೩೭೧ (ಜೆ) ಮೀಸಲಾತಿ – ಹೋರಾಟ ರೂಪಿಸಲು ಪೂರ್ವ ಭಾವಿ ಸಭೆ
ಕೊಪ್ಪಳ, ೦೯- ಕಲ್ಯಾಣ ಕರ್ನಾಟಕ ಭಾಗಕ್ಕೆ ಆಗುತ್ತಿರುವ ಅನ್ಯಾಯ ಖಂಡಿಸಿ ೩೭೧ (ಜೆ) ಮೀಸಲಾತಿ ಗೊಂದಲ ಸರಿಪಡಿಸಿ ಸಮರ್ಪಕ ಅನುಷ್ಠಾನಕ್ಕೆ ಆಗ್ರಹಿಸಿ ಹೋರಾಟ ರೂಪಿಸಲು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಯುವ ಘಟಕ ದಿಂದ ಪೂರ್ವ ಸಭೆ ಕರೆಯಲಾಗಿದೆ.
ಕೊಪ್ಪಳದ ಮಹಾಂತಯ್ಯನಮಠ ಕಲ್ಯಾಣ ಮಂಟಪದಲ್ಲಿ ಇದೇ ಶನಿವಾರ ಜುಲೈ ೧೩ ರಂದು ಸಂಜೆ ೫ ಕ್ಕೆ ವಿವಿಧ ಸಂಘ ಸಂಸ್ಥೆಗಳ ಸಭೆ ಕರೆಯಲಾಗಿದೆ.
ಅಂದು ಹೋರಾಟ ರೂಪರೇಷೆ ಸೇರಿದಂತೆ ಸಮಗ್ರ ಚರ್ಚೆ ನಡೆಯಲಿದ್ದು ಎಲ್ಲ ಜನ ಪರ ಸಂಘಟನೆಗಳು ಭಾಗವಹಿಸಿ ಯಶಸ್ವಿ ಗೋಳಿಸುವಂತೆ ಯುವ ಘಟಕ ಅಧ್ಯಕ್ಷ ರಮೇಶ ತುಪ್ಪದ, ಮುಖಂಡರಾದ ಶಿವಕುಮಾರ ಕುಕನೂರ, ಮಂಜುನಾಥ ಅಂಗಡಿ, ಸಂತೋಷ ದೇಶಪಾಂಡೆ ಸೇರಿದಂತೆ ಇತರರು ಪ್ರಕಟಣೆಯಲ್ಲಿ ಕೋರಿದ್ದಾರೆ.
Comments are closed.