ಜುಲೈ ೨೮ಕ್ಕೆ ಪತ್ರಿಕಾ ದಿನಾಚರಣೆ : ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ
ಜುಲೈ ೨೮ಕ್ಕೆ ಪತ್ರಿಕಾ ದಿನಾಚರಣೆ : ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ
ಕೊಪ್ಪಳ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಜಿಲ್ಲಾಮಟ್ಟದಲ್ಲಿ ಇದೇ ಜುಲೈ ೨೮ ರಂದು ರವಿವಾರ ಪತ್ರಿಕಾ ದಿನಾಚರಣೆ ಪ್ರಯುಕ್ತ ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿದ್ದು ಪತ್ರಕರ್ತರ ಮಕ್ಕಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಕೊಪ್ಪಳ ಜಿಲ್ಲೆಯ ನಿವಾಸಿಗಳು ಮತ್ತು ಇಲ್ಲಿಯೇ ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದ್ದು, ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿರುವ ಪತ್ರಕರ್ತರ ಮಕ್ಕಳು ಎಸ್.ಎಸ್.ಎಲ್.ಸಿ, ಪಿಯುಸಿ ಮತ್ತು ಪದವಿಯಲ್ಲಿ ಶೇ. ೬೦ಕ್ಕಿಂತ ಹೆಚ್ಚು ಅಂಕ ಪಡೆದು ಪ್ರಥಮ ಪ್ರಯತ್ನದಲ್ಲಿಯೇ ೨೦೨೩-೨೦೨೪ನೇ ಸಾಲಿನಲ್ಲಿ ತೇರ್ಗಡೆ ಹೊಂದಿರುವ ಮಕ್ಕಳ ಶಾಲೆ ಕಾಲೇಜಿನಿಂದ ದೃಢೀಕೃತ ಅಂಕಪಟ್ಟಿಯ ನಕಲು, ಭಾವಚಿತ್ರ ಮತ್ತು ಆದಾರ್ ಕಾರ್ಡನ್ನು ಜುಲೈ ೧೫ರೊಳಗೆ ಸಲ್ಲಿಸಬೇಕು ನಂತರ ಬಂದವರನ್ನು ಪರಿಗಣಿಸಲಾಗುವದಿಲ್ಲ.
ಹೆಚ್ಚಿನ ಮಾಹಿತಿಗಾಗಿ, ಅರ್ಜಿ ಸಲ್ಲಿಸಲು ಮಂಜುನಾಥ ಜಿ. ಗೊಂಡಬಾಳ (ಸಂಚಾಲಕರು, ಪ್ರತಿಭಾ ಪುರಸ್ಕಾರ ಸಮಿತಿ ಕಾನಿಪ) ಮೊ: ೯೪೪೮೩೦೦೦೭೦, ಉಮೇಶ ಪೂಜಾರ (ಸದಸ್ಯರು, ಪ್ರತಿಭಾ ಪುರಸ್ಕಾರ ಸಮಿತಿ ಕಾನಿಪ) ಮೊ: ೯೮೮೦೪೦೫೧೫೦ ಅಥವಾ ಸಿದ್ದು ಹಿರೇಮಠ (ಸದಸ್ಯರು, ಪ್ರತಿಭಾ ಪುರಸ್ಕಾರ ಸಮಿತಿ ಕಾನಿಪ) ಮೊ: ೮೩೧೦೦೩೧೦೪೯) ಅವರನ್ನು ಸಂಪರ್ಕಿಸಬಹುದು ಎಂದು ಕಾನಿಪ ಪ್ರತಿಭಾ ಪುರಸ್ಕಾರ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
Comments are closed.