ರಂಗಾಯಣ ಕಲಬುರಗಿದ್ದೊ… ? ಅಥವಾ ಏಳೂ ಜಿಲ್ಲೆಗಳದ್ದೊ…..?- ರಂಗಕರ್ಮಿ ಶರಣು ಶೆಟ್ಟರ್ ಪ್ರಶ್ನೆ

Get real time updates directly on you device, subscribe now.

ರಂಗಕರ್ಮಿಯ ಪ್ರಶ್ನೆ
ಈ ಕುರಿತು ಪ್ರಕಟಣೆ ನೀಡಿರುವ ಅವರು
ಕಳೆದ 12 ವರ್ಷಗಳಿಂದ ಕಲ್ಯಾಣ ಕರ್ನಾಟಕ (ಹೈದರಾಬಾದ್ ಕರ್ನಾಟಕ ) ವಿಭಾಗದಲ್ಲಿ ರಾಜ್ಯ ಸರ್ಕಾರದ ಸಾಂಸ್ಕೃತಿಕ ಸ್ವಾಯತ್ತ ಸಂಸ್ಥೆಯಾಗಿ ಕಲಬುರ್ಗಿ ರಂಗಾಯಣ  ಕೆಲಸ ಮಾಡುತ್ತಿದೆ.
ಈ ರಂಗಾಯಣವು ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಾದ *ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ,ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ* ಜಿಲ್ಲೆಯ ರಂಗಭೂಮಿಗೆ ಸಂಬಂಧಿತ ಸರಕಾರದ ಸಾರ್ವಜನಿಕ ಸಂಸ್ಥೆಯಾಗಿದೆ.
 ದುರಂತವೆನಂದರೆ ಈ ರಂಗಾಯಣವು ಕಲಬುರ್ಗಿ ಜಿಲ್ಲೆಗೆ ಮಾತ್ರ ಸಿಮಿತವಾದಂತೆ ಭಾಸವಾಗಿದೆ,ಕಾರಣ ಯಾಕೆ ಈ ವಿಷಯವನ್ನ  ಪ್ರಸ್ತಾಪ ಮಾಡತಿದಿನಿ ಅಂದ್ರೆ ಏಳು ಜಿಲ್ಲೆಗಳನ್ನು ಒಳಗೊಂಡಂತೆ, ರಂಗಾಯಣ ಅತಿ ಹೆಚ್ಚು ನಟ-ನಟಿಯರ  ಆಯ್ಕೆಯಾಗುವುದು, ಕಲಬುರ್ಗಿಯಿಂದ, ಮಕ್ಕಳ ಶಿಬಿರಗಳನ್ನ ನಡೆಸುವ ನಿರ್ದೇಶಕರ ಆಯ್ಕೆ, ಮಕ್ಕಳ ನಾಟಕಗಳ ನಿರ್ದೇಶಕರ ಆಯ್ಕೆಯು ಕಲಬುರ್ಗಿಯವರೇ, ರಂಗಾಯಣದ ಹಲವು ಯೋಜನೆಗಳಿಗೆ ಸಂಯೋಜಕ ನಿರ್ದೇಶಕರ ಆಯ್ಕೆ ಕಲಬುರ್ಗಿ ಜಿಲ್ಲೆಯ ರಂಗಕರ್ಮಿಗಳ ಹೆಸರೆ ಅಲ್ಲಿಯ ದಾಖಲಾತಿಯಲ್ಲಿ ಕಾಣಸಿಗುತ್ತವೆ.
ಬೆರಳೆಣಿಕೆಯಲ್ಲಿ ಹೊರಗಿನ ನಿರ್ದೇಶಕರು ಬಂದು ಕೆಲಸ ಮಾಡಿದ್ದು ನೆನಪಿದೆ.
ತರಬೇತಿಯೊಂದಿಗೆ ಕಾಲೇಜು ರಂಗೋತ್ಸವ ಒಂದನ್ನು ಬಿಟ್ಟರೆ ಬೇರೆ ಯಾವ ಯೋಜನೆಗಳು ನಾಟಕೋತ್ಸವ, ವಿಚಾರ ಸಂಕಿರಣಗಳು, ಚರ್ಚೆ-ಸಂವಾದಗಳು.
 ಈ ಉಳಿದ ಜಿಲ್ಲೆಗಳಿಗೆ ತಲುಪಿದ್ದು ಬಹಳ ಕಡಿಮೆ.
ಈ ಭಾಗದಲ್ಲಿ ರಂಗಾಯಣದ ಚಟುವಟಿಕೆಗಳು ಶುರುವಾಗಿ 12 ವರ್ಷಗಳು ಕಳೆದಿವೆ,  ಮೂರು ಜನ ರಂಗಾಯಣ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ,
ಒಂದು ಬಾರಿ ಬೀದರ್ ಜಿಲ್ಲೆಯಿಂದ ನಿರ್ದೇಶಕರಾಗಿ ಆಯ್ಕೆಯಾದರೆ,
 ಎರಡೂ ಅವಧಿಗೆ ಗುಲಬರ್ಗಾ ಜಿಲ್ಲೆಯ ವ್ಯಕ್ತಿಗಳೆ ನಿರ್ದೇಶಕರಾಗಿ ಆಯ್ಕೆ ಆಗಿದ್ದಾರೆ.
ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಈ ರಂಗಾಯಣವು ಸಾಮಾಜಿಕ ನ್ಯಾಯದಡಿ ಏಳೂ ಜಿಲ್ಲೆಗಳಿಗೆ ಸಂಭಂದಿಸಿದ್ದು ಉಳಿದ ಜಿಲ್ಲೆಗಳಾದ ಕೊಪ್ಪಳ, ರಾಯಚೂರು,ಬಳ್ಳಾರಿ, ವಿಜಯನಗರ ಮತ್ತು ಯಾದಗಿರಿ ಈ ಜಿಲ್ಲೆಗಳಿಂದ ಈವರೆಗೂ ಯಾರೂ ರಂಗಾಯಣದ ನಿರ್ದೇಶಕರಾಗಿ, ರೆಪರ್ಟರಿಯ ಪ್ರಮುಖ ನಾಟಕಗಳ ನಿರ್ದೇಶಕರಾಗಿ, ಪ್ರಮುಖ ಯೋಜನೆಗಳ ಸಂಯೋಜಕ ಅಥವಾ ನಿರ್ದೇಶಕರಾಗಿ, ಸಂಘಟಕರಾಗಿ ಕೆಲಸ ಮಾಡಿರುವ ದಾಖಲೆಗಳೇ ಇಲ್ಲಾ ಇಂತವುಗಳಿಗೆ  ಉಳಿದ ಜಿಲ್ಲೆಗಳಿಂದ ಆಯ್ಕೆ ಆಗದೆ ಇರುವ ಪಾಪ  ರಂಗಕರ್ಮಿಗಳ,ಕಲಾವಿದರುಗಳ ದುರದೃಷ್ಟಕ ಸಂಗತಿ.
 ರಾಜ್ಯದಲ್ಲಿ ಸರಕಾರ ರಚನೆಯಾಗಿ ಒಂದು ವರ್ಷ ಕಳೆದರು ರಾಜ್ಯದ ಆರು ರಂಗಾಯಣಗಳಿಗೆ ನಿರ್ದೇಶಕರ ಆಯ್ಕೆಯಾಗಿಲ್ಲಾ ಕೆಲವು ದಿನಗಳ ಬೆಳವಣಿಗೆಯ ಪ್ರಕಾರ 12-7-2024 ರ ಪ್ರಜಾವಾಣಿ ಪತ್ರಿಕೆಯಲ್ಲಿ (ಕಲಬುರಗಿ) ಒಂದು ಸುದ್ದಿ ಪ್ರಕಟವಾಗಿದೆ ಅದು ಹೀಗಿದೆ ” ಕಲಬುರಗಿ ರಂಗಾಯಣಕ್ಕೆ ಹಿರಿಯ ರಂಗಕರ್ಮಿ ಶಂಕ್ರಯ್ಯ ಘಂಟಿ, ಸಾಹಿತಿ ಮತ್ತು ಪತ್ರಕರ್ತ ಮಹಿಪಾಲ್ ರೆಡ್ಡಿ, ರಂಗ ಕಲಾವಿದ ಸಂದೀಪ್, ಈ ಮೂರು ಹೆಸರುಗಳನ್ನ ಸಿ ಬಸಲಿಂಗಯ್ಯ ಅವರ ಶಿಫಾರಸ್ಸಿನ ಮೇರೆಗೆ ರಂಗಸಮಾಜ ಅಂತಿಮ ಗೊಳಿಸಿದೆ.
ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಮೂವರಲ್ಲಿ ಒಬ್ಬರನ್ನ ಆಯ್ಕೆ ಮಾಡಬಹುದು ಎಂದು ” ಪ್ರಜಾವಾಣಿ ತನ್ನ ವರದಿಯಲ್ಲಿ ತಿಳಿಸಿದೆ.  ಈ ಕಲ್ಯಾಣ ಕರ್ನಾಟಕ ಅಥವಾ ಉತ್ತರ ಕರ್ನಾಟಕ ಭಾಗದಲ್ಲಿ ಸರಕಾರಕ್ಕೆ ಸಲಹೆ ನೀಡುವವರು ಯಾರು ಇಲ್ಲವೆ ?  ಪದೆ ಪದೆ ಬೆಂಗಳೂರು ಮತ್ತು ಮೈಸೂರು ಭಾಗದವರು ಸಲಹೆ ನೀಡೊದು ಎಷ್ಟಸರಿ ?
ಈ ಭಾಗದ ಹಿರಿಯ ಬುದ್ದಿಜೀವಿಗಳು ಸರ್ಕಾರಕ್ಕೆ ಸಲಹೆ ಕೊಟ್ಟಿದ್ದರೆ   (ಕಲಬುರಗಿ ಮತ್ತು ಬೀದರ್ ಬಿಟ್ಟು )ಉಳಿದ ಜಿಲ್ಲೆಯ – ರಂಗಕರ್ಮಿಗಳ ಹೆಸರು ಇರುತ್ತಿದ್ದವೆನೊ !!
 ಈ 5 ಜಿಲ್ಲೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುವ ರಂಗಕರ್ಮಿಗಳೆ ಇಲ್ಲವೆ ?
ರಂಗ ಚಟುವಟಿಕೆಗಳೇ  ನಡೆಯುತಿಲ್ಲವೆ ? ಸಮರ್ಥ ರಂಗಕರ್ಮಿಗಳನ್ನ ಹುಡುಕುವ ಪ್ರಯತ್ನ ರಂಗಸಮಾಜ ಮತ್ತು ಸರಕಾರ ಮಾಡಬೇಕಿದೆ.
ಈ ಬಾರಿಯು ಕಲ್ಬುರ್ಗಿಯ ಮೂರು ಜನರ  ಶಿಫಾರಸ್ಸಿಗೆ ಹೆಸರುಗಳು ಕೇಳಿ ಬಂದಿದ್ದು ಬಹಳ ಬೇಸರ ತಂದಿದೆ.
ಇನ್ನೂ ಕಾಲ ಮಿಂಚಿಲ್ಲ ರಂಗ ಸಮಾಜ ಸರಕಾರ ಇದನ್ನು ಗಮನಿಸಿ ಎಚ್ಚೆತ್ತುಕೊಂಡು ಆಯ್ಕೆಯನ್ನು ಪಾರದರ್ಶಕವಾಗಿ ಮಾಡಬೇಕು ಇಲ್ಲವಾದಲ್ಲಿ ಉಳಿದ ಜಿಲ್ಲೆಯ ಎಲ್ಲಾ ಕಲಾವಿದರ ಸಂಘಟನೆಯೊಂದಿಗೆ ಹೋರಾಟ ಮಾಡಬೇಕಾಗುತ್ತದೆ.
ಶರಣು ಶೆಟ್ಟರ್
 ರಂಗಕರ್ಮಿ,ಕೊಪ್ಪಳ

Get real time updates directly on you device, subscribe now.

Comments are closed.

error: Content is protected !!