ಕೊಪ್ಪಳ ವೃತ್ತಕ್ಕೆ(ಜಿಲ್ಲೆ) ಸಂಘಟನಾ ಕಾರ್ಯದರ್ಶಿಯಾಗಿ ನಾಗರಾಜ ಗಾಯಕವಾಡ.ಮತ್ತು ಸಿ.ಇ.ಸಿ ಯಾಗಿ ಅನಾಳಪ್ಪ ಆಯ್ಕೆ
ಅಭಿನಂದನಾ ಸಮಾರಂಭ ಕುರಿತು.
ದಿನಾಂಕ ೨೬.೦೬.೨೦೨೪ ರಂದು ನಡೆದ ೨೨ನೇ ಮಾಹಾಅಧಿವೇಶನದಲ್ಲಿ ನಡೆದ ಚುನಾವಣೆಯಲ್ಲಿ ರಾಜ್ಯ ಅದ್ಯಕ್ಷರಾಗಿ ಕೆ.ಬಲರಾಮ್ ರವರು ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಶಿವರಾಮ್ ರವರು ಸುಮಾರು ೫೫ ಸಾವಿರ ಸಂಘದ ಸದಸ್ಯರಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದು ಸಂತಸದ ವಿಷಯ.ಮತ್ತು ಎರಡನೇಬಾರಿ ಕೇಂದ್ರ ಕಾರ್ಯಕಾರಿ ಸಮೀತಿ ಸದಸ್ಯರಾಗಿ ಆಯ್ಕೆಯಾದ ನಾಗರಾಜ ಗಾಯಕವಾಡ.ಇವರನ್ನು ಕೊಪ್ಪಳ ವೃತ್ತಕ್ಕೆ(ಜಿಲ್ಲೆ) ಸಂಘಟನಾ ಕಾರ್ಯದರ್ಶಿಯಾಗಿ ರಾಜ್ಯ ಅದ್ಯಕ್ಷರು ನೇಮಕ ಮಾಡಿರುತ್ತಾರೆ..ಮತ್ತು ಕೇಂದ್ರ ಕಾರ್ಯಕಾರಿ ಸಮೀತಿ ಸದಸ್ಯರಾಗಿ ಅನಾಳಪ್ಪ ಆಯ್ಕೆಯಾಗಿರುತ್ತಾರೆ.ಇವರಿಗೆ ಕೊಪ್ಪಳ ವಿಭಾಗದ ವತಿಯಿಂದ ತೆರೆದ ವಾಹನದಲ್ಲಿ ಮೆರವಣಿಗೆ ಮುಖಾಂತರ ಸಂಘದ ಪದಾಧಿಕಾರಿಗಳು ಮತ್ತು ನೌಕರರು ಅಭಿನಂಧಿಸಿ ಸನ್ಮಾನಿಸಿದರು.
ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾದ ನಾಗರಾಜ ಗಾಯಕವಾಡ ರವರು ನನ್ಮಾನ ಸ್ವೀಕರಿಸಿ ಚುನಾವಣೆಯಲ್ಲಿ ನಮ್ಮ ತಂಡವನ್ನು ಬಹುಮತದಿಂದ ಆಯ್ಕೆ ಮಾಡಿದ ಎಲ್ಲಾ ನೌಕರರಿಗೂ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ನನ್ನ ಮೇಲೆ ವಿಶ್ವಾಸವಿಟ್ಟು ಜವಾಬ್ದಾರಿ ಹುದ್ದೆಯನ್ನು ನೀಡಿದ ರಾಜ್ಯ ಅಧ್ಯಕ್ಷರಾದ ಕೆ.ಬಲರಾಮ್‌ರವರಿಗೆ ಧನ್ಯವಾದ ತಿಳಿಸಿದರು.ಕೊಪ್ಪಳ ಜಿಲ್ಲೆಗೆ ಕೀರ್ತಿ ತರುವದರ ಜೊತೆಗೆ ಜಿಲ್ಲೆಯ ಸಮಸ್ತ ನೌಕರರ ಹಿತ ಕಾಪಾಡುವಲ್ಲಿ ಶ್ರಮಿಸುವುದಾಗಿ.ನೌಕರರಿಗೆ ಸೂಕ್ತ ಭದ್ರತೆ.ಸುರಕ್ಷತೆಯಿಂದ ಕೆಲಸ ಮಾಡಲು ಹಾಗೂ ಇಗ ಕಡಿಮೆ ಇರುವ ಮಾರ್ಗದಾಳು ಸಿಬ್ಬಂದಿಗಳಿಂದ ಗ್ರಾಹಕರಿಗೆ ಗುಣಮಟ್ಟದ ಸೇವೆ ಸಲ್ಲಿಸಲು.ಗ್ರಾಹಕರು ಸಹ ಸುರಕ್ಷತಾ ಕ್ರಮ ಅನುಸರಿಸಲು ತಿಳಿಸಿದರು. ಕೊಪ್ಪಳದಲ್ಲಿ ಜಿಲ್ಲಾ ಕೇಂದ್ರವಾದ ವಿಭಾಗ ಕಚೇರಿ ಆವರಣದಲ್ಲಿ ನಿರ್ಮಾಣ ಮಾಡಲು ೧೫ ಕೋಟಿ ರೂ ಬಜೆಟ್ ಮಂಜೂರಾಗಿದ್ದು ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಿಸಲು ಅಧಿಕಾರಿಗಳಿಗೆ ಮನವಿ ಮಾಡಿದರು.
ಸಭೆಯ ಅಧ್ಯಕ್ಷತೆಯನ್ನುವಹಿಸಿದ ಜೆಸ್ಕಾಂ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು(ವಿ) ಕೊಪ್ಪಳ. ಫಣಿ ರಾಜೇಶ್ ರವರು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿ ಅಭಿನಂದಿಸಿದರು. ಸಮಾರಂಭದಲ್ಲಿ ತಿರುಮಲೈ. ಮತ್ತು ಸಾಧಿಕ್ ಹುಸೇನ್. ಲೆಕ್ಕಾಧಿಕಾರಿಗಳು. ಅಬ್ದುಲ್ ರಹಮಾನ ಸಲೀಂ. ಬಿ.ವೇಂಕಟೇಶ. ಎಇಇ. ಬಿ.ಪ್ರಭು. ಯೂನುಸಖಾನ್. ಹನುಮಂತಪ್ಪ. ಹುನಗುಂದ. ಹನುಮಂತಪ್ಪ ಹಾದಿಮನಿ. ಎಸ್.ಸಿ/ಎಸ್.ಟಿ. ಕಲ್ಯಾಣ ಸಂಸ್ಥೆ. ಸ್ಥಳಿಯ ಸಮೀತಿ ಕೊಪ್ಪಳ ಅಧ್ಯಕ್ಷರಾದ ಕಲ್ಲಪ್ಪ ಸೂಡಿ. ಕಾರ್ಯದರ್ಶಿ ಸಿದ್ದಪ್ಪ.ಕೆ. ಪದಾಧಿಕಾರಿಗಳು. ಪ್ರಾಥಮಿಕ ಸಮೀತಿ ಪದಾದಿಕಾರಿಗಳು.ಯಲಬುರ್ಗಾ.ಕುಕನೂರ.ವಿದ್ಯುತ್ ಗುತ್ತಿಗೆದಾರ ಸಂಘದ ಅಧ್ಯಕ್ಷರು ರವಿ ದಿವಟರ್. ಎಲ್ಲಾ ಅಧಿಕಾರಿಗಳು ಮತ್ತು ಶಾಖಾಧಿಕಾರಿಗಳು. ನಿವೃತ್ತ ನೌಕರರು.. ಉಪಸ್ತಿತರಿದ್ದರು ಗಿರೀಶ್.ಎಂ.ರವರು ಕಾರ್ಯಕ್ರಮವನ್ನು ನಿರ್ವಹಿಸಿ ವಂದನಾರ್ಪಣೆಯೊಂದಿಗೆ ಮುಕ್ತಾಯಗೋಳಿಸಿದರು.
Comments are closed.