ಹಜರತ್ ಮರ್ದನೆ ಗೈಬ್ ದರ್ಗಾಕ್ಕೆ ಭೇಟಿ ನೀಡಿದ ನ್ಯಾಯಮೂರ್ತಿ MGS ಶುಕ್ರೆ ಕಲಾಂ
ಇಂದು ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ MGS ಶುಕ್ರೆ ಕಲಾಂ,ಕೊಪ್ಪಳ ಜಿಲ್ಲಾ ಸತ್ರ ನ್ಯಾಯಾಧಿಶರಾದ ಸಿ. ಚಂದ್ರಶೇಖರ್, ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಲಯ (ಪೋಕ್ಸೋ) ನ್ಯಾಯಾಧಿಶರಾದ .ಡಿಕೆ ಕುಮಾರ್, ರಾಜ್ಯ ವಕ್ಫ ಸಲಹಾ ಸಮಿತಿಯ ಸದಸ್ಯರು ಮತ್ತು ಹಿರಿಯ ನ್ಯಾಯವಾದಿಗಳಾದ ಆಸೀಫ್ ಅಲಿ, ಕೊಪ್ಪಳ ಜಿಲ್ಲಾ ವಕ್ಫ ಸಮಿತಿಯ ಅಧ್ಯಕ್ಷರು ಹಿರಿಯ ನ್ಯಾಯವಾದಿಗಳಾದ ಪೀರಾ ಹುಸೇನ್ ಹೊಸಳ್ಳಿ, ಡಿಎಸ್ಎಲ್ ಅಧ್ಯಕ್ಷರಾದ ಒಡೆಯರ್, ಜಿಲ್ಲಾ ಕಂದಾಯ ಅಧಿಕಾರಿಗಳಾದ ಮಹೇಶ್ ಮಾಲಗಿತ್ತಿ, ಡಿಎಸ್ಎಲ್ ಖಜಾಂಚಿಯಾದ ರಾಜಾಹುಸೇನ್, ಧರ್ಮ ಗುರುಗಳಾದ ಜನಾಬ್ ಮುಫ್ತಿ ನಜೀರ್ ಅಹಮದ್ ತಸ್ಕೀನ್ ಅವರು ಕೊಪ್ಪಳ ನಗರದ ಪವಿತ್ರ ಸೂಫಿ ವರ್ಯರ ಸ್ಥಳವಾದ ಹಜರತ್ ಮರ್ದನೆ ಗೈಬ್ ದರ್ಗಾಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಹಜರತ್ ಮರ್ದಾನೆ ಗೈಬ್ ದರ್ಗಾ ಕಮಿಟಿಯ ಅಧ್ಯಕ್ಷರಾದಂತಹ ಎಂ ಪಾಷ ಕಾಟನ್ ಅವರು ಹಾಗೂ ಪದಾಧಿಕಾರಿಗಳು ಆಗಮಿಸಿದ ಗೌರವಾನ್ವಿತರಿಗೆ ಸ್ವಾಗತಿಸಿ ಅಭಿನಂದಿಸಿದರು ಹಾಗೂ ಈ ಸಂದರ್ಭದಲ್ಲಿ ಕೊಪ್ಪಳ ನಗರ ಅಂಜುಮನ್ ಕಮಿಟಿ, ಹಜರತ್ ರಾಜಾ ಬಾಗ್ ಸವಾರ ಕಮಿಟಿ, ಮುಸ್ಲಿಂ ಶಾದಿ ಮಹಲ್ ಕಮಿಟಿ, ಮಾನ್ವಿ ಪಾಶ, ಅಜೀಂ ಅತ್ತರ , ಇಬ್ರಾಹಿಂಸಾಬ ಬಿಸರಳ್ಳಿ, ಅಂಜುಮನ್ ಕಮಿಟಿಯ ಮಾಜಿ ಅಧ್ಯಕ್ಷರಾದಂತಹ ಹುಸೇನ್ ಪೀರಾ (ಚಿಕನ್)ಮುಜುವಾರ್, ಸೇರಿದಂತೆ ಕೊಪ್ಪಳ ನಗರದ ಅನೇಕ ಹಿರಿಯ ಕಿರಿಯ ಮುಖಂಡರು ಸ್ವಾಗತಿಸಿ ಸನ್ಮಾನಿಸಿದರು.
Comments are closed.