ಆಶ್ರಯ ಸಮಿತಿ ಸದಸ್ಯರ ಪದಗ್ರಹಣ ನಿವೇಶ, ಮನೆ ಇಲ್ಲದವರಿಗೆ ಮನೆ: ವಿರುಪಾಕ್ಷ ಮೂರ್ತಿ
ಗಂಗಾವತಿ: ನಗರಸಭೆಯಿಂದ ನಿವೇಶ ಇಲ್ಲದವರಿಗಾಗಿ ಹಂಚಲಾಗುತ್ತಿರುವ ಆಶ್ರಯ ನಿವೇಶನ ಕೋರ್ಟ್ ಕಟಕಟೆಯಲ್ಲಿದ್ದು, ಶೀಘ್ರ ಇತ್ಯಾರ್ಥಗೊಳ್ಳಲಿದೆ ಅದರ ಹೊರತಾಗಿಯೂ ಸಾಕಷ್ಟು ಅರ್ಜಿಗಳು ನಗರಸಭೆ ಸಾರ್ವಜನಿಕರು ನೀಡಿದ್ದು ಬರುವ ದಿನಗಳಲ್ಲಿ ಎಲ್ಲರಿಗು ಮನೆಮ ನಿವೇಶ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನಿಸೋಣ ಎಂದು ಪೌರಾಯುಕ್ತ ವಿರುಪಾಕ್ಷ ಮೂರ್ತಿ ತಿಳಿಸಿದರು.
ಅವರು ಸೋಮವಾರ ನಗರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ಆಶ್ರಯ ಸಮಿತಿ ಸದಸ್ಯರ ಪದಗ್ರಹಣ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸುಮಾರು ಐದು ಎಕರೆ ಪ್ರದೇಶದಲ್ಲಿನ ಆಶ್ರಯ ನಿವೇಶನಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್ ಸೂಚನೆಯ ಪ್ರಕಾರ ಅಬ್ಜೇಕ್ಷನ್ ಕಾಲ್ ಮಾಡಿ ಅದರ ಮಾಹಿತಿಯನ್ನು ಹೈಕೋರ್ಟ್‌ಗೆ ಸಲ್ಲಿಸಿದ್ದು ಕೋಟ್ ಆದೇಶದ ಪ್ರಕಾರ ನಿವೇಶನ ಹಂಚೋಣ, ಅದು ಅಲ್ಲದೆ ನಮ್ಮ ಮನೆ, ಅಂಬೇಡ್ಕರ್ ವಸತಿ ಯೋಜನೆ, ಪ್ರಧಾನ ಮಂತ್ರಿ ಯೋಜನೆ, ಸ್ಲಂ ಬೋರ್ಡ್ ಮನೆಗಳನ್ನು ಕಡು ಬಡವರಿಗೆ ಕೊಡಿಸುವ ಮುಖೇನ ಉತ್ತಮ ಸೇವೆ ಮಾಡೋಣ, ಆಶ್ರಯ ಸಮಿತಿ ಸದಸ್ಯರು ನಗರಸಭೆ ಸದಸ್ಯರೊಟ್ಟಿಗೆ ಅಭಿವೃದ್ಧಿಗೆ ಕೈ ಜೋಡಿಸಬೇಕು, ೨೪ ಗಂಟೆ ಯಾವ ಸಮಯದಲ್ಲಾದರೂ ನನ್ನೊಂದಿಗೆ ಚರ್ಚಿಸಬಹುದು, ಎಲ್ಲರೂ ಸೇರಿ ಗಂಗಾವತಿಯನ್ನು ಸಂಪೂರ್ಣ ಅಭಿವೃದ್ಧಿಗೊಳಿಸೋಣ ಎಂದರು.
ಪದಗ್ರಹಣ ಸ್ವೀಕರಿಸಿದ ಆಸೀಫ್ ಆಹಮದ್ ಶಾನಬೋಗ್ ಮಾತನಾಡಿ, ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯವರ ಆದೇಶದಂತೆ ಗಂಗಾವತಿಯಲ್ಲಿ ಮನೆ ಇಲ್ಲದ ನಾಗರೀಕರ ಸರ್ವೇ ಮಾಡಿದ್ದು ಸಂಪೂರ್ಣ ಮಾಹಿತಿ ತಮಗಿದೆ, ಹಂತಹಂತವಾಗಿ ಸರಕಾರದ ಮಟ್ಟದಲ್ಲಿ ಪ್ರಯತ್ನಿಸಿ ಮನೆ, ನಿವೇಶನ ಕೊಡಿಸಲಿದ್ದೇವೆ, ಮಾಜಿ ಸಚಿವ ಅನ್ಸಾರಿಯವರು ನಮ್ಮ ಮೇಲೆ ವಿಶ್ವಾಸವಿಟ್ಟು ನಾಲ್ಕು ಜನರನ್ನು ಸದಸ್ಯರನ್ನಾಗಿ ನೇಮಕ ಮಾಡಿಸಿದ್ದು ಅವರ ಹೆಸರಿಗೆ ಚ್ಯುತಿ ಬರದಂತೆ ಕೆಲಸ ಮಾಡುತ್ತೇವೆ ಆಯ್ಕೆಗೆ ಸಹಕರಿಸಿದ ಎಲ್ಲರಿಗು ಅಬಾರಿಯಾಗಿದ್ದೇವೆ ಎಂದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರಾದ ಸನ್ನಿಕ್ ಭಾಷಾ ಮಾತನಾಡಿ, ಸಿಎಂ ಸಿದ್ದರಾಮಯ್ಯ ಹಾಗು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಗ್ಯಾರಂಟಿ ಯೋಜನೆಗಳ ಮೂಲಕ ಬಡವರಿಗೆ ಸಹಕಾರ ನೀಡುತ್ತಿದ್ದು ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಮಾಜಿ ಸಚಿವ ಅನ್ಸಾರಿಯವರ ಕೈ ಬಲ ಪಡಿಸುವ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಬಡವರಿಗೆ ಅಗತ್ಯ ಮನೆ, ನಿವೇಶ ಕೊಡಿಸುವ ನಿಟ್ಟಿನಲ್ಲಿ ಶ್ರಮಿಸುವುದಾಗಿ ಹೇಳಿದರು.
ಪೌರಾಯಕ್ತ ವಿರುಪಾಕ್ಷ ಮೂರ್ತಿಯವರು ಆಶ್ರಯ ಸಮಿತಿ ಸದಸ್ಯರಾದ ಆಸೀಫ್ ಆಹ್ಮದ್ ಶಾನಬೋಗ್, ಕುಂಬಾರ್ ಹುಸೇನ್ ಸಾಬ್, ಸತೀಶ್ ನಾಯಕ, ಪರಿಮಳ ಬಾಯಿ ಇವರಿಗೆ ಸಂವಿಧಾನದ ಪೀಠಿಕೆ ಓದಿಸುವ ಮೂಲಕ ಪದಗ್ರಹಣ ಮಾಡಿಸಿದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಕೊಪ್ಪಳ ಜಿಲ್ಲಾ ಉಪಾಧ್ಯಕ್ಷ ಎಸ್.ಬಿ.ಖಾದ್ರಿ, ನಗರಸಭೆ ಸದಸ್ಯರಾದ ಎಫ್ ರಾಘವೇಂದ್ರ, ಮನೋಹಸ್ವಾಮಿ ಹಿರೇಮಠ, ಖಾಸಿಂಸಾಬ್ ಗದ್ವಾಲ್, ಸುನಿತಾ ಶ್ಯಾವಿ, ಜಿಲ್ಲಾ ಪಂಚಾಯಿತಿ ಮಾಝಿ ಸದಸ್ಯರಾದ ಅಮರೇಶ್ ಗೋನಾಳ್, ಮುಖಂಡರಾದ ವಿಶ್ವನಾಥ್ ಮಾಲಿಪಾಟೀಲ್, ಪರಶುರಾಮ್ ಕಿರಿಕಿರಿ, ನೀಲಕಂಠ ಹೊಸಳ್ಳಿ, ಖಾಸೀಮಲಿ ಮುದ್ದಾಬಳ್ಳಿ, ಜೆ.ಕೆ.ರವಿನಾಯಕ, ಮಾರ್ತಂಡ ಗಾಯಕವಾಡ್, ಸಣ್ಣಕ್ಕಿ ನೀಲಪ್ಪ ಹಾಗು ಹುಸೇನ್ ಪೀರಾ ಜವಳಗೇರಾ ಇತರರಿದ್ದರು.
Comments are closed.