ವಾರ್ತಾಧಿಕಾರಿ ಸುರೇಶಗೆ ಕನ್ನಡಿಗರ ಕಲ್ಯಾಣ ಅಭಿವೃದ್ಧಿ ಸಂಘ ಸನ್ಮಾನ
ಬೀದರ ; ಇತ್ತಿಚೆಗೆ ಕಲಬುರಗಿ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದ ನಿಮಿತ್ಯವಾಗಿ ಬೀದರ ಜಿಲ್ಲೆಯ ಸಹಾಯಕ ನಿರ್ದೇಶಕರಾದ ಜಿ. ಸುರೇಶ. ಅವರಿಗೆ ಹೈದರಾಬಾದ್ ಕನ್ನಡಿಗರ ಕಲ್ಯಾಣ ಅಭಿವೃದ್ಧಿ ಸಂಘದ ಅಧ್ಯಕ್ಷ ಹಾಗೂ ಪತ್ರಕರ್ತರ ಧರ್ಮೇಂದ್ರ ಪೂಜಾರಿ ಬಗ್ದೂರಿಯವರು ಸನ್ಮಾನ ಮಾಡಿ ಗೌರವಿಸಿದರು.
ಇಂದು ವಾರ್ತಾ ಇಲಾಖೆಯ ಕಛೇರಿ ಯಲ್ಲಿ. ಭೇಟಿಯಾಗಿ ಮಾತುಕತೆ ನಡೆಸಿದರು. ಸ್ಥಳೀಯ ಪತ್ರಿಕೆ ಬಗ್ಗೆ ಹೆಮ್ಮೆ ಕೆಲಸ ಮಾಡಿರುವುದನ್ನು ಗುರುತಿಸಿದರು. ತಮ್ಮ ಪ್ರಬಂಧ ಮಂಡಿಸಿ ಹೆಮ್ಮೆಯ ಕೆಲಸ ಮಾಡಿದಿರಿ. ಹೀಗೆ ನಿಮ್ಮ ಸೇವೆ ನಿರಂತರವಾಗಿ ಸಾಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶ್ರೀನಿವಾಸ ತೇಲಂಗ. ಭೀಮರಾವ ಬೀದರಕರ. ಹಾಗೂ ಬಿರಾದಾರ ಉಪಸ್ಥಿತರಿದ್ದರು.
Comments are closed.