ಮಾಧ್ಯಮಗಳು ಜನ ಸಮುದಾಯದ ವಿಶ್ವಾಸಾರ್ಹತೆ ಗಳಿಸಬೇಕು-ಡಾ. ಬಿ.ಕೆ. ರವಿ
ತಂತ್ರಜ್ಞಾನದ ಬಳಕೆ ಜೊತೆ ಎಚ್ಚರದಿಂದಿರಿ – ಡಾ. ಬಿ.ಕೆ. ರವಿ
ಕೊಪ್ಪಳ : ಆಧುನಿಕ ಯುಗದಲ್ಲಿ ತಂತ್ರಜ್ಞಾನ ತುಂಬಾ ವೇಗದಲ್ಲಿದೆ, ತಂತ್ರಜ್ಞಾನದ ಬಳಕೆಯು ಕೂಡ ಅಷ್ಟೇ ಹೆಚ್ಚಾಗಿದೆ ಹಾಗಾಗಿ ಬಳಕೆಯ ಜೊತೆಗೆ ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಇರಬೇಕು ಎಂದು ಕೊಪ್ಪಳ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ. ರವಿ ಹೇಳಿದರು.
ನಗರದ ಬಾಲಾಜಿ ಫಂಕ್ಷನ್ ಹಾಲ್ ನಲ್ಲಿ ಬಹುತ್ವ ಮೀಡಿಯಾ ಹೌಸ್, ಬಹುತ್ವ ಬಳಗದ ವತಿಯಿಂದ ವಿವಿಧ ಕಾಲೇಜುಗಳ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗ ಹಾಗೂ ಕಿರ್ಲೋಸ್ಕರ್ ಫರಸ್ ಇಂಡಸ್ಟ್ರಿ ಸಹಯೋಗದಲ್ಲಿ ಆಯೋಜಿಸಿದ್ದ ಕೊಪಣ ಮೀಡಿಯಾ ಪೆಸ್ಟ್ ನ ಎರಡನೇ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅವರು ” ಮಾಧ್ಯಮ ಕ್ಷೇತ್ರದಲ್ಲಿ ಆಸಕ್ತಿಯುಳ್ಳರಿಗೆ ಭಾಷಾ ಪ್ರಾವಿಣ್ಯತೆ, ಭಾಷೆಯ ಹಿಡಿತ, ಉತ್ತಮ ಜ್ಞಾನ, ಕೌಶಲ್ಯ ಬಹಳ ಪ್ರಮುಖವಾಗಿದೆ. ಮಾಧ್ಯಮಗಳು ಜನ ಸಮುದಾಯದ ವಿಶ್ವಾಸಾರ್ಹತೆ ಗಳಿಸಬೇಕು. ವಿನಯ, ವಿನಯತೆ, ಕಠಿಣ ಪರಿಶ್ರಮ, ಶ್ರದ್ದೆ, ಗುರುತೋರಿದ ಮಾರ್ಗದಿಂದ ನಡೆದರೆ ನಿಮ್ಮ ಕನಸು ನನಸಾಗುತ್ತದೆ” ಎಂದು ವಿದ್ಯಾರ್ಥಿಗಳು ಕಿವಿ ಮಾತು ಹೇಳಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷೆ ಆಯೇಷಾ ಖಾನಂ ಮಾತನಾಡಿ, ಮಾಧ್ಯಮ ಹಾಗೂ ಮಾಧ್ಯಮಗಳ ಶಿಕ್ಷಣವು ಸೇತುವೆ ಯಾಗಬೇಕು. ಮಾಧ್ಯಮ ಅಕಾಡೆಮಿಯನ್ನು ಉತ್ತುಂಗಕ್ಕೆ ಬೆಳೆಸುವ ಮಾಡಲಾಗುತ್ತದೆ. ವಿದ್ಯಾರ್ಥಿಗಳು ಮಾಧ್ಯಮ ಅಕಾಡೆಮಿಯ ಕುರಿತು ತಿಳಿದುಕೊಳ್ಳಬೇಕು ಇದರಿಂದ ಮಾಧ್ಯಮದ ಬಗ್ಗೆ ತಿಳಿಯಲು ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳು ತರಗತಿಯಲ್ಲಿ ಕಲಿತ್ತಿದ್ದು ಮಾಧ್ಯಮದಲ್ಲಿ ಸಹಾಯಕವಾಗುದಿಲ್ಲ. ಹಾಗಾಗಿ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಮಾಧ್ಯಮ ಅಳವಡಿಸಿಕೊಳ್ಳಬೇಕು. ಮಾಧ್ಯಮದ ಹಬ್ಬದಿಂದ ಮಾಧ್ಯಮದ ಅನುಭವ ತಿಳಿಸಲು ಸಾಧ್ಯ ಹಾಗಾಗಿ ಅಕಾಡೆಮಿಯ ವತಿಯಿಂದ ಮಾಧ್ಯಮ ಹಬ್ಬ ಹಮ್ಮಿಕೊಳ್ಳುವುದರ ವಿಷಯ ಚರ್ಚಿಸಲಾಗುವುದು. ವಿದ್ಯಾರ್ಥಿಗಳು ಪತ್ರಿಕೋದ್ಯಮದ ಮೊದಲ ಹಂತವನ್ನು ತಿಳಿದುಕೊಳ್ಳಬೇಕಿದೆ. ಮಾಧ್ಯಮ ಕೆಲ ಮಟ್ಟದಲ್ಲಿ ಅದನ್ನು ಮೇಲೆತ್ತರಕ್ಕೆ ತರಬೇಕು ಎಂಬುದು ಜನರ ತಿಳಿಸುತ್ತಿದ್ದಾರೆ. ಆದರೆ ಅಭಿವೃದ್ಧಿ ಪತ್ರಿಕೋದ್ಯಮ ಮುಖಾಂತರ ಮಾಧ್ಯಮವನ್ನು ಬೆಳೆಸಬೇಕು ಎಂದರು
ಹಿರಿಯ ಪತ್ರಕರ್ತ ಜಿ.ಎನ್.ಮೋಹನ್ ಮಾತನಾಡಿ, ತರಗತಿಯಲ್ಲಿ ಕೇಳಿದ ಮಾಧ್ಯಮ ಶಿಕ್ಷಣ ಹಾಗೂ ಮಾಧ್ಯಮಗಳ ಪ್ರಾಯೋಗಿಕ ಕಲಿಕೆಗೆ ಬಹಳ ವ್ಯತ್ಯಾಸವಿದೆ. ಮಾಧ್ಯಮ ಎಂದರೇ ಪ್ರಶ್ನೆ ಕೇಳುವ ಪ್ರೇರೆಪಿಸು ಉದ್ಯಮವಾಗಿದೆ. ಪ್ರಸ್ತುತ ದಿನಗಳಲ್ಲಿ ಪ್ರಶ್ನೆ ಕೇಳುವುದೇ ಅಪರಾಧ ಎಂಬುದು ಇತ್ತಿಚಿನ ಸ್ಥಿತಿ ಉಂಟಾಗಿದೆ. ಮಾಧ್ಯಮ ರಂಗ ಗುಲಾಮರಾಗಿರಬೇಕು ಎಂಬುದು ವಾತಾವರಣ ಸೃಷ್ಟಿಯಾಗಿದೆ. ಪ್ರಶ್ನೆ ಮಾಡಬೇಡ ಅಂತ ಹೇಳುವ ವ್ಯವಸ್ಥೆ ಜಾರಿಯಲ್ಲಿದೆ
. ಈ ಮಧ್ಯೆಯೇ ಪ್ರಶ್ನೆ ಮಾಡಲಾಗದ, ಧ್ವನಿ ಎತ್ತಲಾಗದ ಒಂದು ಸನ್ನಿವೇಶದಲ್ಲಿ ಪ್ರವೇಶಿಸಿದರೇ ನೀವು ಮಾಧ್ಯಮ ರಂಗದಲ್ಲಿ ಬರಲೇಬೇಕು ಎಂಬುದು ಅಗತ್ಯವಿಲ್ಲ. ಮಾಧ್ಯಮದಲ್ಲಿ ಧ್ವನಿ ಕಳೆದುಕೊಂಡು ನೂರಾರು ವಿದ್ಯಾರ್ಥಿಗಳನ್ನು ನೋಡಿದ್ದೇವೆ. ಪ್ರಶ್ನೇ ಮಾಡಿದರೇ ನೀವು ಮಾಧ್ಯಮಕ್ಕೆ, ಮಾಧ್ಯಮ ನಿಮಗೆ ಏನಾದರೂ ಕೊಡಲು ಸಾಧ್ಯವಾಗಲಿದೆ. ಮಾಧ್ಯಮ ಎನ್ನುವುದು ಸೇತುವೆಯಾಗಿದೆ. ಸಮಾಜ ಹಾಗೂ ಸರ್ಕಾರದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ಸರ್ಕಾರದ ಅನುಸರಿಸುವ ರೀತಿಯನ್ನು ಸಮಾಜ ಏನು ಎನ್ನುತ್ತದೆ ಅದನ್ನು ಸರ್ಕಾರಕ್ಕೆ ತಲುಪಿಸುತ್ತದೆ ಹಾಗೂ ಸರ್ಕಾರದ ಏನು ರೂಪಿಸುತ್ತದೆ ಎಂದು ಸಮಾಜಕ್ಕೆ ತಲುಪಿಸುತ್ತದೆ. ಅಂತಹ ಮಾಧ್ಯಮ ಮೌನವಾದರೇ ಸಮಾಜವನ್ನು ಹಾಗೂ ಪ್ರಜಾಪ್ರಭುತ್ವವನ್ನು, ಸಂವಿಧಾನ ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂಬ ಕಾಲಕ್ಕೆ ಬರುವ ಅಪಾಯ ಮಾಧ್ಯಮದವರು ಪ್ರಶ್ನೆ ಮಾಡುವ ಸ್ವಾತಂತ್ರ್ಯ ಕಳೆದುಕೊಂಡರೇ ಉಂಟಾಗುತ್ತದೆ ಎಂದರು.
ಬಹುತ್ವ ಬಳಗದ ರಾಜಾಭಕ್ಷಿ ಒಂಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ರಾಜು.ಬಿ.ಆರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ತಿಮ್ಮಾರೆಡ್ಡಿ ಮೇಟಿ, ಗವಿಸಿದ್ದಪ್ಪ ಮುತ್ತಾಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೋಟ್ರೇಶ ಮರಬನಾಳ ಹಾಗೂ ಇತರರು ಉಪಸ್ಥಿತರಿದ್ದರು. ಸಿರಾಜ್ ಬಿಸರಳ್ಳಿ ಸ್ವಾಗತಿಸಿದರು. ಪತ್ರಕರ್ತ ಮಂಜುನಾಥ ಜಿ. ಗೊಂಡಬಾಳ ನಿರೂಪಿಸಿದರು.
Comments are closed.