ವಾಲ್ಮಿಕಿ ಮಹರ್ಷಿಯ ಆದರ್ಶಗಳನ್ನು ಪಾಲಿಸೋಣ- ಡಾ. ಗಣಪತಿ ಲಮಾಣಿ
ಕೊಪ್ಪಳ ಅ, 17: ಕ್ರಿಸ್ತ ಪೂರ್ವದಲ್ಲಿ ಬಾಳಿ ಬದುಕಿದ ಮತ್ತು ಜಗತ್ತಿಗೆ ಆದರ್ಶದ ಪರಿಕಲ್ಪನೆ ಕೊಟ್ಟ ‘ರಾಮಾಯಣ’ ಕರ್ತೃ ಮಹರ್ಷಿ ವಾಲ್ಮಿಕಿ ನಮಗೆ ನಿತ್ಯ ಆದರ್ಶ ಆಗಿದ್ದಾರೆ ಎಂದು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಕೆ ಲಮಾಣಿ ಅಭಿಪ್ರಾಯ ಪಟ್ಟರು.
ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಾಹಿಳಾ ಕಾಲೇಜಿನ ಕಛೇರಿಯಲ್ಲಿ ಗುರುವಾರದಂದು ಏರ್ಪಡಿಸಿದ್ದ
ಮಹರ್ಷಿ ವಾಲ್ಮಿಕಿ ಜಯಂತಿಯ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಂದುವರೆದು ಮಾತನಾಡಿದ ಅವರು ಜಾಗತಿಕ ಸಂದರ್ಭದಲ್ಲಿ ರಾಮಾಯಣದ ರಾಮ ಬಹಳ ಮುಖ್ಯವಾದ ವ್ಯಕ್ತಿಯಾಗಿ ನಮಗೆ ಕಾಣುತ್ತಾರೆ. ರಾಮನ ಆದರ್ಶ ನಮಗೆ ಯಾವತ್ತು ಪ್ರಮುಖವಾಗಿ ನಿಲ್ಲುತ್ತದೆ ಎಂದರು. ವಾಲ್ಮಿಕಿ ಅನ್ನುವ ಪದವೇ ನಮಗೆ ಆದರ್ಶವಾಗಿದ್ದಾರೆ. ಆದ್ದರಿಂದ ವಾಲ್ಮೀಕಿಯವರು ವಿಚಾರಾಗಳನ್ನು ನಾವು ಓದಬೇಕು. ವಾಲ್ಮೀಕಿಯವರನ್ನು ಒಂದೇ ಜಾತಿಗೆ ಸೀಮಿತ ಮಾಡಬಾರದು ಎಂದರು.
ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ
ಡಾ. ಗವಿಸಿದ್ದಪ್ಪ ಮುತ್ತಾಳ ಮಾತನಾಡಿ ವಾಲ್ಮಿಕಿ ನಮಗೆ ಶ್ರೇಷ್ಠವಾದ ಮಹಾಕಾವ್ಯ ರಾಮಾಯಣವನ್ನು ಬರೆದಿದ್ದಾರೆ. ಈ ಮಹಾಕಾವ್ಯದ ಮೂಲಕ ರಾಮ ಮತ್ತು ಸೀತೆಯ ವಿಚಾರಾಗಳನ್ನು ಮತ್ತು ಗುಣಗಳನ್ನು ಜಗತ್ತಿಗೆ ಪರಿಚಯಸಿದ್ದಾರೆ. ಇದರ ಜೊತೆಗೆ ವಾಲ್ಮೀಕಿಯವರು ಆಡಳಿತಕ್ಕೆ ಸಂಬಂಪಟ್ಟಂತೆ ಅಷ್ಟಾಂಗ ಮಾರ್ಗವನ್ನು ಪರಿಚಯಿಸಿದ್ದಾರೆ.
ಆದರ್ಶ ರಾಜಕಾರಣನ್ನು ಪರಿಚಯಿಸಿದ್ದು ಮಹರ್ಷಿ ವಾಲ್ಮಿಕಿ ಅವರಿಗೆ ಸಲ್ಲಬೇಕು. ಮಹರ್ಷಿ ವಾಲ್ಮೀಕಿಯವರನ್ನು ಒಂದೇ ಜಾತಿಗೆ ಸೀಮಿತ ಮಾಡಬಾರದು ಎಂದರು.
ವಾಲ್ಮಿಕಿ ಇಡೀ ಬದುಕಿನಲ್ಲಿ ತಾತ್ವಿಕತೆ ಪರಿಪಾಲಿಸಿ, ಸಂಸ್ಕಾರದಿಂದ ಜಗತ್ತಿಗೇ ಪೂಜಿತ ವ್ಯಕ್ತಿಯಾಗಿ ಕಾಣುವುದು ಸರಳ ಸಂಗತಿಯಲ್ಲ, ಅದಕ್ಕೆ ಪರಿಶ್ರಮ ಮತ್ತು ಆದರ್ಶ ಬೇಕಾಗುತ್ತದೆ. ಮಹರ್ಷಿ ವಾಲ್ಮೀಕಿ, ಬೇಡರ ಕಣ್ಣಪ್ಪ, ಹಲಗಲಿ ಬೇಡರು, ಸುರಪುರದ ವೆಂಕಟಪ್ಪ ನಾಯಕ, ವೀರ ಮದಕರಿ ನಾಯಕ ಇವರೆಲ್ಲ ಬೇಡ ಜನಾಂಗದ ಸಮುದಾಯಕ್ಕೆ ಸೇರಿದವರು. ಇವರೆಲ್ಲ ಉತ್ತಮ ವಿಚಾರಗಳನ್ನು, ಆದರ್ಶ ಗುಣಗಳನ್ನು ಹೊಂದಿದ್ದರು. ಇವರು ಉತ್ತಮ ಆಡಳಿತಗಾರರು ಆಗಿದ್ದರು. ಈ ಎಲ್ಲ ಮಹನೀಯರು ವಿಚಾರಗಳನ್ನು ಮತ್ತು ಗುಣಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.
ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ವಿಠೋಬ ಎಸ್ ಅವರು ಮಾತನಾಡಿ
ಸಹನೆ , ತಾಳ್ಮೆ, ಪ್ರೀತಿ, ತ್ಯಾಗ ಮುಂತಾದ ಆದರ್ಶದ ಮೂಲಕ ಮಹರ್ಷಿ ಆಗುವುದೆಂದರೆ ಸಾಮಾನ್ಯ ವಿಷಯವಲ್ಲ. ಧರ್ಮ ಎಂದರೆ ಪ್ರೀತಿ, ಕರುಣೆ, ಸಹಬಾಳ್ವೆ ಮತ್ತು ವಿಶ್ವಾಸ ಎಂದರ್ಥ. ಸಹಬಾಳ್ವೆ ಮತ್ತು ಸಂಸ್ಕಾರ ಪ್ರತಿ
ಯೊಬ್ಬ ವ್ಯಕ್ತಿಯ ಮುಖ್ಯ ಸಂಗತಿಯಾಬೇಕು, ಆಗಲೇ ನಾವು ಆದರ್ಶ ವ್ಯಕ್ತಿಗಳಾಗಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥೆ ಶ್ರೀ ಮತಿ ನಾಗರತ್ನ ತಮ್ಮಿನಾಳ, ಗ್ರಂಥಾಪಾಲಕರಾದ ಡಾ. ಮಲ್ಲಿಕಾರ್ಜುನ ಬಿ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಹುಲಿಗೆಮ್ಮ ಬಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ನರಸಿಂಹ ಗುಂಜಳ್ಳಿ, ಭೂಗೋಳಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಅಶೋಕ ಕುಮಾರ,
ಪ್ರಾಧ್ಯಪಕರಾದ ಸುರೇಶ ಸೊನ್ನದ, ಇಬ್ರಾಹಿಂ, ಅತಿಥಿ ಉಪನ್ಯಾಸಕರಾದ ಶಿವಪ್ರಸಾದ ಹಾದಿಮನಿ, ಶಿವಪ್ಪ ಬಡಿಗೇರ, ಬೋಧಕೇತರ ಸಿಬ್ಬಂದಿ ಹನುಮಪ್ಪ ,
ವಿದ್ಯಾರ್ಥಿಗಳು ಹಾಗೂ ಬೋಧಕ- ಬೋದಕೇತರ ಸಿಬ್ಬಂದಿ ಉಪಸ್ತಿತರಿದ್ದರು.
ಕಾಲೇಜಿನ ಸಾಂಸ್ಕೃತಿಕ ಘಟಕದ ಸಂಚಾಲಕರಾದ ಡಾ. ಹುಲಿಗೆಮ್ಮ ಬಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
Comments are closed.