ವಿಶ್ವ ಜನಸಂಖ್ಯೆ ದಿನದ ಒಂದು ಅರಿವಿನ ಅವಲೋಕನ- ಡಾ|| ಗವಿಸಿದ್ದಪ್ಪ ಮುತ್ತಾಳ

Get real time updates directly on you device, subscribe now.

*ಜುಲೈ ೧೧ರಂದು ’ವಿಶ್ವ ಜನಸಂಖ್ಯಾ ದಿನ’ಎಂದು ಕರೆಯಲಾಗುತ್ತಿದೆ. ಜಾಗತಿಕವಾಗಿ ಜನಸಂಖ್ಯೆ ಏರುತ್ತಿರುವ ವೇಗ ನೋಡಿ
ವಿಶ್ವಸಂಸ್ಯೆ ೧೯೮೭ರ ವರ್ಷದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಮುನ್ನುಡಿ ಬರಯಯಿತು. ಆ ದಿನದಂದು ವಿಶ್ವ ಜನಸಂಖ್ಯೆ ೫ ಬಿಲಿಯನ್ ತಲುಪಿತ್ತು. ಎನ್ನಲಾಗಿದೆ. ವಿಶ್ವದಲ್ಲಿ ಜನಸಂಖ್ಯೆಯ ಕುರಿತಾದ ವಿವಿಧ ಸಮಸ್ಯೆಗಳ ಕುರಿತಾಗಿ ವಿಶ್ವ ಸಮುದಾಯದ ಗಮನ ಸೆಳೆಯುವುದಯೇ ಈ ಆಚರಣೆಯ ಪ್ರಮುಖ ಉದ್ದೇಶ. ವಿಶ್ವ ಜನಸಂಖ್ಯಾ ದಿನ ಆಚರಣೆಯ ಉದ್ದೇಶ ಆರೋಗ್ಯಕರ ಜೀವನ ಮತ್ತು ಸಣ್ಣ ಕುಟುಂಬಗಳ ಪ್ರಾಮುಖ್ಯತೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು. ಜನಸಂಖ್ಯಾ ಸ್ಪೋಟದಿಂದಾಗುವ  ಅಪಾಯಗಳು, ಕುಟುಂಬ ಯೋಜನೆಗೆ ಆದ್ಯತರ, ಲಿಂಗ ಅಸಮಾನತೆ, ಬಡತನ, ಶಿಶು ಮರಣ, ಮಾನವ ಹಕ್ಕುಗಳು ಮತ್ತಿತರ  ಸಂಗತಿಗಳಲ್ಲಿ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶ. ಇದರಿಂದಾಗಿ ಜನಸಂಖ್ಯಾ ಬೆಳವಣಿಗೆಯಲ್ಲಿ ಕುಸಿತ ಕಂಡುಬಂದಿದೆ. ಜನಸಂಖ್ಯೆಯ ಸಮಸ್ಯೆಗಳ ಅರಿವು ಮೂಡಿಸಲು ವಿಶೇಷ ದಿನ ಪ್ರತಿ ವರ್ಷ ಜುಲೈ ೧೧ ವಿಶ್ವ ಜನಸಂಖ್ಯಾ ದಿನ. ಈ ಘಟನೆಯನ್ನು ಸುಮಾರು ಮೂರು ದಶಕಗಳಿಂದ ಆಚರಿಸಲಾಗುತ್ತದೆ ಮತ್ತು ಜನಸಂಖ್ಯೆಯ ಸಮಸ್ಯೆಗಳ ಪ್ರಾಮುಖ್ಯತೆಯ ಮೇಲೆ ವಿಶ್ವದ ಗಮನವನ್ನು ಕೆಂದ್ರಿಕರಿಸುವ ಗುರಿಯನ್ನು ಹೊಂದಿದೆ.

 

ವಿಶ್ವಸಂಸ್ಯೆಯ ಅಭಿವೃದ್ದಿ ಕಾರ್ಯಕ್ರಮದ ಆಡಳಿತ
ಮಂಡಳಿಯು ೧೯೮೯ ರಲ್ಲಿ ಅದರ ಪರಿಚಯವನ್ನು ಶಿಫಾರಸು ಮಾಡಿತು. ಈ ವಿಶೇಷ ದಿನದ ಸ್ಫೂರ್ತಿಯು ೧೧ನೇ ಜುಲೈ, ೧೯೮೭ ರಂದು “ಫೈವ್ ಬಿಲಿಯನ್ ಡೇ” ಎಂಬ ಆಸಕ್ತಿಯಿಂದ ಬಂದಿದೆ. ಇದು ವಿಶ್ವದ ಜನಸಂಖ್ಯೆಯ ೫ ಬಿಲಿಯನ್ ತಲುಪಿದ
ದಿನವಾಗಿದೆ. ೧೯೬೮ ರಲ್ಲಿ, ಮಾನವ ಹಕ್ಕುಗಳ ಅಂತರರಾಷ್ಟ್ರೀಯ ಸಮೇಳನವನ್ನು ನಡೆಸಲಾಯಿತು. ಮೊದಲ ಬಾರಿಗೆ,
ಕುಟುಂಬ ಯೇಜನೆ ಮಾನವ ಹಕ್ಕು ಎಂದು ದೃಢೀಕರಿಸಲಾಯಿತು. ಸಮ್ಮೇಳನದ ಸಮಯದಲ್ಲಿ ಅಳವಡಿಸಿಕೊಂಡ ಟೆಹ್ರಾನ್ ಘೋಷಣೆಯು, ತಮ್ಮ ಮಕ್ಕಳ ಸಂಖ್ಯೆ ಮತ್ತು ಅಂತರವನ್ನು ನಿರ್ಧರಿಸಲು ಪೋಷಕರ ಮೂಲಭೂತ ಹಕ್ಕು ಎಂದು
ಹೇಳುತ್ತದೆ. ಜಾಗತಿಕವಾಗಿ ಲಕ್ಷಾಂತರ ಮಹಿಳೆಯರಿಗೆ ಸುರಕ್ಷಿತ ಮತ್ತು ಪರಿಣಾಮಕಾರಿಕುಟುಂಬ ಯೋಜನೆ ವಿಧಾನಗಳಿಗೆ ಇನ್ನೂ ಪ್ರವೇಶವನ್ನು ನೀಡಲಾಗಿಲ್ಲ. ಅದಕ್ಕಾಗಿಯೇ ಇದನ್ನು ಹಿಂದಿನ ವರ್ಷಗಳಲ್ಲಿ ಕೆಂದ್ರಬಿಂದುವಾಯ್ಕೆ ಮಾಡಲಾಗಿದೆ.
ಸುರಕ್ಷಿತ ಮತ್ತು ಪರಿಣಾಮಕಾರಿ ಕುಟುಂಬ ಯೋಜನೆಯನ್ನು ಪಡೆಯುವುದು ಮೂಲಭೂತ ಮಾನವ ಹಕ್ಕು. ಇದು ಸ್ವಯಂಪ್ರೇರಿತ ಆಯ್ಕೆಯೂ ಆಗಿರಬೇಕು. ಲಿಂಗ ಸಮಾನತೆ ಮತ್ತು ಮಃಇಳಾ ಸಬಲೀಕರಣವು ಅದರ ಮೇಲೆ ಅವಲಂಬಿತವಾಗಿದೆ. ಇದಲ್ಲದೆ ಬಡತನವನ್ನು ಕಡಿಮೆ ಮಾಡುವಲ್ಲಿ ಇದು ಪ್ರಮುಖ ಅಂಶವಾಗಿದೆ.
-:ವಿಶ್ವ ಜನಸಂಖ್ಯಾ ದಿನದ ಬಗ್ಗೆ ನಿಮಗೇಷ್ಟು ಗೋತ್ತು?:-
* ಜಗತ್ತಿನಲ್ಲಿ ಒಟ್ಟು ೭.೪ ಜಗತಿ?ನ ಜನಸಂಖ್ಯೆ ಇದೆ
* ಜಗತ್ತಿನ ಒಟ್ಟು ಶತಕೋಟಿ ಜನಸಂಖ್ಯೆ ಅರ್ದದಷ್ಟು ಭಾಗ ೩೦ ವರ್ಷ ಮೇರಿದವರು.
* ಜಗತ್ತಿನ ಒಟ್ಟು ಜನಸಂಖ್ಯೆಯಲ್ಲಿ ಶೇ ೧೭.೫ ಪ್ರತಿಶತ ಭಾರತದಲ್ಲಿದೆ.
* ಭಾರತದ ಜನಸಂಖ್ಯೆಯಲ್ಲಿ ಶ.೪೧ ಪ್ರತಿಶತ ಜನರು ೨೦ ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ವಿಶ್ವದ
ಜನಸಂಖ್ಯೆಗೆ ಹೊಲಿಸಿದರೆ ೨೪ ಪ್ರತಿಶತ ಜನರು ೨೦ ವರ್ಷಕ್ಕಿಂತ ಕಡಿಮೆ ವಯಸ್ಸಿನವರು.
* ೨೦೧೧ ರ ಜನಗಣ್ತಿತಿಯ ಪ್ರಕಾರ ಭಾರತದ ನಗರ ಪ್ರದೇಶ ಜನಸಂಖ್ಯೆ ಶೇಕಡಾ ೩೨.೪ ಕ್ಯೆ ಏರಿದೆ.
* ಪ್ರತಿ ಸಂಕೆಂಡಿಗೆ ೪.೩ ಮಕ್ಕಳು ಹುಟ್ಟಿದರೆ ೧.೮ ಜನ ಸಾಯುತ್ತಾರೆ.
*ಜನಸಂಖ್ಯೆ ಏರಿಕೆಗೆ ಕಾರಣ:ಲಿಂಗ ಅಸಮಾನತೆ, ಬಾಲ್ಯವಿವಾಲ್ಯಾರೋಗ್ಯದ ಹಕ್ಕು, ಮಗುವಿನ ಆರೋಗ್ಯದ ಮೇಲಿನ ಪರಣಾಮಗಳು, ಕುಟುಂಬ ಯೋಜನೆ ಇಲ್ಲದೇ ಇರೋದು, ಮಾನವ ಹಕ್ಕುಗಳು, ಇದೆಲ್ಲದೆ ಜನರಲ್ಲಿ ಲೈಂಗಿಕತೆ, ಸಂತಾನೋತ್ಪತ್ತಿ ಮತ್ತು ಆರೋಗ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಾದ ಅನಿರ್ವಾತೆ ಇದೆ. ೨೦೨೭ರ ವೇಳೆಗೆ ಜನಸಂಖ್ಯೆಯಲ್ಲಿ ವಿಶ್ವದಲ್ಲಿಯೇ ಭಾರತವು ನಂಬರ್ ಇನ್ ಸ್ಥಾನಕ್ಕೆ ಏರಲಿದೆ.
ಇದರ ಜೋತೆಗೆ ೨೦೫೦ರ ಅವಧಿಯಲ್ಲಿ ಭಾರತದ ಜನಸಂಖ್ಯೆಗೆ ಹೆಚ್ಚುವರಿಯಾಗಿ ೨೭ ಕೋಟಿ ಜನಸಂಖ್ಯೆ
ಸೇರ್ಪಡೆಯಾಗಲಿದೆ. ಪ್ರಸಕ್ತ ಶತಮಾನದ ಅಂತ್ಯಕ್ಕೆ ಅಂದರೆ ೨೧೦೦ನಯೇ ಇಸವಿಗೆ ವಿಶ್ವದ ಜನಸಂಖ್ಯೆ ೧೧೦೦ ಕೋಟಿ
ತಲುಪಲಿದೆ ಎಂದು ವಿಶ್ವಸಂಸ್ಥೆಯ ಅರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ವಿಭಾಗದ ಅಧ್ಯಯನ ವರದಿ ಹೇಳಿದೆ. ೨೦೫೦ರ
ವೇಳೆಗೆ ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ ಅಗಲಿರುವ ಒಟ್ಟು ಏರಿಕೆಯಲ್ಲಿ ಶೇಕಡ ೫೦ಕ್ಕಿಂತ ಹೆಚ್ಚುಪಾಲು ಕೇವಲ ಒಂಬತ್ತುದೇಶಗಳಲ್ಲಿ ಇರಲಿದೆ. ಅವುಗಳೆಂದರೆ ಭಾರತ, ನೈಜೇರಿಯ, ಪಾಕಿಸ್ತಾನ, ಕಾಂಗೋ,ಇಥಿಯೋಪಿಯಾ, ತಾಂಜೇನಿಯಾ, ಇಂಡೋನೆಷೀಯ, ಈಜಿಪ್ತ್, ಮತ್ತು ಅಮೇರಿಕ,ವಿಶ್ವದ ಬಹುತೇಕ ಕಡೆಗಳಲ್ಲಿ ಕಳೆದ ಶತಮಾನದಲ್ಲಿ ಕಂಡ ಜನಸಂಖ್ಯೆಯ ಹೆಚ್ಚಳದಲ್ಲಿನ ತೀವ್ರಗತಿ ಇಂದು ಜಗತ್ತಿನಲ್ಲಿ ಲಭ್ಯೆ ವಿರುವ ಸೀಮಿತ ಸಂಪನ್ಮೂಲಗಳ ಮೇಲೆ ತೀವ್ರ ಪರಿಣಾಮಗಳನ್ನು ಬೀರುತ್ತಿವೆ. ಐಶಾರಾಮಿ ಜೀವನದತ್ತ ಚಂತಿತ ಇಂದಿನ ವೈಜ್ಞಾನಿಕ ಯುಗದಲ್ಲಂತೂ ಇದರ ಪರಿಣಾಮ ಹೇಳತೀರದ್ದಾಗಿದೆ. ಚರಿತ್ರೆಯಲ್ಲಿ ಹಿಂದೆ ಜನನ ಸಂಖ್ಯೆಯ ತೀವ್ರತೆಯ ಜೊತೆ ಜೊತೆಗೆ ಮರಣ ಸಂಖ್ಯೆಯ ತೀವ್ರತೆಯೂ ಹೆಚ್ಚಿತ್ತು. ಮುಂದುವರಿದ ವಿಜ್ಞಾನ ಯುಗದಲ್ಲಿ ಮನುಷ್ಯನ ಆಯುಷ್ಯದ ಹೆಚ್ಚಳ ಇರುವ ಜನಾಂಗದ ಬದುಕನ್ನು ಹೆಚ್ಚಿಸುವುದರ ಜೊತೆಗೆ ಜನನ ಸಂಖ್ಯೆಯನ್ನೂ ಹೆಚ್ಚಿಸುತ್ತಾ ನಡೆದಿದೆ. ಮನುಷ್ಯನ ವೈಜ್ಞಾನಿಕ ತಿಳುವಳಿಕೆ ಹೆಚ್ಚಿದಂತೆಲ್ಲಾ ಈ ಕುರಿತು ಹಲವಾರು ವಿಚಿತ್ರ ಪರಿಸ್ಥಿತಿಗಳೂ ತಲೆದೋರತೊಡಗಿವೆ. ಒಂದೆಡೆ ವಿದ್ಯಾವಂತ ಜನಾಂಗಗಳಲ್ಲಿ ನಮಗೆ ಜವಾಬ್ದಾರಿಗಳು ತಾಪತ್ರಯಗಳು ಬೇಡ, ಅದಕ್ಕೇ ನಮಗೆ ಮಕ್ಕಳೂ ಬೇಡ ಎಂಬ ಮನೋಭಾವಗಳು, ಕೆಲವು ಸಮಾಜಗಳಲ್ಲಿ ಜನಸಂಖ್ಯಾ ಬೆಳವಣಿಗೆಯನ್ನೇ ಇಲ್ಲವಾಗಿಸುವುತ್ತ ನಡೆದಿವೆ. ಮತ್ತೊಂದೆಡೆ ಕೆಲವು ಸಮಾಜಗಳು ಭ್ರೂಣ ಹಂತದಲ್ಲಿನ ಲಿಂಗ ನಿರ್ಧಾರಿತ ಕ್ರಮದಿಂದ ಜನನ ನಿಯಂತ್ರಣದ ತೀವ್ರವಾದಿ ಕ್ರಮಕ್ಕೆ ಎಡೆ ನೀಡಿ ಮಾನವ ಜನಾಂಗದ ಮಾನವೀಯ ಸಂಸ್ಕಾರ ಮತ್ತು ಮಾನವ ಸಮುದಾಯದ ಏಳೆಯಲ್ಲಿರಬೇಕಾದ ಸಮತೋಲನಕ್ಕೇ ಪೆಟ್ಟು ನೀಡುವ ಕ್ರಮಕ್ಕೆ ಕೈ ಹಾಕಿವೆ. ಇವೆಲ್ಲವುಗಳ ಜೊತೆ ಜೊತೆಯಲ್ಲಿ ಹೆಚ್ಚಿನ ಜನಗಳಲ್ಲಿ ಇನ್ನೂ ತುಂಬಿ ತುಳುಕುತ್ತಿರುವ ಬಡತನದಿಂದ ಕೂಡಿದ ಅಜ್ಞಾನ, ಮೌಡ್ಯಯುತ ಧಾರ್ಮಿಕ ಶ್ರದ್ದೆ, ಅಪಕ್ವ ಚಾಪಲ್ಯತೆ ಮುಂತಾದ ಕಾರಣಗಳು ಜನಸಂಖ್ಯೆಯ ಏರಿಕೆ ನಿರಂತರವಾಗಿ ಏರುಮುಖದತ್ತಲೇ ಇರುವಂತೆ ಮಾಡಿದೆ. ೧೯೮೬ರ ವರ್ಷದಲ್ಲಿ ೫೦೦ ಕೋಟಿ, ೧೯೯೮ರಲ್ಲಿ ೬೦೦ ಕೋಟಿ, ೨೦೧೧ರಲ್ಲಿ ೭೦೦ ಕೋಟಿ ಇದ್ದು ಇದೀಗ ೭೨೦ಕೋಟಿಗಳನ್ನು ದಾಟಿದೆ. ಇದೇ ಮುಂದುವರಿದ ಗತಿಯಲ್ಲಿ ಇದು ೨೦೨೪ರ ವೇಳೆಗೆ ೮೦೦ ಕೋಟಿ, ೨೦೩೯ರ ವೇಳೆಗೆ ೯೦೦ ಕೋಟಿ ತಲುಪಿ ೨೦೬೧ರ ವರ್ಷದಲ್ಲಿ ೧೦೦೦ ಕೋಟಿಯನ್ನು ತಲುಪುತ್ತದೆ ಎಂಬುದು ಸಂಖ್ಯಾಶಾಸ್ತ್ರಜ್ಞರ ಊಹೆಯಾಗಿದೆ. ವಿಶ್ವದ ಹೆಚ್ಚು ಜನಸಂಖ್ಯೆಯುಳ್ಳ ದೇಶಗಳು ಇಂತಿವೆ: ಚೀನಾ ೧೩೫ ಕೋಟಿ, ಭಾರತ ೧೨೦ ಕೋಟಿ, ಅಮೆರಿಕ ೩೨ ಕೋಟಿ, ಇಂಡೋನೇಷ್ಯಾ ೨೫ ಕೋಟಿ, ಬ್ರೆಜಿಲ್ ೨೦ ಕೋಟಿ, ಪಾಕಿಸ್ಥಾನ ೧೯ ಕೋಟಿ, ನೈಜೀರಿಯಾ ೧೮ ಕೋಟಿ, ಬಾಂಗ್ಲಾದೇಶ ೧೬ ಕೋಟಿ, ರಷ್ಯಾ ೧೪ ಕೋಟಿ, ಜಪಾನ್ ೧೩ ಕೋಟಿ.
*ವಿಶ್ವ ಜನಸಂಖ್ಯಾ ದಿನವನ್ನು ವಾರ್ಷಿಕವಾಗಿ ಜುಲೈ ೧೧ ರಂದು ಆಚರಿಸಲಾಗುತ್ತದೆ. ಆಚರಣೆಯ ಪ್ರಾಥಮಿಕ ಉದ್ದೇಶವು ಪ್ರಪಂಚದಾದ್ಯಂತ ವಾಸಿಸುವ ಜನರ ಮೇಲೆ ಕೇಂದ್ರೀಕರಿಸುವುದು ಮತ್ತು ಜನಸಂಖ್ಯೆಯ ಸಮಸ್ಯೆಗಳ ಪ್ರಾಮುಖ್ಯತೆಯ ಬಗ್ಗೆ ಅವರಿಗೆ ತಿಳಿಸುವುದು. ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲು ಒಂದು ನಿರ್ದಿಷ್ಟ ದಿನ ಅಸ್ತಿತ್ವದಲ್ಲಿದೆ ಎಂದು ಹೆಚ್ಚಿನ

ವ್ಯಕ್ತಿಗಳಿಗೆ ತಿಳಿದಿಲ್ಲ. ಈ ಆಚರಣೆಯ ಅಂತಿಮ ಗುರಿ ಅಧಿಕ ಜನಸಂಖ್ಯೆಯಿಂದ ಉಂಟಾಗುವ ತೊಂದರೆಗಳನ್ನು ಎತ್ತಿ ತೋರಿಸುವುದಾಗಿದೆ. ಇದು ಪರಿಸರ ವ್ಯವಸ್ಥೆಗೆ ಮತ್ತು ಮಾನವೀಯತೆಯ ಪ್ರಗತಿಗೆ ತೀವ್ರ ತೊಂದರೆಗಳನ್ನು ಉಂಟುಮಾಡುತ್ತದೆ. ಅಧಿಕ ಜನಸಂಖ್ಯೆಯಿಂದಾಗುವ ಹಾನಿಯ ಬಗ್ಗೆ ಜಾಗೃತಿ ಮೂಡಿಸುವುದು ಕಡ್ಡಾಯವಾಗಿದೆ.

-:ವಿಶ್ವ ಜನಸಂಖ್ಯೆಯ ಬಗ್ಗೆ ಐದು ಅದ್ಭುತ ಸಂಗತಿಗಳು:-
೧೮೦೦ ರಲ್ಲಿ ವಿಶ್ವದ ಜನಸಂಖ್ಯೆಯು ೧ ಬಿಲಿಯನ್ ತಲುಪಿತು ಪ್ರತಿ ವರ್ಷ, ವಿಶ್ವದ ಜನಸಂಖ್ಯೆಯು ೮೩ ಮಿಲಿಯನ್ ಹೆಚ್ಚಾಗುತ್ತಿದೆ. ಆಫ್ರಿಕಾದ ಒಟ್ಟು ಜನಸಂಖ್ಯೆಯು ವೇಗವಾಗಿ ಹೆಚ್ಚುತ್ತಿದೆ, ಆದರೆ ಯುರೋಪಿನ ಜನಸಂಖ್ಯೆಯು ಕುಗ್ಗುತ್ತಿದೆ.
ಜಾಗತಿಕ ಜೀವಿತಾವಧಿ ಪ್ರತಿ ವರ್ಷ ಹೆಚ್ಚುತ್ತಿದೆ. ೨೦೦೦ ರಲ್ಲಿ, ಸರಾಸರಿ ಜೀವಿತಾವಧಿ ೬೭ ವರ್ಷಗಳು, ೨೦ ವರ್ಷಗಳ ಬಳಿಕ ೭೨ಕ್ಕೆ ಏರಿಕೆಯಾಗಿದೆ ಮಿಲೇನಿಯಲ್ಸ್ (೧೯೮೧ ಮತ್ತು ೧೯೯೬ ರ ನಡುವೆ ಜನಿಸಿದ ವ್ಯಕ್ತಿಗಳು) ಪ್ರಪಂಚದ ಒಟ್ಟು ಜನಸಂಖ್ಯೆಯ ೨೭% ರಷ್ಟಿದ್ದಾರೆ; ಸುಮಾರು ೨ ಬಿಲಿಯನ್ ಜನರು ಈ ಪೀಳಿಗೆಯ ಭಾಗವಾಗಿದ್ದಾರೆ. ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ
*ಟಾಪ್ ಟೆನ್ ದೇಶಗಳು :
ಚೀನಾ,ಭಾರತ,ಯುನೈಟೆಡ್ ಸ್ಟೇಟ್ಸ್ ಇಂಡೋನೇಷ್ಯಾ ಪಾಕಿಸ್ತಾನ,ಬ್ರೆಜಿಲ್,ನೈಜೀರಿಯಾ,ಬಾಂಗ್ಲಾದೇಶ,ರಷ್ಯಾ,ಮೆಕ್ಸಿಕೋ
*ಸಾಮಾಜಿಕ ಜವಾಬ್ದಾರಿ ಬದಲಾಯಿಸಿ :- ಈ ಜನಸಂಖ್ಯೆಯ ಏರಿಕೆ ಬಹುತೇಕವಾಗಿ ಬಡತನ, ಅಜ್ಞಾನ, ಮೌಡ್ಯಯುತ ಧಾರ್ಮಿಕ ಶ್ರದ್ಧೆ, ಅಪಕ್ವ ಚಾಪಲ್ಯತೆ ಮುಂತಾದವುಗಳು ರಾರಾಜಿಸುತ್ತಿರುವ ದೇಶಗಳಲ್ಲೇ ಹೆಚ್ಚಾಗಿರುವುದು ಕಂಡುಬರುತ್ತಿವೆ. ಇದೇ ಸಮಯದಲ್ಲಿ ಮುಂದುವರಿದ ದೇಶಗಳಲ್ಲಿ ನಡೆಯುತ್ತಿರುವ ಅಪಕ್ವ ಅಮಾನವೀಯ ಜನಸಂಖ್ಯಾ ನಿಯಂತ್ರಣ ಕ್ರಮಗಳು ಸರಿ ಎನ್ನುವಂತಿಲ್ಲ ನಮ್ಮ ಮಕ್ಕಳನ್ನು ಜವಾಬ್ದಾರಿಯುತವಾಗಿ ಆಹಾರ, ಆರೋಗ್ಯ ಜ್ಞಾನಕೊಟ್ಟು ಸಾಕುತ್ತೇವೆ, ಸಮಾಜಕ್ಕೆ ಹೆಚ್ಚು ಮಕ್ಕಳನ್ನು ಕೊಟ್ಟು ಭಾರ ಹೆಚ್ಚಿಸುವುದಿಲ್ಲ, ಲಿಂಗ ಭೇದವಿಲ್ಲದೆ ಮಾನವೀಯ ನೆಲೆಗಟ್ಟಿನಲ್ಲಿ ಜನಸಂಖ್ಯೆಯ ನಿಯಂತ್ರಣಗಳನ್ನು ಆಳವಡಿಸುತ್ತೇವೆ, ಯಾವುದೇ ಧರ್ಮ, ಜಾತಿ ಭೇದಗಳಿಲ್ಲದೆ ಹೆಚ್ಚು ಮಕ್ಕಳಾಗದಂಥಹ ವ್ಯವಸ್ಥಾತ್ಮಕ ಕಾರ್ಯಕ್ರಮಗಳನ್ನು ಒಪ್ಪಿಕೊಂಡು ಜನಸಂಖ್ಯೆ ಹೆಚ್ಚಳವಾಗದಂತೆ ನಿಗಾವಹಿಸುತ್ತೇವೆ ಎಂಬ ಜವಾಬ್ದಾರಿ ಈ ಪ್ರಪಂಚದಲ್ಲಿನ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವೂ ಆಗಬೇಕಿದೆ.
ಡಾ|| ಗವಿಸಿದ್ದಪ್ಪ ಮುತ್ತಾಳ
ಪ್ರಾಂಶುಪಾಲರು ಸ.ಪ್ರ.ದ ಕಾಲೇಜು ಆಳವಂಡಿ ತಾ// ಜಿ//ಕೊಪ್ಪಳ

Get real time updates directly on you device, subscribe now.

Comments are closed.

error: Content is protected !!