ಸಾಮಾಜಿಕ ಕಳಕಳಿ ಹಾಗೂ ಸ್ಪಂದನೆಯ ನೆಲೆಯಲ್ಲಿ ಪತ್ರಿಕೋದ್ಯಮ ಕಾರ್ಯ ಮಾಡಬೇಕಿದೆ:ಪತ್ರಕರ್ತ ಕೆ.ನಿಂಗಜ್ಜ
ರೋಟರಿ ಸಂಸ್ಥೆಯಿಂದ ಪತ್ರಿಕಾ ದಿನಾಚರಣೆ – ಪತ್ರಕರ್ತರಿಗೆ ಸನ್ಮಾನ
ಗಂಗಾವತಿ: ಸಾಮಾಜಿಕ ಕಳಕಳಿ ಮತ್ತು ಸ್ಪಂದನೆಯ ನೆಲೆಯಲ್ಲಿ ಪತ್ರಿಕೋದ್ಯಮ ಕಾರ್ಯನಿರ್ವಹಣೆಯಿಂದ ಸಮಾಜಕ್ಕೆ ಒಳಿತಾಗುತ್ತದೆ. ವ್ಯಕ್ತಿಗತ ಮತ್ತು ತೇಜೋವಧೆಯ ಪತ್ರಿಕೋದ್ಯಮದಿಂದ ಸಾಮಾಜಿಕ ವಿಘಟನೆಯಾಗುವ ಅಪಾಯವಿದೆ. ಹಿರಿಯ ಪತ್ರಕರ್ತರ ಮಾರ್ಗದಲ್ಲಿ ಯುವಪತ್ರಕರ್ತರು ಸಾಗಿ ಸಾಮಾಜಿಕ ಒಳಿತಿಗೆ ಸಹಕಾರಿಯಾಗುವಂತೆ ಕನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಕೆ.ನಿಂಗಜ್ಜ ಹೇಳಿದರು.
ಅವರು ಜಯನಗರದಲ್ಲಿ ರೋಟರಿ ಕ್ಲಬ್ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಪತ್ರಿಕಾ ವೃತ್ತಿ ಅತ್ಯಂತ ಪವಿತ್ರವಾದದ್ದು ಜನತೆಗೆ ನಾವು ಸತ್ಯ ಸಂಗತಿ ತಿಳಿಸುವಾಗ ನಾವು ನಿ?ರತೆ ಯಿಂದ ಇರಬೇಕು. ಸಮಾಜಕ್ಕಾಗಿ ನಾವು ಎಂಬ ಭಾವನೆ ಇರಬೇಕು ಸಾಮಾಜಿಕ ಜಾಲತಾಣಗಳ ಅಬ್ಬರದಲ್ಲೂ ಪತ್ರಿಕೆಗಳು ಇನ್ನೂ ಜನರ ವಿಶ್ವಾಸಾರ್ಹತೆಯನ್ನು ಉಳಿಸಿ ಕೊಂಡಿವೆ. ಇದನ್ನು ಉಳಿಸಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬ ಪತ್ರಕರ್ತರ ಮೇಲಿದೆ ಎಂದರು.
ರೋಟರಿ ಕ್ಲಬ್ ಅಸಿಸ್ಟೆಂಟ್ ಗವರ್ನರ್ ಮಹೇಶ ಸಾಗರ ಮಾತನಾಡಿ, ಪತ್ರಕರ್ತರು ಸಾಮಾಜಿಕ ಜಾಲತಾಣಗಳ ಸುದ್ದಿಗಳಿಗಿಂತಲೂ ನಂಬಿಕೆಗೆ ಅರ್ಹವಾದ ಸುದ್ದಿಗಳನ್ನು ಮತ್ತು ಧ್ವನಿ ಇಲ್ಲದವರಿಗೆ ಧ್ವನಿಯಾಗುವ ಸಾಮಾಜಿಕ ಕಳಕಳೆಯ ಕಾರ್ಯ ಕೈಗೊಳ್ಳುವ ಉತ್ತಮ ಪತ್ರಕರ್ತರು ಆಗಲಿ ಎಂದರು. ರೋಟರಿ ಕಾರ್ಯದರ್ಶಿ ವಾಸು ಕೊಳಗದ ಮಾತನಾಡಿ, ನಮ್ಮ ಸಂಸ್ಥೆ ೨೫ ವ?ಗಳಲ್ಲಿ ಹಲವಾರು ಸೇವಾ ಕಾರ್ಯಗಳನ್ನು ಕೈಗೊಂಡಿದ್ದು ನಮ್ಮ ಕಾರ್ಯಕ್ಷೇತ್ರ ಮತ್ತು ಸಲ್ಲಿಸುವ ಸೇವೆ ಯನ್ನು ಸಮಾಜಕ್ಕೆ ಸುದ್ದಿ ವಾಹಿನಿ ಯಲ್ಲಿ ಬಿತ್ತರಿಸುವ ಕಾರ್ಯ ನಮ್ಮ ಪತ್ರಕರ್ತರು ನಡೆಸಿಕೊಂಡು ಬಂದಿರುವುದು ನಮಗೆಲ್ಲ ಸಂತಸ ತಂದಿದೆ. ಅದರಂತೆ ಮುಂದೆಯೂ ಸಹ ನಮ್ಮ ಸಂಸ್ಥೆಗೆ ಸಹಾಯ ಸಹಕಾರ ಮಾರ್ಗದರ್ಶನ ಇರಲಿ ಎಂದರು.
ಪತ್ರಿಕಾ ದಿನಾಚರಣೆಯ ನಿಮಿತ್ತ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ನೂತನವಾಗಿ ನೇಮಕಗೊಂಡಿರುವ ಪತ್ರಕರ್ತರಾದ ಕೆ.ನಿಂಗಜ್ಜ, ಚಂದ್ರಶೇಖರ ಮುಕ್ಕುಂದಿ ಹಾಗೂ ದೇವರಾಜ್ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಟಿ.ಆಂಜನೇಯ, ಕಾರ್ಯದರ್ಶಿ ವಾಸು ಕೊಳಗದ, ಸಲಾಹುದ್ದೀನ್ ಎಸ್. ಸುರಪುರ, ಎಂ ಗುರುರಾಜ್, ಶ್ರೀಧರ್ ನಾಯಕ್, ಎ. ಶಿವಕುಮಾರ, ಎಚ್. ಎಂ. ಮಂಜುನಾಥ, ಸುರೇಶ ಸೋಲಂಕಿ, ಎ.ಜಗದೀಶ, ಮಂಜುನಾಥ ಹುಡೇದ, ಡಾ.ಎಂ ಟಿ ಮಹಾಂತೇಶ, ಡಾ. ಎಸ್ .ಬಿ. ಗೌಡರ್ ಸೇರಿ ರೋಟರಿ ಕ್ಲಬ್ ಪದಾಧಿಕಾರಿಗಳಿದ್ದರು.
Comments are closed.