ಮಾಧ್ಯಮಗಳು ಸಮಾಜದ ಪರವಾಗಿ ಕೆಲಸ ಮಾಡಬೇಕು- ನಳಿನ್ ಅತುಲ್

Get real time updates directly on you device, subscribe now.


ಕೊಪ್ಪಳ : ಮಾದ್ಯಮಗಳ ಸುದ್ದಿಯ ಮಾಹಿತಿ ಗುಣಾತ್ಮಕವಾಗಿರಬೇಕು. ಮಾದ್ಯಮಗಳಿಗೆ ಜವಬ್ದಾರಿಯಿರಬೇಕು. ಸರಕಾರಿ ಅಧಿಕಾರಿಗಳು ಮತ್ತು ಮಾಧ್ಯಮ ಮಿತ್ರರ ನಡುವೆ ಉತ್ತಮವಾದ ಸಂಬಂಧವಿರಬೇಕು. ಎಲ್ಲ ಮಾಧ್ಯಮಗಳ ಸಮಾಜ ಪರವಾಗಿ ಕೆಲಸ ಮಾಡಬೇಕು. ಇಬ್ಬರ ನಡುವೆ ಚರ್ಚೆ, ಸಂವಾದ ನಡೆಯಬೇಕು ಎಂದು ಜಿಲ್ಲಾಧಿಕಾರಿ ನಳಿನ್ ಅತುಲ್ ಹೇಳಿದರು.
ಅವರು ಇಂದು ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಬಹುತ್ವ ಮೀಡಿಯಾ ಹೌಸ್, ಬಹುತ್ವ ಬಳಗ ಕೊಪ್ಪಳ ನೇತೃತ್ವದಲ್ಲಿ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗ ಕೊಪ್ಪಳ ವಿಶ್ವವಿದ್ಯಾಲಯ, ಸಮೂಹನ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗ ಕನ್ನಡ ವಿಶ್ವವಿದ್ಯಾಲಯ ಹಂಪಿ, ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗ, ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕೊಪ್ಪಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಹಾಗೂ ವಿವಿಧ ಕಾಲೇಜುಗಳ ಸಹಯೋಗದಲ್ಲಿ, ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸನವರ ಸಹಕಾರದೊಂದಿಗೆ ಕೊಪ್ಪಳ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ಕೊಪಣ ಮೀಡಿಯಾ ಫೆಸ್ಟ್ ಕಾರ್ಯಕ್ರಮವನ್ನು ಸಸಿಗೆ ನೀರು ಎರೆಯುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಂವಿಧಾನದ ಓದು ಪುಸ್ತಕ ಒಳ್ಳೆಯ ಪುಸ್ತಕ ಈ ಪುಸ್ತಕವನ್ನುಎಲ್ಲ ವಿಧ್ಯಾರ್ಥಿಯರು ಓದಬೇಕು.ಈ ಪುಸ್ತಕವು ಎಲ್ಲರಿಗೂ ಸಂವಿಧಾನದ ಕುರಿತು ಕನಿಷ್ಠ ತಿಳುವಳಿಕೆ ಮೂಡಿಸುತ್ತದೆ.ಎಲ್ಲರೂ ಸಂವಿಧಾನವನ್ನು ಓದಬೇಕು. ಸ್ವಾತಂತ್ರ್ಯ, ಸಮಾನತೆ ಬಹಳ ಮಹತ್ವವಾದದ್ದು. ಮುದ್ರಣ ಯಂತ್ರ ಕಂಡು ಹಿಡಿದ ನಂತರ ಪಾಶ್ಚತ್ಯ ದೇಶಗಳ ಓದುವುದು ಪರಾರಂಭವಾಯಿತು. ಇದರಿಂದ ಜನರಲ್ಲಿ ಹೊಸ ಅಲೋಚನೆಗಳು ಚಳುವಳಿಗಳು ಹುಟ್ಟಿಕೊಂಡವು.ಇದರಿಂದ ಅಡಳಿತ ಸುಧಾರಣೆ ಮತ್ತು ಇನ್ನಿತರಅಭಿವೃದ್ಧಿ ಕೆಲಸಗಳು ಪ್ರಾರಂಭವಾದವು. ಮೊದಲು ಮಾಧ್ಯಮಗಳ ಮಾಲಿಕತ್ವವ ಇಬ್ಬರು-ಮೂರು ಜನರಕೈಯಲ್ಲಿ ಇತ್ತು.ಇಂದು ಮಾಧ್ಯಮಗಳ ಮಾಲಿಕತ್ವ ವಿಸ್ತಾರವಾಗಿ ಬೆಳೆದಿದೆ. ಉದಾರೀಕರಣದ ನಂತರ ದಿನದ ಇಪ್ಪತುನಾಲ್ಕು ಗಂಟೆಗಳ ಕಾಲ ಟಿವಿಗಳಲ್ಲಿ ಸುದ್ದಿಗಳು ಕಾರ್ಯಕ್ರಮಗಳು ಪ್ರಸಾರವಾಗುತ್ತವೆ. ಈಗ ಸಾಮಾಜಿಕ ಜಾಲತಾಣಗಳು ಬಂದಿವೆ. ಯಾರೂ ಬೇಕಾದರೂ ಮಾಹಿತಿಯನ್ನು ಹೇಗೆ ಬೇಕಾದರೂ ಮಾಹಿತಿಯನ್ನು ಬರೆಯಬಹುದು. ನಾವು ಪ್ರಜಾಸತ್ತಾತ್ಮಕದೇಶದಲ್ಲಿ ಬದುಕುತ್ತಿದ್ದೇವೆ. ಸತ್ಯ ಏನು ಎಂಬುದು ಎಲ್ಲರಿಗೂ ರವಾನೆಯಾಗುತ್ತದೆ. ಮಾಧ್ಯಮ ಹಬ್ಬಗಳ ಬಹಳ ಮಹತ್ವವಾದದ್ದವು. ನಿಮ್ಮಲ್ಲಿ ದುಡ್ಡು ಇಲ್ಲದಿದ್ದರೂ ಸಹ ಅನ್‌ಲೈನ್ ಮಾಧ್ಯಮಗಳು ಪ್ರಾರಂಭ ಮಾಡಬಹುದು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್‌ರತ್ನಮ್ ಪಾಂಡೆಯ ಮಾತನಾಡಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವು ಮಾಧ್ಯಮಗಳ ಮೂಲಭೂತ ಹಕ್ಕು ಇದಕ್ಕೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂದು ಸುಪ್ರಿಂಕೋರ್ಟ್ ಹೇಳಿದೆ. ಮಾಧ್ಯಮಗಳ ಪಾತ್ರರಾಷ್ಟ ನಿರ್ಮಾಣದಲ್ಲಿ ಬಹಳ ಮಹತ್ವವಾದದ್ದು.ಮಾಧ್ಯಮಗಳು ಸುದ್ದಿ ನೀಡುವಾಗ ಪರಿಶೀಲನೆ ಮಾಡಬೇಕು.ಜನರ ಸಮಸ್ಯೆಗಳ ಮತ್ತು ಸಮಾಜಿಕ ಸಮಸ್ಯೆಗಳ ಕುರಿತು ಮಾಧ್ಯಮಗಳು ವರದಿಗಳು ಮಾಡಬೇಕು. ಎಲ್ಲರು ನಮ್ಮ ಸಮಾಜವನ್ನು ಯಾವ ಮಟ್ಟದಿಂದ ಬದಲಾವಣೆ ಮಾಡಬೇಕುಎಂಬುದನ್ನು ಚಿಂತೆ ಮಾಡಬೇಕು.ಈಗ ಕಾಸಿಗಾಗಿ ಸುದ್ದಿ ಮಾಡಬಾರದು.ದುಡ್ಡು ತೆಗೆದುಕೊಂಡು ಸುದ್ದಿ ಬರೆಯಬಾರದು. ಮಾಧ್ಯಮಗಳು ಒಳ್ಳೆಯ ವಿಷಯಗಳ ಕುರಿತು ಚರ್ಚೆ ಮಾಡಬೇಕು. ನಾವು ಮಾಧ್ಯಮಗಳ ಜೊತೆ ಸಂವಾದ ಮಾಡಬೇಕು. ಮಾಧ್ಯಮವು ಒಂದು ಶಕ್ತಿಯುತವಾದ ಆಯುಧ. ಸ್ಥಳಿಯ ಪತ್ರಕರ್ತರು ಹೆಚ್ಚು ಕೆಲಸ ಮಾಡುತ್ತಾರೆ. ಇವರು ಹಳ್ಳಿ ಹಳ್ಳಿಗೆ ಹೋಗಿ ಮಾಹಿತಿಯನ್ನು ಸಂಗ್ರಾಹಿಸಿ ವರದಿಗಳನ್ನು ಮಾಡುತ್ತಾರೆ. ಮುಂದಿನ ವರ್ಷಗಳಲ್ಲಿ ಇನ್ನುದೊಡ್ಡ ಮಟ್ಟದಲ್ಲಿ ಮಾಧ್ಯಮ ಹಬ್ಬಗಳು ನಡೆಯಲಿ ಎಂದು ಹಾರೈಸಿದರು.
ಇನ್ನೋರ್ವ ಮುಖ್ಯ ಅತಿಥಿ ಕೊಪ್ಪಳ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರಾಮ್.ಎಲ್. ಅರಸಿದ್ದಿ ಮಾತನಾಡಿ ಮಾಧ್ಯಮಗಳಿಗೆ ಜವಾಬ್ದಾರಿ ಇರಬೇಕು. ಮಾಧ್ಯಮಗಳು ಜನರಲ್ಲಿ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಬೇಕು. ಈಗ ಎಲ್ಲರೂ ಸಮಾಜಿಕ ಮಾಧ್ಯಮಗಳಲ್ಲಿ ಬರೆಯುತ್ತಾರೆ ಆದ್ದರಿಂದ ಇಂದು ಎಲ್ಲರು ಪತ್ರಕರ್ತರೆ. ಈಗ ಮಾಧ್ಯಮಗಳು ಸಮಾಜದ ಮೇಲೆ ಪ್ರಭಾವ ಬೀರುತ್ತವೆ. ಇಂದು ಹಲವಾರು ವಿಷಯಗಳು ಸಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತವೆ. ಹಿರಿಯ ಪತ್ರಕರ್ತರು ವಿದ್ಯಾರ್ಥಿಗಳಿಗೆ ಸಲಹೆಗಳನ್ನು ನೀಡಬೇಕು.ಮುಂದಿನ ವರ್ಷ ಈ ರೀತಿಯ ಮಾಧ್ಯಮ ಹಬ್ಬಗಳು ಇನ್ನಷ್ಟುದೊಡ್ಡ ಮಟ್ಟದಲ್ಲಿ ನಡೆಯಲಿ ಎಂದು ಹೇಳಿದರು.

ಕೊಪ್ಪಳ ಮೀಡಿಯಾ ಕ್ಲಬ್ ಅಧ್ಯಕ್ಷ ಪತ್ರಕರ್ತ ರವಿಂದ್ರ ವಿ.ಕೆ ಮಾತನಾಡಿ ವಿದ್ಯಾರ್ಥಿಗಳಿಗೆ ತರಗತಿಗಳಲ್ಲಿ ಕಲಿತಿದ್ದು ಮಾಧ್ಯಮಗಳಲ್ಲಿ ಸಹಾಯಾಗುವುದಿಲ್ಲ. ಅದ್ದರಿಂದಎಲ್ಲ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಪತ್ರಿಕೋದ್ಯವನ್ನು ಕಲಿಯಿರಿ. ದೇಶ ಕಟ್ಟುವ ಜವಬ್ದಾರಿ ಮಾದ್ಯಮಗಳ ಮೇಲಿದೆ. ಜಾಗತೀಕರಣ ನಂತರ ಮಾಧ್ಯಮಗಳು ಉದ್ಯಮವಾಗಿ ಬದಲಾದವು. ಸಮಾಜಿಕ ಜಾಲತಾಣಗಳನ್ನು ಯುಟ್ಯೂಬ್ ಗಳನ್ನು ವಿದ್ಯಾರ್ಥಿಗಳು ಉಪಯೋಗಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಹೊರಗಡೆ ಹೋಗಬೇಕು. ನಮ್ಮ ಭಾಗದ ವಿದ್ಯಾರ್ಥಿಗಳು ಹೆಚ್ಚಿನಉನ್ನತ ಶಿಕ್ಷಣವನ್ನು ಪಡೆಯಬೇಕು.ಈ ಮಾಧ್ಯಮ ಹಬ್ಬ ಉತ್ತಮವಾದ ಕಾರ್ಯಕ್ರಮ ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲರಾದ ಗಣಪತಿ ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಪತ್ರಕರ್ತ ಸಿರಾಜ್ ಬಿಸರಳ್ಳಿ ಕೊಪಣ ಮೀಡಿಯಾ ಫೆಸ್ಟ್ ಹಮ್ಮಿಕೊಂಡಿದ್ದರ ಬಗ್ಗೆ ಮಾತನಾಡಿದರು.


ಕಾರ್ಯಕ್ರಮದ ನಿರೂಪಣೆಯನ್ನ ಬಹುತ್ವ ಬಳಗದ ರಾಜು ಬಿ.ಆರ್ ಹಾಗೂ ಸ್ವಾಗತವನ್ನು ಡಾ.ನರಸಿಂಹ ಗುಂಜಳ್ಳಿ ನೆರವೇರಿಸಿದರು. ಪತ್ರಕರ್ತ ಮಂಜುನಾಥ ಗೊಂಬಾಳ ಸಂವಿಧಾನ ಪೀಠಿಕೆ ವಾಚನ ಮಾಡಿದರು. ಇದೇ ಸಂದರ್ಭದಲ್ಲಿ ಕಾಲೇಜಿನ ಮಹಿಳಾ ವೈಸ್ ಪ್ರಯೋಗಿಕ ಪತ್ರಿಕೆ ಬಿಡುಗಡೆ ಮಾಡಲಾಯಿತು. ಉದ್ಘಾಟಕರನ್ನು ಹಾಗೂ ಅತಿಥಿಗಳನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಈ ಸಂದರ್ಭಲ್ಲಿ ಬಹುತ್ವ ಬಳಗದ ರಾಜಾಬಕ್ಷಿ ಎಚ್.ವಿ, ಪತ್ರಕರ್ತರಾದ ಎಂ.ಡಿ ಕಲೀಲ್ ಹುಡೇವು, ಅಖಿಲ್ ಹುಡೇವು , ಮಾರುತಿ, ದಾವಲಸಾಬ ಡಾ.ಪಾಷಾ ಎಚ್.ವಿ, ತೀರ್ಪುಗಾರರಾಗಿ ಹಿರಿಯ ಪತ್ರಕರ್ತರಾದ ಸೋಮರಡ್ಡಿ ಅಳವಂಡಿ, ಸಾಧಿಕ್ ಅಲಿ, ಎನ್.ಎಂ.ದೊಡ್ಡಮನಿ, ದತ್ತು ಕಮ್ಮಾರ, ಶ್ರೀಕಾಂತ ಅಕ್ಕಿ, ಶರಣು ಹುಲಿಹೈದರ್, ಮುಕ್ಕಣ್ಣ ಕತ್ತಿ, ಲಕ್ಷ್ಮಣ ಪೀರಗಾರ, ಶ್ರೀಮತಿ ಶೀಲಾ ಹಾಲ್ಕುರಿಕೆ, ಸಿಎಓ ಅಮೀನ ಅತ್ತಾರ್, ಅಮರದೀಪ್ ಪಿ.ಎಸ್., ವಿಠ್ಠಪ್ಪ ಜಾಬಗೌಡರ್ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅಲ್ಲಾಬಕ್ಷಿ ವಾಲೀಕಾರ್ ತಂಡ ಮತ್ತು ಕಳಕೇಶ ಅರಕೇರಿ

 ಕಲಾತಂಡಗಳಿಂದ ಸುಗಮ ಸಂಗೀತ ಹಾಗೂ ಜಾನಪದ ಕಾರ್ಯಕ್ರಮ ಜರುಗಿತು. ಕಾಲೇಜಿನ ಪ್ರಾಧ್ಯಪಕರಾದ ಶ್ರೀಮತಿ ಹುಲಿಗೆಮ್ಮ ಸೇರಿದಂತೆ ನಾನಾ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳ ಅದ್ಯಾಪಕರು, ಉಪನ್ಯಾಶಕರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ನಂತರ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದ ಆರಂಭದಲ್ಲಿ ಇಂದು ನಿಧನರಾದ ಸಾಹಿತಿ, ಸಂಘಟಕ ಹನುಮಂತಪ್ಪ ಅಂಡಗಿಯವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.

Get real time updates directly on you device, subscribe now.

Comments are closed.

error: Content is protected !!
%d bloggers like this: