ಕೃತಕ ಬುದ್ದಿ ಮತ್ತೆಯಿಂದ ನಾವು ಭಯ ಪಡುವ ಅಗತ್ಯ ವಿಲ್ಲ. -ಆಯಿಷಾ ಖಾನಮ್
ಎಐ ಪ್ರಸ್ತುತ ಆಯಾಮಗಳು-ಗೋಷ್ಠಿ
ಕೊಪ್ಪಳ : ಕೃತಕ ಬುದ್ದಿ ಮತ್ತೆಗೆ ಮನುಷ್ಯರ ಭಾವನೆಗಳು ಇರುವುದಿಲ್ಲ. ಯಂತ್ರವು ತಂತ್ರಗಾರಿಕೆ ಹೊರತು ಅದುವೇ ಜೀವನವಲ ಇದರಿಂದ ಕೆಲವು ಉದ್ಯೋಗಗಳು ಕಡಿಮೆ ಆಗಬಹುದು ಅಷ್ಟೇ. ತಂತ್ರಜ್ಞಾವನ್ನು ನಾವು ಕರಗತ ಮಾಡಿಕೊಳ್ಳಬೇಕು. ಆಗ ಮಾತ್ರ ನಾವು ಅದನ್ನು ನಮಗೆ ಬೇಕಾದ ಹಾಗೇ ಬಗ್ಗಿಸಬಹುದು. ತಂತ್ರಜ್ಞಾನ ಎನ್ನುವುದು ಮನುಷ್ಯರು ಘನತೆಯಿಂದ ಬದುಕುವುದು ಎಂದರ್ಥ. ಕೃತಕ ಬುದ್ದಿ ಮತ್ತೇಯಿಂದ ನಾವು ಭಯ ಪಡುವ ಅಗತ್ಯ ವಿಲ್ಲ.ಎಂದು ಕರ್ನಾಟಕ ಮಾದ್ಯಮ ಅಕಾಡೆಮಿ ಅಧ್ಯಕ್ಷರಾದ ಶ್ರೀಮತಿ ಆಯಿಷಾ ಖಾನುಂ ಹೇಳಿದರು.
ನಗರದ ಬಾಲಾಜಿ ಫಂಕ್ಷನ್ ಹಾಲ್ ನಲ್ಲಿ ಬಹುತ್ವ ಮೀಡಿಯಾ ಹೌಸ್ ಹಾಗೂ ಬಹುತ್ವ ಬಳಗದವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೊಪಣ ಮೀಡಿಯಾ ಫೆಸ್ಟ್‌ನ ೨ನೇ ದಿನದ ಕಾರ್ಯಕ್ರಮದಲ್ಲಿ ನಡೆದ ಎರಡನೇ ಗೋಷ್ಠಿಯಲ್ಲಿ ಎಐ ಪ್ರಸ್ತುತ ಆಯಾಮಗಳು ಕುರಿತ ಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಇಂದು ನಾವು ತಂತ್ರಜ್ಞಾನವನ್ನು ನಿರಾಕರಿಸುವುದಕ್ಕೆ, ಬೇಡ ಅನ್ನುವುದಕ್ಕೆ ಆಗುವುದಿಲ್ಲ. ಅದು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ. ತಂತ್ರಜ್ಞಾನ ಇಲ್ಲವೆಂದರೆ ನವ ಮಾಧ್ಯಮಗಳು ಇಲ್ಲ.. ಕೃತಕ ಬುದ್ದಿ ಮತ್ತೇಯನ್ನು ಒಳ್ಳೆಯ ಕೆಲಸಕ್ಕೆ ಉಪಯೋಗಿಸಿಕೊಳ್ಳಬೇಕು. ಕೃತಕ ಬುದ್ದಿ ಮತ್ತೆಗೆ ಫೀಡ್ ಬ್ಯಾಕ್ ಬರುವುದಿಲ್ಲ. ಕೃತಕ ಬುದ್ದಿ ಮಾತೀಯನ್ನು ಒಂದು ಆಯುಧವಾಗಿ ಬಳಸಿಕೊಳಬೇಕು. ಇಂದಿನ ತಂತ್ರಜ್ಞಾನವು ಮುಂದಿನ ಪೀಳಿಗೆಗೆ ಬಹಳ ಉಪಯುಕ್ತವಾಗಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಪ್ರಾದ್ಯಾಪಕರಾದ ಡಾ.ನರಸಿಂಹ ಗುಂಜಳ್ಳಿ, ಅತಿಥಿ ಉಪನ್ಯಾಸಕರಾದ ತಾಯಪ್ಪ ಮರ್ಚಡ್, ರಾಘವೇಂದ್ರ ಜಂಗಲಿ ರಂಗನಾಥ ಕೋಳೂರು, ಲೋಕೇಶ್, ಕಲೀಮುಲ್ಲಾ ಖಾದ್ರಿ ಉಪಸ್ಥಿತರಿದ್ದರು. ಗೋಷ್ಠಿಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.
Comments are closed.