ಮಂಜುನಾಥ ಗೊಂಡಬಾಳರಿಗೆ “ಸಮಾಜ ಸೇವಾರತ್ನ” ಪ್ರಶಸ್ತಿ

Get real time updates directly on you device, subscribe now.


ಕೊಪ್ಪಳ : ಇಲ್ಲಿನ ಸಮಾಜ ಸೇವಕ, ಪರ್ತಕರ್ತ ಮಂಜುನಾಥ ಜಿ. ಗೊಂಡಬಾಳ ಅವರಿಗೆ ಸಿಂಧನೂರಿನಲ್ಲಿ ನಡೆದ ರಾಜ್ಯಮಟ್ಟದ ಕರೋಕೆ ಗಾಯನ ಸ್ಪರ್ಧೆಯ ಸಮಾರೋಪದಲ್ಲಿ ರಾಜ್ಯಮಟ್ಟದ “ಸಮಾಜ ಸೇವಾ ರತ್ನ” ಪ್ರಶಸ್ತಿ ನೀಡಿ ಗೌರವಿಸಿದರು.
ಕರ್ನಾಟಕ ಸರಕಾರದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರೂ ಆಗಿರುವ ಅವರು, ಮೂರು ದಶಕಗಳಿಮದ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿದ್ದು, ತಮ್ಮ ೧೭ನೇ ವರ್ಷಕ್ಕೆ ಬ್ಲ್ಯೂ ಸ್ಟಾರ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಸ್ಥಾಪನೆ ಮಾಡಿ ಇದುವರೆಗೆ ಸಾವಿರಾರು ಕಾರ್ಯಕ್ರಮಗಳನ್ನು ಮಾಡಿದ್ದಾರೆ.
ಕೊಪ್ಪಳ ಜಿಲ್ಲಾ ಕನಕಗಿರಿಯ ಐತಿಹಾಸಿಕ ಕನಕಗಿರಿ ಉತ್ಸವವನ್ನು ಮೊದಲ ಬಾರಿಗೆ ತಮ್ಮ ಸಂಸ್ಥೆಯಿಂದ ೨೦೦೮ ರಲ್ಲಿ ಆರಂಭಿಸಿದ್ದರು, ಗಂಡುಗಲಿ ಕುಮಾರ ರಾಮನ ನೆಲೆ ಜಬ್ಬಲಗುಡ್ಡದಲ್ಲಿ ಕುಮ್ಮಟದುರ್ಗೋತ್ಸವವನ್ನು ನಾಲ್ಕು ಬಾರಿ ಆಚರಿಸಿದ್ದಾರೆ, ಅದೂ ಅಲ್ಲದೇ ಕುಷ್ಟಗಿಯ ಐತಿಹಾಸಿಕ ಕೋಟಿಲಿಂಗ ಪುರ ಉತ್ಸವ ಮಾಡಿದ ಹೆಗ್ಗಳಿಕೆ ಅವರದು.
ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ, ಕನ್ನಡ ಜಾನಪದ ಪರಿಷತ್ ಮತ್ತು ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆಯ ನೇತೃತ್ವವಹಿಸಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಸಿನೆಮಾ ರಂಗದಲ್ಲಿ ಕೆಲಸ ಮಡಿದ ಇವರು, ಉತ್ತರ ಕರ್ನಾಟಕ ಚಲನಚಿತ್ರ ವಾಣೀಜ್ಯ ಮಂಡಳಿಯನ್ನು ಗಟ್ಟಿಗೊಳಿಸಿ ಅದರ ಪ್ರಧಾನ ಕಾರ್ಯದರ್ಶಿಯಾಗಿ ಸಹ ಕೆಲಸ ಮಾಡಿದ್ದಾರೆ.
ಜೀವಮಾನದ ಈ ಸಾಧನೆ ಪರಿಗಣಿಸಿ ರಾಜ್ಯಮಟ್ಟದಲ್ಲಿ ಪ್ರಶಸ್ತಿ ನೀಡಿದ ಸಂದರ್ಭದಲ್ಲಿ ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ವಕೀಲ ನಬಿಸಾಬ ಸಿಂಧನೂರು, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕಲಾವಿದ ಬಸವರಾಜ ಗಸ್ತಿ, ಗುರು ಅಕಾಡಮಿಯ ರುದ್ರಪ್ಪ ಗೋಳ, ನಿವೃತ್ತ ಯೋಧ ಸುರೇಶ, ಅನೇಕ ಕಲಾವಿದರು, ಸಾಧಕರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!