ಪಾಂಡುರಂಗ ಓಲೇಕಾರ್ ನಿಧನ
ಕೊಪ್ಪಳ : ನಿವೃತ್ತ ಬಿಎಸ್ ಎನ್ ಎಲ್ ನೌಕರರು ಹಾಗೂ ಓಲೇಕಾರ್ ಶಿಕ್ಷಣ ಸಂಸ್ಥೆಯ ಸ್ಥಾಪಕರಾದ ಪಾಂಡುರಂಗ ಓಲೇಕಾರ ಬುಧವಾರ ಬೆಳಗಿನ ಜಾವ ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ನಿಧನರಾದರು.
ಮೃತರ ಅಂತ್ಯಕ್ರಿಯೆ ಗವಿಮಠದ ಹಿಂದಿನ ರುದ್ರಭೂಮಿಯಲ್ಲಿ ನೆರವೇರಿತು. ಪ್ರಗತಿಪರ ಚಿಂತನೆಗಳನ್ನು ಹೊಂದಿದ್ದ ಶಿಕ್ಷಣ ಪ್ರೇಮಿಯಾಗಿದ್ದ ಪಾಂಡುರಂಗ ಓಲೇಕಾರರ ನಿಧನಕ್ಕೆ ಕೊಪ್ಪಳದ ಜನತೆ ಕಂಬನಿ ಮಿಡಿದಿದ್ದಾರೆ.
Comments are closed.