ಜಾಲಿಹಾಳ್ ಶರಣಪ್ಪನವರಿಗೆ ಪಿ.ಎಚ್.ಡಿ ಪದವಿ
ಕೊಪ್ಪಳ : ಶ್ರೀ ಗವಿಸಿದ್ದೇಶ್ವರ ಪದವಿ ಮಹಾವಿದ್ಯಾಲಯದ ವಾಣಿಜ್ಯಶಾಸ್ತ್ರ ವಿಷಯದ ಪ್ರಾಧ್ಯಾಪಕರಾದ ಜಾಲಿಹಾಳ ಶರಣಪ್ಪ ಇವರಿಗೆ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಪಿ. ಎಚ್. ಡಿ ಪದವಿಯನ್ನು ನೀಡಿದೆ. ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಗದಗ ಸಹಾಯಕ ಪ್ರಾಧ್ಯಾಪಕರಾದ ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗದ ಡಾ. ಮಲ್ಲಿಕಾರ್ಜುನ ನಾಯಕ ಇವರ ಮಾರ್ಗದರ್ಶನದಲ್ಲಿ ” ಅರ್ನಿಂಗ್ಸ್ ಅನೌನ್ಸ ಮೆಂಟ್ಸ್ ಅಂಡ್ ಸ್ಟಾಕ್ ರಿಟರ್ನ್ಸ್ – ಎ ಸ್ಟಡಿ ಆಫ್ ಎನ್ ಎಸ್ ಇ ನಿಫ್ಟಿ 5೦೦ ಕಂಪನಿಸ್ ” ಎಂಬ ವಿಷಯದಡಿ ಪಿ.ಎಚ್.ಡಿ ಪ್ರಬಂಧವನ್ನು
ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸಾದರಪಡಿಸಿದ್ದರು.
ಈ ಕುರಿತು ಮಾನ್ಯ ಕುಲಪತಿಗಳು ದಿನಾಂಕ: 02- 07-2024. ರಂದು ಪಿ.ಎಚ್. ಡಿ ಪದವಿಯನ್ನು ಪ್ರದಾನ ಮಾಡಲು ಸಿಂಡಿಕೇಟ್ ಸಭೆಯ ಪರವಾಗಿ ಒಪ್ಪಿಗೆ ನೀಡಿದ ಪ್ರಕಟಣೆಯನ್ನು ಹೊರಡಿಸಿದ್ದಾರೆ. ಶ್ರೀ ಗವಿಸಿದ್ದೇಶ್ವರ ಪದವಿ ಕಾಲೇಜಿನ ಆಡಳಿತ ಮಂಡಳಿ , ಪ್ರಾಚಾರ್ಯರು ಹಾಗೂ ಸಕಲ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ
Comments are closed.