ನಿವೃತ್ತಿ ನಂತರ ಹೊಸ ವೃತ್ತಿ ಶುರುವಾಗಲಿ : ಹನುಮಂತಗೌಡ ಪೊಲೀಸ್ ಪಾಟೀಲ್

Get real time updates directly on you device, subscribe now.

ವಯೋ ನಿವೃತ್ತಿ ಹೊಂದಿದ ಕಾರ್ಯನಿರ್ವಾಹಕ ಅಧಿಕಾರಿಗಳ ಕಾರ್ ಚಾಲಕ ಬೀಳ್ಕೋಡುಗೆ ಸಮಾರಂಭ

ಕುಷ್ಟಗಿ: ಸರ್ಕಾರಿ ನೌಕರರು ನಿವೃತ್ತಿ ಹೊಂದುವುದು ಸರ್ವೆ ಸಾಮಾನ್ಯ. ಆದ್ರೆ, ನಿವೃತ್ತಿ ನಂತರ ಅವರ ಜೀವನ ಹೊಸ ವೃತ್ತಿಯೊಂದಿಗೆ ಶುರುವಾಗಲಿ ಎಂದು ತಾ ಪಂ ಸಹಾಯಕ ನಿರ್ದೇಶಕ (ಪಿ ಆರ್) ಹನುಮಂತಗೌಡ ಪೊಲೀಸ್ ಪಾಟೀಲ್ ಹೇಳಿದರು.

ಪಟ್ಟಣದ ತಾಲೂಕು ಪಂಚಾಯತ್‌ ಕಚೇರಿಯಲ್ಲಿ ಬುಧವಾರ ಇಓ ಸರ್ ರವರ ಕಾರ್ ಚಾಲಕ ಶರಣಪ್ಪ ಮುಳಗುಂದ ಅವರು ನಿವೃತ್ತಿ ಹೊಂದಿದ ಹಿನ್ನೆಲೆ ಹಮ್ಮಿಕೊಂಡಿದ್ದ ಬಿಳ್ಕೋಡುಗೆ ಸಮಾರಂಭ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಅವರು ಮಾತನಾಡಿದರು. ಕಾರ್ ಚಾಲಕ ನೌಕರರಾಗಿ ತಮ್ಮ ವೃತ್ತಿಯನ್ನು ಆರಂಭಿಸಿದ ಶರಣಪ್ಪ ಅವರು 33 ವರ್ಷಗಳ ಕಾಲ ಸೇವೆ ಸಲ್ಲಿಸಿ ಇಂದು ನಿವೃತ್ತಿಯನ್ನು ಹೊಂದುತ್ತಿದ್ದಾರೆ. ಅವರ ನಿವೃತ್ತಿ ಜೀವನವು ಸುಖಮಯವಾಗಿರಲಿ ಎಂದು ಹಾರೈಸಿದರು.

ನಂತರ ಸಹಾಯಕ ನಿರ್ದೇಶಕರಾದ ( ಗ್ರಾ ಉ ) ನಿಂಗನಗೌಡ ವಿ ಹೆಚ್ ಅವರು ಮಾತನಾಡಿ, ಶರಣಪ್ಪ ಅವರು ನಮ್ಮ ಆರ್.ಡಿ.ಪಿಆರ್‌ ಇಲಾಖೆಯಲ್ಲಿ ಸುಮಾರು ವರ್ಷ ಸೇವೆ ಸಲ್ಲಿಸುವುದು ಜೊತೆಗ ಅವರ ಸಮಯ ಪ್ರಜ್ಞೆ ಹಾಗೂ ತಾಳ್ಮೆ ಇನ್ನೊಬ್ಬರ ಹತ್ತಿರ ನೋಡಲು ಸಾಧ್ಯ ಇಲ್ಲ. ಆಡಳಿತಾತ್ಮಕವಾಗಿ ಹಾಗೂ ವೈಯಕ್ತಿಕವಾಗಿ ಅವರು ಎಲ್ಲರೂ ಮಾರ್ಗದರ್ಶಿಗಳಾಗಿದ್ದರು ಎಂದು ನೆನೆಸಿಕೊಂಡರು.

ಬಳಿಕ ಶರಣಪ್ಪ ಮುಳಗುಂದ ಅವರು ಮಾತನಾಡಿ, ಚಾಲಕ ವೃತ್ತಿ ನನ್ನ ತಾಯಿ ಇದ್ದ ಹಾಗೇ, ನಿವೃತ್ತಿ ಹೊಂದುವವರೆಗೆ ನಾನು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದೇನೆ ಎಂಬ ಹೆಮ್ಮೆ ನನಗಿದೆ. ಆದರೇ, ಇಷ್ಟು ಬೇಗ ನನಗೆ ವಯಸ್ಸು ಆಯ್ತಲ್ಲ, ಎಂಬ ಕೊರಗು ನನಗೆ ಇದ್ದೇ ಇದೆ. ಖುಷಿಯಿಂದ ತಮ್ಮ ಕರ್ತವ್ಯದ ದಿನಗಳನ್ನು ನೆನೆಪಿಸಿಕೊಂಡರು.

ತಾಲೂಕಿನ ಎಲ್ಲಾ ತಾಲೂಕ ಪಂಚಾಯತ್ ವತಯಿಂದ ಹಾಗೂ ಗ್ರಾ.ಪಂ ಅಭಿವೃದ್ದಿ ಅಧಿಕಾರಿಗಳು, ವತಿಯಿಂದ ಶರಣಪ್ಪ ಮುಳಗುಂದ ಅವರನ್ನು ಸನ್ಮಾನಿಸಿ ಗೌರವಿಸಿದರು.

ಕೊನೆಯಲ್ಲಿ ಸ್ವತಃ ಹನುಮಂತ ಗೌಡ ಪೊಲೀಸ್ ಪಾಟೀಲ್ ರವರು ಕಾರು ಚಾಲನೆ ಮಾಡಿಕೊಂಡು ಮನೆಯವರಿಗೆ ಬಿಟ್ಟು ಬಂದಿರುವುದು ವಿಶೇಷವಾಗಿತ್ತು. ಹಾಗೂ ಇದಕ್ಕೆ ನಿಂಗನಗೌಡ ವಿ ಹೆಚ್ ಹಾಗೂ ಸಿಬ್ಬಂದಿ ವರ್ಗ ಸಾಕ್ಷಿ ಆದರೂ.

ಈ ಸಂದರ್ಭದಲ್ಲಿ ತಾಲೂಕ ಪಂಚಾಯತ್ ಅಧಿಕಾರಿಗಳಾದ ಬಸವರಾಜ್ ಪಾಟೀಲ್, ವಿಶ್ವನಾಥ್ ರಾಥೋಡ್,ಪ್ರಶಾಂತ್ ಸರ್, ಗ್ರಾ.ಪಂ ಅಭಿವೃದ್ದಿ ಅಧಿಕಾರಿಗಳಾದ ಚಂದಪ್ಪ ಗುಡಿಮನಿ,ಶರಣಮ್ಮ,ಪ್ರಶಾಂತ ಹೀರೆಮಠ,ಬಸವರಾಜ್ ,ರಾಮಣ್ಣ ದಾಸರ್, ಶಿವಪುತ್ರಪ್ಪ,ನಾಗೇಶ್, ಮಲಪ್ಪ, ತಾ.ಪಂ ಹಾಗೂ ನರೇಗಾ ಸಿಬ್ಬಂದಿ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: