ಜ್ಞಾನದ ಸಂಪತ್ತು ಹರಿದು ಬರುವುದು ಪುಸ್ತಕದಿಂದ – ಅಭಿನವ ಶ್ರೀಗಳು
ಕೊಪ್ಪಳ : ಡಾ. ಷಣ್ಮುಖಯ್ಯ ತೋಟದ ರವರ ” ಸಾದಕ ಸಂಪನ್ನ ಅಭಿನಂದನಾ ಗ್ರಂಥ “,ಮತ್ತು ” ಅಮೃತಗಳಿಗೆ ಕವನ ಸಂಕಲನ” ವನ್ನು ಲೋಕಾರ್ಪಣೆ ಮಾಡಿ ಕೊಪ್ಪಳದ ಅಭಿನವ ಶ್ರೀಗಳು ಆಶಿರ್ವಚನ ನಿಡುತ್ತ ಮನುಷ್ಯನ ಜೀವನದಲ್ಲಿ ಹೊಸತನ ಇರಬೇಕಾದರೆ ಸತತ ಪ್ರಯತ್ನವಿರಬೇಕು ಅದಕ್ಕೆ ಪುಸ್ತಕವನ್ನು ಓದಬೇಕು ಕಪಾಟಿನ ಒಳಗೆ ಇಟ್ಟಂತ ಪುಸ್ತಕ ನುಸಿ ಹತ್ತಿ ಜಿಂಡು ಹತ್ತಲು ಕಾರಣ, ಅದಕ್ಕೆ ಪುಸ್ತಕ ಹೇಳುತ್ತೆ ನನ್ನ ಸಾವಿಗೆ ಮೊಬೈಲ್ ಕಾರಣವೆಂದು . ಹಾಗೆ ಆಗಬಾರದು ನಿಮ್ಮ ಹತ್ತಿರ ಎರಡು ರೂಪಾಯಿ ಇದ್ದರೆ ಒಂದು ರೂಪಾಯಿ ಆಹಾರಕ್ಕಾಗಿ ಇನ್ನೊಂದು ರೂಪಾಯಿ ಪುಸ್ತಕಕ್ಕಾಗಿ ಖರ್ಚು ಮಾಡಿ. ಆಹಾರಕ್ಕಾಗಿ ಖರ್ಚು ಮಾಡಿದ ದುಡ್ಡು ನಿಮ್ಮನ್ನು ಬದುಕಿಸಿದರೆ, ಪುಸ್ತಕ ತೆಗೆದುಕೊಂಡದ್ದು ನಿಮ್ಮನ್ನು ಹೇಗೆ ಬದುಕಬೇಕೆಂಬುವುದನ್ನು ಕಲಿಸುತ್ತದೆ.
ದೇಶದ ಆರ್ಥಿಕತೆಯಾಗಲಿ, ರಾಜಕೀಯ ದೂರ ದೃಷ್ಟಿ ವಿಜ್ಞಾನ ತಂತ್ರಜ್ಞಾನ ವಿರಲಿ, ದೇಶದ ಅಭಿವೃದ್ಧಿಗೆ ಇದು ಎಲ್ಲಾ ಪುಸ್ತಕದಲ್ಲಿ ಕಾಣುತ್ತದೆ ಅದರಂತೆ ಡಾ. ಷಣ್ಮುಖಯ್ಯ ತೋಟದ ಅವರ ಅಭಿನಂದನಾ ಗ್ರಂಥವನ್ನು ಹಾಗೂ ಅಮೃತ ಘಳಿಗೆ ಕವನ ಸಂಕಲವನ್ನು ಪುಸ್ತಕ ಓದುವುದರಿಂದ ನಿಮಗೆ ಬದುಕುವ ಜ್ಣಾನದ ಸಂಪತ್ತಿನ ಜೊತೆಗೆ ನಿಮ್ಮ ಜೀವನವು ಅಮೃತವಾಗುತ್ತದೆ ಎಂದು ಅಭಿನವ ಶ್ರೀಗಳು ಅಭಿಪ್ರಾಯಪಟ್ಟರು
ಶ್ರೀ ಅಡಿವಿಬಸಯ್ಯ ತೋಟದ ಶಿಕ್ಷಣ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆ (ರಿ) ಹಾಗೂ ಶ್ರೀ ಕನ್ನಡಾಂಬೆ ಯುವಕರ ಸಂಘ, (ರಿ) ಯುವ ಜಾಗೃತಿ ಪತ್ರಿಕೆ ಇವರ ಸಂಯುಕ್ತಾಶ್ರಯದಲ್ಲಿ *ಡಾ. ಷಣ್ಮುಖಯ್ಯ ತೋಟದ ಅವರ ಸಾಧನ ಸಂಪನ್ನ ಅಭಿನಂದನ ಗ್ರಂಥ ಹಾಗೂ ಅಮೃತ ಘಳಿಗೆ ಕವನ ಸಂಕಲ ಲೋಕಾರ್ಪಣೆ ಕಾರ್ಯಕ್ರಮ ಕೊಪ್ಪಳದ ಸರಕಾರಿ ನೌಕರರ ಭವನದಲ್ಲಿ ದಿನಾಂಕ -07.07.2024 ದಂದು ಜರುಗಿದ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕೊಪ್ಪಳ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಮತ್ತು ಮೈನಹಳ್ಳಿ ಷಟಸ್ಥಲ ಬ್ರಹ್ಮಿ 108 ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು ಸಭೆಯ ಅಧ್ಯಕ್ಷತೆಯನ್ನು ಗ್ರಂಥದ ಗೌರವ ಸಂಪಾದಕರಾದ ಡಾ. ಎಂ ಜಯಪ್ಪ ವಹಿಸಿ ಮಾತನಾಡುತ್ತಾ ಡಾ. ಷಣ್ಮುಖಯ್ಯ ಕಷ್ಟದಿಂದ ಬೆಳೆದು ಮುಂದೆ ಬಂದವರು ಎಂದು ತಿಳಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರೊ. ಎ.ಎಂ.ಆರ್.ಕೊಟ್ರಯ್ಯ ನಿ ಪ್ರಾಂಶಪಾಲರು ಮಾಡಿದರು.
ವಿಶೇಷ ಆಹ್ವಾನಿತರಾದ ಡಾ. ಬಿಆರ್ ಶ್ರೀಕಂಠ ಅವರು ಮಾತನಾಡುತ್ತಾ ಷಣ್ಮುಖಯ್ಯ ನಡೆದು ಬಂದ ಹಾದಿ ಅವರ ಬಹುಮುಖತ್ವ ಪ್ರತಿಭೆಯ ಬಗ್ಗೆ ತಿಳಿಸಿದರು.
ಕೊಪ್ಪಳ ಲೋಕಸಭಾ ನೂತನ ಸಂಸದರಾದ , ಶ್ರಿ ರಾಜಶೇಖರ ಹಿಟ್ನಾಳ್ ಮಾತನಾಡಿ ಮುಂಬುರವ ಪಿಳಿಗಿಗೆ ಮಾರ್ಗದರ್ಶಕರು ಹಾಗು ನಾವು ಆಸ್ತಿ. ಅವರೇ ದೇಶಕ್ಕೆ ಆಸ್ತಿ ಆದರೆ ಅವರ ಸಂಸಾರ ಮತ್ತು ಜೀವನ ಕಟ್ಟಿಕೊಳ್ಳುತ್ತಾರೆ ಇಂದಿನ ದಿನಮಾನಗಳಲ್ಲಿ ಸಮಾಜ ಸುಧಾರಣೆ ಆಗಬೇಕಾದರೆ ಸಾಹಿತ್ಯದಿಂದ ಸಮಾಜ ಸುಧಾರಣೆ ಆಗುತ್ತದೆ ಡಾ.ಷಣ್ಮುಖಯ್ಯ ತೋಟದ್ ರವರು ಮೈನಹಳ್ಳಿ ಎಂಬ ಚಿಕ್ಕ ಗ್ರಾಮದಿಂದ ಹೋಗಿ ಬೆಂಗಳೂರಿನಲ್ಲಿ ಶಿಕ್ಷಣ,ಸಾಹಿತ್ಯ,ಕಲಾ ರಂಗದಲ್ಲಿ ಹಾಗೆ ಇನ್ನಿತರ ರಂಗಗಳಲ್ಲಿ ಸೇವೆ ಸಲ್ಲಿಸಿ ಇವತ್ತು ದೊಡ್ಡ ಮಟ್ಟದಲ್ಲಿ ಬೆಳೆದು ಸಮಾಜಕ್ಕೆ ಕೊಡುಗೆ ನೀಡುತ್ತಾ ಬಂದಿದ್ದಾರೆ ಎಂದು ಹೇಳಿದರು
ಅಮೃತ ಘಳಿಗೆ ಕವನ ಸಂಕಲನವನ್ನು ಮಹಾಂತೇಶ ಮಲ್ಲನಗೌಡ್ರು ಬಿಡುಗಡೆ ಮಾಡಿದರು , ಸರಕಾರಿ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ. ಭಾಗ್ಯ ಜ್ಯೋತಿ ಅಭಿನಂದನಾ ಗ್ರಂಥ ಕುರಿತು ಅವಲೋಕನ ಮಾಡಿದರು ತದನಂತರ ಅಮೃತ ಘಳಿಗೆ ಕವನ ಸಂಕಲನವನ್ನು ಶ್ರೀ ಮಂಜುನಾಥ್ ಚಿತ್ರಗಾರ ಅವಲೋಕದ ಮಾಡಿ ಮಾತನಾಡಿದರು
ಸಾಧಕ ಸಂಪನ್ನ ಮೈನಹಳ್ಳಿಯ ಡಾ. ಷಣ್ಮುಖಯ್ಯ ತೋಟದರವರಿಗೆ ಸಾನಿಧ್ಯ ವಹಿಸಿದ ಸ್ವಾಮಿಗಳು ಅಪಾರ ಬಂಧುಗಳು ಮಿತ್ರರು ಉರ ಗಣ್ಯರು, ಗುರುಗಳು ಸೇರಿ ಡಾ. ಷಣ್ಮಖಯ್ಯ ದಂಪತಿಗಳಿಗೆ ಸನ್ಮಾನ ಮಾಡಿ ಗೌರವಿಸಿದರು.
ಈ ಸಂದರ್ಭದಲ್ಲಿ ತಮ್ಮ ತಾಯಿಯ ಸವಿ ನೆನಪುಗಾಗಿ “ಶ್ರೀಮತಿ ಗಂಗಮ್ಮ ಅಡಿವಿಬಸಯ್ಯ ಸ್ಮಾರಕ ಪ್ರಶಸ್ತಿ” ಯನ್ನು ಅನೇಕ ರಂಗದಲ್ಲಿ ಸಾಧನೆ ಗೈದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.
ಜೊತೆಗೆ ಅಭಿನಂದನಾ ಗ್ರಂಥದ ಲೇಖನ ಬರೆದವರಿಗೆ ಹಾಗೂ ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಮಾಡಿದರು ವಿಶೇಷವಾಗಿ ತಮಗೆ ವಿದ್ಯೆ ಕಲಿಸಿದ ಗುರುಗಳಿಗೆ ಕಾರ್ಯಕ್ರಮಕ್ಕೆ ಆಹ್ವಾನಿಸಿ ಗುರುವಂದನ ಸನ್ಮಾನ ಮಾಡಿದ್ದು ವಿಶೇಷವಾಗಿತ್ತು.
ಈ ಸಭೆಗೆ ಬೆಂಗಳೂರಿನ ಖ್ಯಾತ ಜನಪದ ಕಲಾವಿದ ಗುರುರಾಜ್ ಹೊಸಕೋಟೆ, ರಂಗಭೂಮಿ ಕಲಾವಿದೆ ಮಾಲತಿ ಶ್ರೀ ಮೈಸೂರ್ ಆಗಮಿಸಿ ಅಭಿಮಾನಿಗಳನ್ನು ರಂಜಿಸಿದರು
ಸಭೆಯಲ್ಲಿ ಅನೇಕ ಗಣ್ಯರು ಭಾಗವಹಿಸಿದ್ದರು ವಿ. ಎಸ್. ಭೂಷನೂರಮಠ, ಎಲ್ಎಫ್ ಪಾಟೀಲ್ಮ ಹಾಂತೇಶ್ ಪಾಟೀಲ್ ಮೈನಹಳ್ಳಿ , ಜಿ.ಎಸ್. ಗೋನಾಳ, ಎಂ. ಸಾದಿಕ್ಅಲಿ, ಅಭಿನಂದನಾ ಗ್ರಂಥದ ಸಂಪಾದಕರಾದ ಡಾ. ಬಿ . ಏನ್. ಹೊರಪೇಟೆ, ಉದಯ ಎಸ್ ತೋಟದ, ಅನೇಕರು ಸೇರಿದಂತೆ ವೇದಿಕೆ ಮೇಲೆ ಉಪಸ್ಥಿತರಿದ್ದರು ಕಾರ್ಯಕ್ರಮದ ನಿರೂಪಣೆಯನ್ನು ಜಗದೀಶ ಭಿಕ್ಷಾವತಿಮಠ ನಿ.ಉ .ಬೆಂಗಳೂರು ಇವರು ಸುಂದರವಾಗಿ ನಿರ್ವಹಿಸಿದರು.
Comments are closed.