ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವನ ಮಹೋತ್ಸವ ಕಾರ್ಯಕ್ರಮ
Kanakagiri ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವನ ಮಹೋತ್ಸವ ಕಾರ್ಯಕ್ರಮದ ನಿಮಿತ್ಯ ಕಾಲೇಜಿನ ಆವರಣದ ಸುತ್ತ ಸುಮಾರು ೫೦ಕ್ಕೂ ಹೆಚ್ಚು ಗಿಡಗಳನ್ನು ನೆಡುವುದರ ಮೂಲಕ ಆಚರಿಸಲಾಯಿತು.
ನಂತರ ಕಾಲೇಜಿನ ಪ್ರಾಂಶುಪಾಲರಾದ ಬಜರಂಗ ಬಲಿ ಅವರು ಮಾತನಾಡಿ, ವನ ಮೋತ್ಸವದ ಆರಂಭ ಮತ್ತು ಅದರ ಉದ್ದೇಶ ಪರಿಸರ ಸಂರಕ್ಷಣೆಯ ಬೆಳವಣಿಗೆ ಅದರ ಕಾಳಜಿಯ ಬಗ್ಗೆ ವಿವರಿಸುತ್ತಾ ಪ್ಲಾಸ್ಟಿಕ್ ನ ದುಷ್ಪರಿಣಾಮಗಳು ಹಾಗೂ ಮನೆಗೊಂದು ಮರ ಊರಿಗೊಂದು ವನ ಎನ್ನುವ ಉದ್ದೇಶದೊಂದಿಗೆ ಮತ್ತು ಹಸಿರೆ ಉಸಿರು, ಉಸಿರೇ ಹಸಿರು ಎಂಬAತೆ ಕಾಡನ್ನು ಬೆಳೆಸಿ ನಾಡನ್ನು ಉಳಿಸಿ, ಅರಣ್ಯದಿಂದ ನಮಗಾಗುವ ಉಪಯೋಗಗಳಾದ ಗಾಳಿ ಮಳೆ ಬೆಳೆ ಮುಂತಾದವುಗಳ ಬಗ್ಗೆ ವಿವರಿಸುತ್ತಾ ವನ ಮಹೋತ್ಸವ ಕಾರ್ಯಕ್ರಮ ಫಾರೆಸ್ಟ್ ಫೆಸ್ಟಿವಲ್ ಇದು ೧೯೪೭ರ ಜುಲೈ ತಿಂಗಳಲ್ಲಿ ಪ್ರಾರಂಭವಾಯಿತು. ತದನಂತರ ೧೯೫೦ ರಿಂದ ಆಚರಣೆ ಜಾರಿಗೆ ತಂದರು. ಅಂದಿನಿAದ ಪ್ರತಿ ವರ್ಷ ಜುಲೈ ತಿಂಗಳಲ್ಲಿ ಆಚರಿಸುತ್ತಾ ಬರುತ್ತಿದ್ದೇವೆ.
ನಂತರ ಎನ್.ಎಸ್.ಎಸ್. ಘಟಕದ ಅಧಿಕಾರಿ ಡಾ. ವೀರೇಶ ಕೆ ಮಾತನಾಡಿ, ನಾಡಿನ ಪರಿಸರ ರಕ್ಷಣೆ ಕುರಿತ ಯುವ ಪೀಳಿಗೆಯಾದ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು. ಸಸಿ/ಗಿಡಗಳನ್ನು ನೆಟ್ಟು ರಕ್ಷಿಸುವ ಕೆಲಸ ಕೇವಲ ಅರಣ್ಯ ಇಲಾಖೆಗೆ ಸೀಮಿತವಾಗಿರದೆ ಸಾಲದು, ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಆಗಬೇಕು. ಹವಾಮಾನ ಬದಲಾವಣೆ ದೊಡ್ಡ ಬಿಕ್ಕಟ್ಟು. ವಾಯು ಮತ್ತು ಜಲ ಮಾಲಿನ್ಯ ನಮ್ಮ ಮುಂದಿರುವ ದೊಡ್ಡ ಸವಾಲಾಗಿದೆ. ಈ ಬಗ್ಗೆ ಜನರು ಜಾಗೃತರಾಗಬೇಕು, ಪರಿಸರ ಅಸಮತೋಲನ ಮತ್ತು ವಾತಾವರಣದಲ್ಲಿ ಉಂಟಾಗಿರುವ ಹೆಚ್ಚಿನ ಶಾಖದಿಂದ ಹಲವಾರು ಸಮಸ್ಯೆಗಳು ಸಷ್ಟಿ ಯಾಗಿವೆ. ಆದ್ದರಿಂದ ಪರಿಸರ ಸಮತೋಲನದ ಸಲುವಾಗಿ ಪ್ರತಿಯೊಬ್ಬರೂ ಗಿಡ ನೆಟ್ಟು ಪೋಷಿಸುವ ಮೂಲಕ ಮನೆಗೊಂದು ಮರ, ಊರಿಗೊಂದು ವನ ನಿರ್ಮಾಣ ಮಾಡಿ ಎಂದರು.
ಈ ಸಂದರ್ಭದಲ್ಲಿ ಪ್ರಾಧ್ಯಪಕರಾದ ಡಾ. ಆಶಿಕಾ ಎಚ್.ಸಿ, ಲಲಿತಾ ಎನ್, ಮರ್ವಿನ್ ವಿಕ್ಟರ್ ಡಿಸೋಜಾ, ತಬಸ್ಸುಮ್ ಆರಾ, ಉಪನ್ಯಾಸಕರಾದ ಗೋಪಾಲರೆಡ್ಡಿ ಮಾದಿನಾಳ, ಬಾಳಪ್ಪ ಸುಳೇಕಲ್, ರವಿಕುಮಾರ, ಮಾರುತೇಶ, ಸ್ವಾಮಿ ಬಿ, ಮಾದಿನಾಳಪ್ಪ ಸೇರಿದಂತೆ ಇತರರು ಇದ್ದರು.
Comments are closed.