9 ನೇ ತರಗತಿ ಶಾಲಾ ಪಠ್ಯದಲ್ಲಿ ‘ವೀರಶೈವ’ ಪದ ಕೈಬಿಟ್ಟದ್ದು ಸ್ವಾಗತಾರ್ಹ 

Get real time updates directly on you device, subscribe now.

ಕೊಪ್ಪಳ : ರಾಜ್ಯ ಸರಕಾರವು ನೂತನವಾಗಿ ಪರಿಷ್ಕರಿಸಿರುವ 9 ನೇ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿನ ‘ವಿಶ್ವಗುರು ಬಸವಣ್ಣನವರು – ಸಾಂಸ್ಕೃತಿಕ ನಾಯಕ’ ಎಂಬ ಪಾಠದಲ್ಲಿ ‘ವೀರಶೈವ’ ಎಂಬ ಪದವನ್ನು ತೆಗೆದು ಹಾಕಿದ್ದರ ಕುರಿತಾಗಿ ಅಖಿಲ ಭಾರತ ವೀರಶೈವ ಶಿವಾಚಾರ್ಯರ ಸಂಸ್ಥೆಯ ಪರವಾಗಿ ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠದ ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದು ಸರಿಯಲ್ಲ. ಬಸವಣ್ಣನವರ ಪಾಠದಲ್ಲಿ ‘ವೀರಶೈವ’ ಪದ ತೆಗೆದು ಹಾಕಿದ್ದು ಸೂಕ್ತವಾಗಿದೆ.

ಬಸವಣ್ಣನವರು ‘ಲಿಂಗಾಯತ’ ಪ್ರತಿಪಾದಿಸಿದರೇ ಹೊರತು ‘ವೀರಶೈವ’ವಲ್ಲ. ಜಗತ್ತಿನಲ್ಲಿ ಮೊಟ್ಟ ಮೊದಲ ಬಾರಿಗೆ ಇಷ್ಟಲಿಂಗದ ಪರಿಕಲ್ಪನೆಯನ್ನು ತಂದವರೇ ಬಸವಣ್ಣನವರು. ‘ಅರಿವೇ ಗುರು’, ‘ಕಾಯಕವೇ ಕೈಲಾಸ’, ‘ದೇಹವೇ ದೇಗುಲ’ ಮೊದಲಾದ ಆಳ ಪರಿಕಲ್ಪನೆಗಳ ವಚನಗಳನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು.

ಹೀಗಾಗಿ 9 ನೇ ತರಗತಿಯ ಸಮಾಜ ವಿಜ್ಞಾನದ ಪಠ್ಯ ಪುಸ್ತಕದಲ್ಲಿನ ನೂತನ ಪರಿಷ್ಕರಣೆಯನ್ನು ನಾವು ಬೆಂಬಲಿಸುತ್ತೇವೆ ಎಂದು ಜಾಗತಿಕ ಲಿಂಗಾಯತ ಮಹಾಸಭೆಯ ರಾಜ್ಯ ಉಪಾಧ್ಯಕ್ಷರಾದ ಬಸವರಾಜ ಬಳ್ಳೊಳ್ಳಿ, ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಗವಿಸಿದ್ಧಪ್ಪ ಕೊಪ್ಪಳ ಮತ್ತು ಕೊಪ್ಪಳ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷ ಹನುಮೇಶ ಕಲ್ಮಂಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!
%d bloggers like this: