ಅಂಗನವಾಡಿಗೆ ದಿಢೀರ‌ ಭೇಟಿ, ಭಾರಿ ಅಕ್ರಮಗಳ‌ ಪತ್ತೆ

Get real time updates directly on you device, subscribe now.

ಅಂಗನವಾಡಿಗೆ ದಿಢೀರ‌ ಭೇಟಿ, ಭಾರಿ ಅಕ್ರಮಗಳ‌ ಪತ್ತೆ

ಕೊಪ್ಪಳ :  ಹಿರಿಯ ಸಿವಿಲ್‌ ನ್ಯಾಯಾಧೀಶರೂ, ಹಾಗೂ ಜಿಲ್ಲಾ‌ ಕಾನೂನು ಸೇವೆಗಳ ಪ್ರಾಧಿಕಾರದ ಜಿಲ್ಲಾ ಕಾರ್ಯದರ್ಶಿಗಳೂ ಆದ  ಮಲಕಾರಿ‌ ರಾಮಪ್ಪ ಒಡೆಯರ್ ರವರು ಕೊಪ್ಪಳ‌ ತಾಲೂಕಿನ‌ ಹಲಗೇರಿಯ‌ ಹಾಗೂ ವಿವಿಧೆಡೆಗಳ ಹಲವು ಅಂಗನವಾಡಿ‌ ಕೇಂದ್ರಗಳಿಗೆ ಇಂದು ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಅಂಗನವಾಡಿಗಳಲ್ಲಿ ಅವಧಿ ಮೀರಿದ‌ ಹಾಲಿನ‌ ಪುಡಿ, ತವಡು ಮಿಶ್ರತ‌ ರವಾ‌, ಕಡಿಮೆ ಪ್ರಮಾಣದ‌‌ಮೊಟ್ಟೆ ಇನ್ನಿತರ‌ ಆಶ್ಚರ್ಯಕರ ಸಂಗತಿಗಳನ್ನು, ಹಲವು ಸೌಲಭ್ಯಗಳನ್ನು ಒದಗಿಸದಿರುವುದನ್ನು, ಕಡಿಮೆ ಮಕ್ಕಳಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳ‌ ಇರುವುದಾಗಿ ತಪ್ಪು ಲೆಕ್ಕ ತೋರಿಸಿರುವುದನ್ನು‌ ,ಅನೇಕ ದಾಖಲೆಗಳಲ್ಲಿ ಅಪರಾತಪರ ವಿಷಯಗಳಿರುವುದನ್ನು ಗುರುತಿಸಿದರು, ಇನ್ನಿತರೆ ಅಚಾತುರ್ಯ ಸಂಗತಿಗಳನ್ನು ಗಮನಿಸಿದರು.
ಕೊಪ್ಪಳದ ಗಣೇಶ ನಗರದಲ್ಲಿ ಅಂಗನವಾಡಿಯಲ್ಲಿ‌ ಕಳೆದ 2-3ತಿಂಗಳಿಂದ‌ ಮಕ್ಕಳ‌ ಹಾಜರಿ‌ ಹಾಕದಿರುವುದು, ಶಿಕ್ಷಕಿಯೂ ಸಹ ಅಂಗನವಾಡಿಗೆ‌ 2ತಿಂಗಳಿಂದ ಬರದೇ ಇರುವುದು, 40ಮಕ್ಕಳ ಅಂಗನವಾಡಿಯಲ್ಲಿ ಕಚೇರಿಯ ಅವಧಿಯಲ್ಲಿ‌ ಒಂದೇ ಒಂದು ಮಗುವಾಗಲಿ, ಸಹಾಯಕರಾಗಲಿ ಇರದಿರುವುದು, ಬೇನಾಮಿ‌ ವ್ಯಕ್ತಿಗಳ‌ ಕೈಯಲ್ಲಿ‌ ಅಂಗನವಾಡಿ‌ ಕೀಲಿ‌ ಕೊಟ್ಟಿರುವುದು, ಯಾವುದೇ‌ ದಾಖಲೆಗಳು‌ ಇಲ್ಲದಿರುವುದು, ಇನ್ನಿತರ ಆಶ್ಚರ್ಯಕರ ಸಂಗತಿಗಳನ್ನು‌‌ ಗುರುತಿಸಿ‌ ಛೀಮಾರಿ‌ ಹಾಕಿದರು. ನಂತರ ಈ‌ ಬಗ್ಗೆ‌ ಮಹಿಳಾ‌ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಡಿಡಿಯವರಿಗೆ ಕರೆ ಮಾಡಿ‌ ಅಂಗನವಾಡಿಯ‌ ಕುರಿತಂತೆ ಕ್ರಮಕೆ ಸೂಚಿಸಿದರು.

ಈ‌ ವೇಳೆ ಪ್ರಾಧಿಕಾರದ ಸ್ವಯಂ‌ ಸೇವಕರಾದ ಆರ್.ಎಚ್.‌ಪೂಜಾರ, ಬಸವರಾಜ ಗಡಾದ ಇನ್ನಿತರರು‌ ಉಪಸ್ಥಿತರಿದ್ದು ಸಾಥ್ ನೀಡಿದರು..

Get real time updates directly on you device, subscribe now.

Comments are closed.

error: Content is protected !!