ಅಬಕಾರಿ ಇಲಾಖೆಯ ನಿವೃತ್ತ ಡಿವೈಎಸ್‌ಪಿ ಎಂ.ಹೆಚ್.ವಾಲ್ಮೀಕಿ ನಿಧನ
ಕೊಪ್ಪಳ ಜುಲೈ 08:
ಇಲ್ಲಿನ ಅಬಕಾರಿ ಇಲಾಖೆಯ ನಿವೃತ್ತ ಡಿವೈಎಸ್‌ಪಿ, ವಾಲ್ಮೀಕಿ ನಾಯಕ ಸಮಾಜದ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಹನುಮಂತಪ್ಪ ವಾಲ್ಮೀಕಿ (81) ಅವರು ಕೊಪ್ಪಳದ ಗಂಜ್ ವೃತ್ತದ ಬಳಿಯ ಎಸ್‌ಬಿಐ ಬ್ಯಾಂಕ್ ಹಿಂಭಾಗದ ದಿವಟರ್ ನಗರದ ತಮ್ಮ ಸ್ವಗೃಹದಲ್ಲಿ ಇಂದು ಬೆಳಿಗ್ಗೆ ಕೊನೆಯುಸಿರೆಳೆದರು.
ಪತ್ನಿ,ಇಬ್ಬರು ಪುತ್ರರು,ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಅಬಕಾರಿ ಇಲಾಖೆಯಲ್ಲಿ ಸುದೀರ್ಘ ,ದಕ್ಷ ಸೇವೆ ಸಲ್ಲಿಸಿದ್ದ ಅವರು ಕೊಪ್ಪಳ ಭಾಗದಲ್ಲಿ ವಾಲ್ಮೀಕಿ ನಾಯಕ ಸಮಾಜದ ಸಂಘಟನೆಯಲ್ಲಿಯೂ ಪ್ರಮುಖ ಪಾತ್ರ ನಿರ್ವಹಿಸಿದ್ದರು.ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಮೃತರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಇಂದು ಜುಲೈ 8 ಮಂಗಳವಾರ ಸಂಜೆ 5.30 ಗಂಟೆಗೆ ಗವಿಮಠ ಹಿಂಭಾಗದ ರುದ್ರಭೂಮಿಯಲ್ಲಿ ಜರುಗಲಿದೆ.
Comments are closed.