ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ
ಇಂದು ಪ್ರಾಥಮಿಕ ಆರೋಗ್ಯ ಕೇಂದ್ರ ಗೊಂಡಬಾಳ ವ್ಯಾಪ್ತಿಯ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಶ್ರೀಮತಿ ಸುಶೀಲಮ್ಮ ಬಳಗಾನೂರ ಗ್ರಾಮ ಪಂಚಾಯತಿ ಉಪಾಧ್ಯಕ್ಷರು ಹಾಗೂ ಶ್ರೀಮತಿ ಸುಗಂಧಮ್ಮ ಆರೇರ್ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು ಈ ಕಾರ್ಯಕ್ರಮದ ಕುರಿತು ಶ್ರೀಮತಿ ಗಂಗಮ್ಮ ಕಳಸಾಪುರ್ ಮಾತನಾಡಿ ಜನಸಂಖ್ಯೆ ನಿಯಂತ್ರಣ ಪ್ರತಿಯೊಬ್ಬರ ಪ್ರತಿಯೊಬ್ಬರ ಜವಾಬ್ದಾರಿ ಆಗಿದೆ ಮತ್ತು ಇದರಿಂದ ಭಾರತವು ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ದೇಶ ಆಗಿದೆ ಜನಸಂಖ್ಯೆಯಿಂದ ಬಡತನ ಅಜ್ಞಾನ ಮೂಢನಂಬಿಕೆ ತೊಲಗಿಸಬಹುದು ಎಂದು ಹೇಳಿದರು ನಂತರ ಶ್ರೀಮತಿ ಸಂಧ್ಯಾ ತಾಲೂಕ ಆಶಾ ಮೇಲ್ವಿಚಾರಕರು ಮಾತನಾಡಿ ಬಾಲ್ಯ ವಿವಾಹದಿಂದ ತಾಯಿ ಮರಣ ಮತ್ತು ಶಿಶುಮರಣ ಕಡಿಮೆ ಮಾಡಬಹುದು ಮತ್ತೆ ಪೌಷ್ಟಿಕ ಆಹಾರ ಸೇವನೆಯಿಂದ ರಕ್ತ ಹೀನತೆಯನ್ನು ಕಡಿಮೆ ಮಾಡಬಹುದೆಂದು ತಿಳಿಸಿದರು ನಂತರ ಶ್ರೀ ಈಶಪ್ಪ ಆರೋಗ್ಯ ನಿರೀಕ್ಷಣಾಧಿಕಾರಿ ಮಾತನಾಡಿ ಮಳೆಗಾಲದಲ್ಲಿ ಸಂಭವಿಸುವ ಸಾಂಕ್ರಾಮಿಕ ರೋಗಗಳ ಬಗ್ಗೆ ತಿಳಿಸಿದರು ನಂತರ ಶ್ರೀಮತಿ ಹಸೀನಾ ಬೇಗಮ್ ತಾಯಿ ಮತ್ತು ಮಕ್ಕಳ ಆರೋಗ್ಯ ಕುರಿತು ಮಾಹಿತಿ ತಿಳಿಸಿದರು ಶ್ರೀಮತಿ ಮಹಾದೇವಿ ಸಮುದಾಯ ಆರೋಗ್ಯ ಅಧಿಕಾರಿಗಳು ಅಸಂಕ್ರಾಮಿಕ ರೋಗಗಳ ಬಗ್ಗೆ ಮಾಹಿತಿ ನೀಡಿದರು ಈ ಕಾರ್ಯಕ್ರಮದಲ್ಲಿ ಊರಿನ ಹಿರಿಯ ಮುಖಂಡರಾದ ವಿರೂಪಾಕ್ಷಯ್ಯ ಬನ್ನಿಮಠ ಗಳಿಸಿದ್ದಪ್ಪ ಕೂಲಿ ಶಿವನಗೌಡ ಪೊಲೀಸ್ ಪಾಟೀಲ್ ಆದಿಬಸಪ್ಪ ಕೋಣಿ ಹಾಗೂ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಗರ್ಭಿಣಿ ಮಹಿಳೆಯರು ಬಾಣಂತಿಯರು ಊರಿನ ಹಿರಿಯರು ಹಾಜರಿದ್ದರು
Comments are closed.