್ಜಿ ಸಲ್ಲಿಸಿದ್ದರೂ, ಈ ಅರ್ಜಿಗಳನ್ನು ಸ್ವೀಕರಿಸಿ ರಾಜೀವ್ ಗಾಂಧಿ ವಸತಿ ನಿಗಮದ ನಿವೇಶನ ಮತ್ತು ವಸತಿ ರಹಿತರ ಸಮೀಕ್ಷಾ ಪಟ್ಟಿಗೆ ಸೇರ್ಪಡೆ ಮಾಡಿರುವುದಿಲ್ಲ.ನಿವೇಶನಕ್ಕಾಗಿ ಸೂಕ್ತ ಜಾಗದ ಕೊರತೆಯಿಂದ ವಸತಿ ಮಂಜೂರಾಗಿದ್ದರು ವಸತಿ ಯೋಜನೆಯ ಲಾಭ ಪಡೆಯಲು ನಿವೇಶದ ಸಮಸ್ಯೆ ಅಡ್ಡಿಯಾಗಿದೆ.ಬಹುತೇಕ ಗ್ರಾಮ ಮತ್ತು ಪಟ್ಟಣದಲ್ಲಿ ಆರ್ಹ ಬಡವರಿಗೆ ನಿವೇಶನ ವಿತರಣೆಯಾಗಿ ದಶಕಗಳೇ ಕಳೆದಿವೆ. ಇಂತಹ ಕುಟುಂಬಗಳು ಸಣ್ಣ ಮನೆಗಳಲ್ಲಿ ಹಲವು ಕುಟುಂಬಗಳು ವಾಸವಾಗಿದ್ದು ಈ ಕುಟುಂಬಗಳಲ್ಲಿ ಸಾಮಾನ್ಯ ಜೀವನ ನಡೆಸಲು ಕೂಡ ಅಸಾಧ್ಯವಾದ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ.ನಗರ ಪ್ರದೇಶದಲ್ಲಿ ವಸತಿ ರಹಿತರು ದಶಕಗಳಿಂದ ಬಾಡಿಗೆ ಮನೆಯಲ್ಲಿ ವಾಸವಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿವೇಶನ ಅಲಭ್ಯತೆಯಿಂದ ಹಲವು ಕುಟುಂಬಗಳು ಕಾಲುವೆಯ ದಂಡೆಯ ಮೇಲೆ ಹಾಗೂ ಯೋಗ್ಯವಲ್ಲದ ಸ್ಥಳಗಳಲ್ಲಿ ಗುಡಿಸಲುಗಳನ್ನು ನಿರ್ಮಾಣ ಮಾಡಿಕೊಂಡು ಅತಂತ್ರ ಮತ್ತು ಅತ್ಯಂತ ಅಪಾಯಕಾರಿ ಜಾಗಗಳಲ್ಲಿ ಜೀವನ ನಡೆಸುತ್ತಿದ್ದಾರೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ನಮ್ಮ ಜಿಲ್ಲೆಯ ಅರ್ಹ ನಿವೇಶನ ಮತ್ತು ವಸತಿ ರಹಿತ ಕುಟುಂಬಗಳಿಗೆ ಸಂವಿಧಾನಬದ್ಧವಾದ ವಸತಿ ಹಕ್ಕನ್ನು ನೀಡುವಂತೆ ಕೂಡಲೇ ನಿವೇಶನ ಮತ್ತು ವಸತಿಗಾಗಿ ಈಗಾಗಲೇ ಅರ್ಜಿ ಸಲ್ಲಿಸಿರುವ ಮತ್ತು ಹೊಸದಾಗಿ ಅರ್ಜಿ ಸಲ್ಲಿಸ ಬಯಸುವ ಕುಟುಂಬಗಳ ಅರ್ಜಿಗಳನ್ನು ಸ್ವೀಕರಿಸಿ ಅವುಗಳನ್ನು “ರಾಜೀವ್ ಗಾಂಧಿ ವಸತಿ ನಿಗಮ’ದ ನಿವೇಶನ ಮತ್ತು ವಸತಿ ರಹಿತರ ಸಮೀಕ್ಷಾ ಪಟ್ಟಿಗೆ ಸೇರಿಸುವುದು.ಜಿಲ್ಲೆಯಾದ್ಯಂತ ಇರುವ ಆರ್ಹ ನಿವೇಶನ ರಹಿತರ ಸಂಖ್ಯೆಗೆ ಅನುಗುಣವಾಗಿ ಅವರಿಗೆ ನಿವೇಶನ ನೀಡಲು ಅಗತ್ಯ ಇರುವ ಸರ್ಕಾರಿ ಭೂಮಿಯನ್ನು ಗುರುತಿಸಿ ಆ ಭೂಮಿಯನ್ನು ಆಶ್ರಯ ನಿವೇಶನಕ್ಕಾಗಿ ಕಾಯ್ದಿದಿರಿಸಬೇಕು. ಭೂಮಿ ಲಭ್ಯತೆ ಇಲ್ಲದೆ ಇದ್ದಲ್ಲಿ ಖಾಸಗಿ ಜಮೀನನ್ನು ಖರೀದಿ ಮಾಡಿ ನಿವೇಶನ ರಚಿಸಿ ಬಡವರಿಗೆ ವಿತರಣೆ ಮಾಡಬೇಕು. ಭೂಮಿ ಅಲಭ್ಯತೆಯ ಕಾರಣವಿದ್ದಲ್ಲಿ ನಿವೇಶನಕ್ಕಾಗಿ ಭೂಸ್ವಾಧೀನ ಕ್ರಮಕ್ಕೂ ಮುಂದಾಗಬೇಕು. ತಮ್ಮ ನೇತೃತ್ವದಲ್ಲಿ ನಿವೇಶನ ಮತ್ತು ವಸತಿಗಾಗಿ ಜಿಲ್ಲಾ ಮಟ್ಟದಲ್ಲಿ ರಚನೆಯಾಗಿರುವ ಜಾಗೃತ ಸಭೆಯನ್ನು ಶೀಘ್ರವಾಗಿ ಕರೆಯುವುದು. ಈ ಸಭೆಗೆ ನಮ್ಮ ಹೋರಾಟ ಸಮಿತಿಯ ಪದಾಧಿಕಾರಿಗಳನ್ನು ಆಹ್ವಾನಿಸಿ ಎಂದು ನಿವೇಶನ ಮತ್ತು ವಸತಿ ರಹಿತರ ಹೋರಾಟ ಸಮಿತಿಯ ಆಗ್ರಹಿಸಿದೆ.

ತಾಲೂಕಾ ಅಧ್ಯಕ್ಷ ಎಸ್.ಎ. ಗಫಾರ್. ತಾಲೂಕಾ ಉಪಾಧ್ಯಕ್ಷ ನೂರಸಾಬ ಹೊಸಮನಿ. ತಾಲೂಕಾ ಕಾರ್ಯದರ್ಶಿ ತುಕಾರಾಮ್ ಬಿ. ಪಾತ್ರೋಟಿ. ಭಾರತ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಉಸ್ತುವಾರಿ ಡಾ: ಕೆ.ಎಸ್. ಜನಾರ್ದನ. ಹಿರಿಯ ಮುಖಂಡರಾದ ಜಾಫರ್ ಕುರಿ. ರಾಜಪ್ಪ ಚೌವ್ಹಾಣ್. ಬೆಟದಯ್ಯ ಹಾದಿಮನಿ. ಹೊಸ ಕನಕಪೂರದ ಶೋಭಾ ವಡ್ಡರ. ಮಲ್ಲಿಕಾರ್ಜುನ್ ಕಾಸನಕಂಡಿ. ಮಂಜುನಾಥ್ ವಡ್ಡರ. ರೇಣುಕಮ್ಮ. ರೇಷ್ಮಾ ಭಾವಿಮನಿ. ಸುಮಂಗಲಾ. ಚೈತ್ರಾ.

ಗೀತಾ ಇಂಗಳಗಿ. ರಾಜೇಶ್ವರಿ. ರೇಣುಕಾ ನವನಗರ. ಸಾಧಿಕ್. ಹನುಮಂತ ವಡ್ಡರ. ಜಗದೀಶ್ ಕಟ್ಟಿಮನಿ ಮುಂತಾದವರು ಅನೇಕರು ಧರಣಿ ನಡೆಸಿ ಒತ್ತಾಯಿಸಿದ್ದಾರೆ.

 

Get real time updates directly on you device, subscribe now.

Comments are closed.

error: Content is protected !!
%d bloggers like this: