ಜಿಲ್ಲೆಯಲ್ಲಿ ವಂದೇ ಭಾರತ್ ರೈಲು ಸಂಚಾರ ಆರಂಭಿಸಿ- ಡಾ.ಬಸವರಾಜ
ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಮನವಿ -ಮನವಿಗೆ ಕೇಂದ್ರ ಸಚಿವರ ಸಕಾರಾತ್ಮಕ ಸ್ಪಂದನೆ
ಕೊಪ್ಪಳ: ಜಿಲ್ಲೆಯಿಂದ ಬೆಂಗಳೂರಿಗೆ ವಂದೇ ಭಾರತ್ ರೈಲು ಸಂಚಾರ ಸೇರಿ ಜಿಲ್ಲೆಯ ರೈಲ್ವೆ ಅಭಿವೃದ್ಧಿ ಕಾಮಗಾರಿ ಬಗ್ಗೆ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ. ಬಸವರಾಜ ಕೆ. ಶರಣಪ್ಪ ಅವರು ಮನವಿ ಸಲ್ಲಿಸಿದರು.
ಈ ಸಂಬಂಧ ಪ್ರಕಟಣೆ ನೀಡಿದ ಅವರು, ದೆಹಲಿಯಲ್ಲಿ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಭೇಟಿಯಾಗಿ ಕೊಪ್ಪಳ ಜಿಲ್ಲೆಯ ರೈಲ್ವೆ ಅಭಿವೃದ್ಧಿ ಕಾಮಗಾರಿ ಸ್ಥಿತಿಗತಿ, ಅಗತ್ಯ ಕಾಮಗಾರಿ ಬಗ್ಗೆ ಮನವರಿಕೆ ಮಾಡಲಾಗಿದೆ. ಜಿಲ್ಲೆಗೆ ಸಂಬಂಧಿಸಿದ ರೈಲ್ವೆ ಯೋಜನೆಗಳ ಬಗ್ಗೆ ಮನವಿ ನೀಡಲಾಗಿದೆ. ಇದಕ್ಕೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದ್ದಾರೆ.
ಕುಷ್ಟಗಿಯಲ್ಲಿ ರೈಲ್ವೆ ಹಳಿ ಹಾಕಲಾಗಿದ್ದು, ಪ್ರತಿನಿತ್ಯ ಹುಬ್ಬಳ್ಳಿ- ಕುಷ್ಟಗಿ ರೈಲು ಸಂಚಾರ ನಡೆಸಿದರೆ ಈ ಭಾಗದ ಜನತೆಗೆ ಅನುಕೂಲವಾಗಲಿದೆ. ಇನ್ನು ಗಂಗಾವತಿ- ದರೋಜಿ ಹಾಗೂ ಗಂಗಾವತಿ – ಬಾಗಲಕೋಟೆ ರೈಲು ಸಂಚಾರಕ್ಕೆ ಸರ್ವೇ ನಡೆಸಲಾಗಿದ್ದು, ರೈಲ್ವೆ ಇಲಾಖೆಗೆ ಸರ್ವೇ ವರದಿ ಸಲ್ಲಿಕೆಯಾಗಿದೆ. ಈ ಕಾಮಗಾರಿ ಯನ್ನು ಶೀಘ್ರವೇ ಕೈಗೆತ್ತಿಕೊಳ್ಳಬೇಕು. ಬೆಳಗಾವಿ – ಭದ್ರಾಚಲ ರೈಲ್ವೆ ಮರ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಲಾಗಿದೆ.
ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಬನ್ನಿಕೊಪ್ಪ ಹಾಗೂ ಕೊಪ್ಪಳ ವಿಧಾನಸಭಾ ಕ್ಷೇತ್ರದ ಅಗಳಕೇರಾ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಿಸಬೇಕು. ಹುಬ್ಬಳ್ಳಿ- ಬೆಂಗಳೂರು ನಡುವೆ ವಂದೇ ಭಾರತ್ ರೈಲು ಸಂಚಾರ ನಡೆಸುತ್ತಿದ್ದು, ಈ ರೈಲು ಗದಗ, ಕೊಪ್ಪಳ, ಬಳ್ಳಾರಿ ಮೂಲಕ ಸಂಚರಿಸುವಂತೆ ಆದರೆ , ಜಿಲ್ಲೆಯ ಜನತೆಗೆ ಅನುಕೂಲವಾಗಲಿದೆ ಎಂದು ಮನವಿ ಸಲ್ಲಿಸಲಾಗಿದೆ. ಈ ಎಲ್ಲ ಬೇಡಿಕೆಗಳನ್ನು ಅಧಿಕಾರಿಗಳ ಜತೆ ಚರ್ಚಿಸಿ ಶೀಘ್ರ ಬೇಡಿಕೆ ಈಡೇರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
*ಏನೆಲ್ಲ ಬೇಡಿಕೆಗಳು* -ಕುಷ್ಟಗಿ- ಹುಬ್ಬಳ್ಳಿಗೆ ನಿತ್ಯ ರೈಲು ಸಂಚಾರ
-ಗಂಗಾವತಿ- ದರೋಜಿ ಹಾಗೂ ಗಂಗಾವತಿ- ಬಾಗಲಕೋಟೆ ರೈಲು ಕಾಮಗಾರಿ
-ಬನ್ನಿಕೊಪ್ಪ, ಅಗಳಕೇರ ಬಳಿ ರೈಲ್ವೆ ಮೇಲ್ಸೆತುವೆ
-ಕೊಪ್ಪಳ- ಬೆಂಗಳೂರು ವಂದೇ ಭಾರತ್ ರೈಲು ಸಂಚಾರ
-ಬೆಳಗಾವಿ- ಭದ್ರಾಚಲ ರೈಲ್ವೆ ಮರು ಸಂಚಾರ
Comments are closed.