ಮಾಧ್ಯಮಗಳು ಬಿಪಿಎಲ್ ಭಾರತದ ಪರವಾಗಿರಬೇಕು – ಜಿ.ಎನ್.ಮೋಹನ್

Get real time updates directly on you device, subscribe now.

ಕೊಪ್ಪಳ : ಮಾಧ್ಯಮಗಳು ಇರುವುದು ಒಳ್ಳೆಯ ಬದುಕು ನಿರ್ಮಿಸುವುದಕ್ಕೆ. ಜನರಿಗೆ ಒಳ್ಳೆಯ ಶಿಕ್ಷಣ ಕೊಡುವುದಕ್ಕೆ. ಒಳ್ಳೆಯ ಆರ್ಥಿಕತೆ, ಒಳ್ಳೆಯ ಸಂಸ್ಕೃತಿ ಸೃಷ್ಟಿಸುವುದಕ್ಕೆ. ಈಗ ಸುದ್ದಿಗಳು ಜಾಹೀರಾತು ರೂಪದಲ್ಲಿ ಬರುತ್ತಿವೆ. ಪತ್ರಿಕೆಗಳು ಸಮಾಜದ ಪರವಿದ್ರೆ ಇಡೀ ಸಮಾಜವೇ ಬದಲಾಗುತ್ತದೆ ಎಂದು ಹಿರಿಯ ಪತ್ರಕರ್ತ ಜಿ.ಎನ್.ಮೋಹನ್ ಹೇಳಿದರು.
ಅವರು ನಗರದ ಬಾಲಾಜಿ ಫಂಕ್ಷನ್ ಹಾಲ್ ನಲ್ಲಿ ಬಹುತ್ವ ಮೀಡಿಯಾ ಹೌಸ್ ಹಾಗೂ ಬಹುತ್ವ ಬಳಗದವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೊಪಣ ಮೀಡಿಯಾ ಫೆಸ್ಟ್‌ನ ೨ನೇ ದಿನದ ಕಾರ್ಯಕ್ರಮದಲ್ಲಿ ನಡೆದ ಮೊದಲನೆಯ ಗೋಷ್ಠಿಯಲ್ಲಿ ನವ್ಯ ಮಾದ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅಭಿವೃದ್ದಿ ಕಲ್ಪನೆ ಕುರಿತು ಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ನವ ಮಾಧ್ಯಮಗಳನ್ನು ಅಭಿವೃದ್ಧಿ ಕೆಲಸಗಳಿಗೆ ಮತ್ತು ಒಳ್ಳೆಯ ಕೆಲಸಗಳಿಗೆ ಉಪಯೋಗ ಮಾಡಿಕೊಳ್ಳಬೇಕು. ಮಾಧ್ಯಮಗಳು ಬಿಪಿಎಲ್ ಕಾರ್ಡ್ ದಾರರ ಪರವಾಗಿರಬೇಕು. ಐಪಿಲ್ ಕಾರ್ಡ್‌ದಾರರ ಪರವಾಗಿ ಇರಬಾರದು. ತಂತ್ರ ಜ್ಞಾವು ಇಂದು ವ್ಯಾಪಾಕವಾಗಿ ಅವರಿಸಿಕೊಂಡಿದೆ. ಮೊಬೈಲ್ ಮತ್ತು ತಂತ್ರಜ್ಞಾನ ಬಂದ ನಂತರ ನಮ್ಮ ಜೀವನ ಶೈಲಿ ಬದಲಾಗಿದೆ ಇಂದು ಯಾರಲ್ಲಿ ಹೆಚ್ಚು ಮಾಹಿತಿಯನ್ನು ಇದೆಯೋ ಅವರೇ ಹೆಚ್ಚು ಶ್ರೀಮಂತರು. ಕಡಿಮೆ ಮಾಹಿತಿ ಹೊಂದಿರುವವರು ಬಡವರು ಎನ್ನುವ ಭಾವನೆ ಇದೆ. ನಮಗೆ ತಂತ್ರಜ್ಞಾನ ತೀರಾ ಅಗತ್ಯ. ಅದನ್ನು ನಾವು ಒಳ್ಳೆಯ ಕೆಲಸಕ್ಕೆ ಉಪಯೋಗ ಮಾಡಿಕೊಳ್ಳಬೇಕು. ನಮ್ಮ ದೇಶದಲ್ಲಿ ಕಂಪ್ಯೂಟರ್ ಬಂದಾಗ ಎಲ್ಲ ಪತ್ರಕರ್ತರು ಅದು ಬೇಡ ಅಂತ ವಿರೋಧಿಸಿದ್ದರು. ಇಂದು ಮೊಬೈಲ್ ಲ್ಲಿ ಎಲ್ಲ ಮಾಹಿತಿ ಸಿಗುತ್ತದೆ. ಮೊದಲು ಟಿವಿ, ಸಿನಿಮಾ, ಸೀರಿಯಲ್ ನೋಡಬೇಕಾದರೆ ಟಿವಿ ಮುಂದೆ ಕುಳಿತುಕೊಳ್ಳಬೆಕ್ಕಗಿತ್ತು. ಆದರೆ ಇಂದು ಮೊಬೈಲ್ ಬಂದ ನಂತರ ನಾವು ಎಲ್ಲೋ ಇದ್ದುಕೊಂಡೇ ಸೀರಿಯಲ್, ಸಿನಿಮಾ, ವಾರ್ತೆ ನೋಡಬಹುದು ಎಂದು ಹೇಳಿದರು. ನಂತರ ಗೋಷ್ಠಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಮಂಜುನಾಥ ಗೊಂಡಬಾಳ ನಿರೂಪಿಸಿದರು. ಸ್ವಾಗತ ಮತ್ತು ವಂದನಾರ್ಪಣೆಯನ್ನು ಅಖಿಲ್ ಹುಡೆವು ನೆರವೇರಿಸಿದರು.

Get real time updates directly on you device, subscribe now.

Comments are closed.

error: Content is protected !!