ಹಾಸ್ಟಲ್ ಹೊರ ಗುತ್ತಿಗೆ ನೌಕರರ ಪ್ರತಿ ಭಟನೆ
ಸರ್ಕಾರಿ ವಸತಿ ನಿಲಯ ಮತ್ತು ವಸತಿ ಶಾಲೆ ಹೊರಗುತ್ತಿಗೆ ಮೂಲಕ ಕಾರ್ಯ
ನಿರ್ವಹಿಸುತ್ತಿರುವ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವ ಕುರಿತು.
ಕರ್ನಾಟಕ ರಾಜ್ಯ ಹಾಸ್ಟೆಲ್ ಹೊರಗುತ್ತಿಗೆ ನೌಕರರ ಸಂಘ ಬೆಂಗಳೂರು, ಕೊಪ್ಪಳ ವಿಭಾಗ ಮತ್ತು ಕರ್ನಾಟಕ ರಾಜ್ಯ ಕ್ರೈಸ್ ವಸತಿ ಶಾಲೆಗಳ ಡಿ ಗ್ರೂಪ್ ನೌಕರರ ಸಂಘ ಕೊಪ್ಪಳ, ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹೊರಸಂಪನ್ಮೂಲ ನೌಕರರ ಸಂಘ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಕೊಪ್ಪಳ ಜಿಲ್ಲೆಯ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳಡಿಯಲ್ಲಿ ಬರುವ ವಸತಿ ನಿಲಯ ಹಾಗೂ ವಸತಿ ಶಾಲೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರು ಕಳೆದ ೧೧ ವರ್ಷದಿಂದ ಒಂದೇ ಏಜೆನ್ಸಿಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದು, ಅದು ಕೊಪ್ಪಳ ಜಿಲ್ಲಾ ಸಾರ್ವಜನಿಕ ವಸತಿ ನಿಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ಸಹಕಾರ ಸಂಘ ನಿ, ಕೊಪ್ಪಳದ ಪ್ರಸ್ತುತ ಅದರ ಸದಸ್ಯರಾಗಿ ಹಾಸ್ಟೆಲ್ ಹೊರಗುತ್ತಿಗೆ ನೌಕರರು ನೆಮ್ಮದಿಯಿಂದ ಸೇವಾ ಭದ್ರತೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ, ಆದರೆ ಪ್ರಸ್ತುತ ಏಜೆನ್ಸಿಗೆ ಸೇವಾ ಭದ್ರತೆ ಇಲ್ಲದಂತಾಗಿದೆ, ಪ್ರತಿ ವರ್ಷ ಟೆಂಡರ್ ಕರೆಯುವ ಮುಖಾಂತರ ೧೧೦೦ ಕುಟುಂಬಗಳು ಆತಂಕದಲ್ಲಿರುವಂತೆ ಮಾಡಿದೆ, ಸಹಕಾರ ಸಂಘ ರಚನೆಯ ನಂತರ ಜಿಲ್ಲೆಯಲ್ಲಿ ೩ ಇಲಾಖೆಯ ಕಾರ್ಮಿಕರು ವೇತನ, ಪಿ.ಎಫ್.ಮತ್ತು ಇ.ಎಸ್.ಆಯ್ ನೀಡಿಲ್ಲವೆಂದು ಪ್ರತಿಭಟನೆ ಮಾಡಿಲ್ಲ, ಇದರ ಹೊರತಾಗಿಯೂ ಟೆಂಡರ್ ಕರೆಯುವದು ಅತಂತ್ರ ವ್ಯವಸ್ಥೆಗೆ ದೂಡಿದ್ದು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಟೆಂಡರ್ ಅಂತಿಮವಾಗಿದ್ದು, ಸಹಕಾರ ಸಂಘಕ್ಕೆ ಕಾರ್ಯಾದೇಶ ಮಾಡಿಕೊಡಬೇಕು, ಹಾಗೂ ತಕ್ಷಣವೇ ಟೆಂಡರ್ ಕರೆದಿರುವ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಟೆಂಡರ್ ಪ್ರಕ್ರಿಯೆ ರದ್ದು ಮಾಡಬೇಕು ಹಾಗೂ ಹಾಲಿ ಕಾರ್ಯನಿರ್ವಹಿಸುತ್ತಿರುವ ಸಹಕಾರ ಸಂಘಕ್ಕೆ ಮಾನವ ಸಂಪನ್ಮೂಲ ಸೇವೆ ಒದಗಿಸಲು ಜಿಲ್ಲೆಯ ೩ ಇಲಾಖೆಗೆ ಅನ್ವಯವಾಗುವಂತೆ ಟೆಂಡರ್ ವಿನಾಯಿತಿ ನೀಡಿ ಹಾಲಿ ಸಹಕಾರ ಸಂಘಕ್ಕೆ ಕಾರ್ಯಾದೇಶ ಮುಂದುವರೆಸುವಂತೆ ಮನವಿ ಸಲ್ಲಿಸಿದರು. ಜಂಬಯ್ಯ ನಾಯಕ್ ಗ್ಯಾನೇಶ ಕಡಗದ ಮಹಮದ್ ರಫೀಕ್ ದಾವಲಸಾಬ್ ಕಂಪ್ಲಿ ಫಕೀರಪ್ಪ ಬಿ ಬಸವರಾಜ ಕೆಳಗಿನಮನಿ ದಸ್ತಗೀರ ಸಾಬ ದೊಡ್ಡಬಸವರಾಜ ಮುತ್ತಣ ಕೆ ಸುರೇಶ ಕಾರಟಗಿ ಗಾಳೆಪ್ಪ ಮುತ್ತವ್ವ ಉಪಸ್ಥಿತರಿದ್ದರು
Comments are closed.