ಹಂದಿಗಳ ಕಳ್ಳತನ, ದರೋಡೆ : ಕಳ್ಳರ ಬಂಧನ

Get real time updates directly on you device, subscribe now.

 

ಕೊಪ್ಪಳ : ಕುಷ್ಟಗಿ ತಾಲೂಕಿನ ವಣಗೇರಿ ಹಾಗೂ ಉಣಕಿಹಾಳ ಗ್ರಾಮದಲ್ಲಿ ನಡೆದಿದ್ದ ಹಂದಿಗಳ ಕಳ್ಳತನ ಪ್ರಕರಣವನ್ನು ಕೊಪ್ಪಳ ಜಿಲ್ಲೆಯ ಪೊಲೀಸರು ಭೇದಿಸಿದ್ದು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಯಶೋಧ ಒಂಟಿಗೋಡಿ

ಕೊಪ್ಪಳ ಜಿಲ್ಲೆಯ, ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ವಣಗೇರಿ ಸೀಮಾದಲ್ಲಿ 08-01-2024 ರಂದು ಬೆಳಗಿನ ಜಾವ 02-30 ಗಂಟೆಯ ಸುಮಾರು ರವಿಕುಮಾರ ಭಜಂತ್ರಿ ರವರ ಕುಷ್ಟಗಿ-ಇಲಕಲ್ ಎನ್.ಹೆಚ್.-50 ರಸ್ತೆಯ ವಣಗೇರಿಯ ಹಂದಿ ಶೆಡ್ಡಿನಲ್ಲಿ ಮಲಗಿರುವ ಇಬ್ಬರನ್ನು ಕೈ ಕಾಲು ಕಟ್ಟಿ ಕಣ್ಣಿಗೆ ಖಾರದ ಪುಡಿ ಎರಚಿ, ಹಲ್ಲೆ ಮಾಡಿ ಅವರ ಬಳಿ ಇದ್ದ ಹಣ ಮತ್ತು ಮೋಬೈಲ್ ಕಿತ್ತುಕೊಂಡು ಹಾಗೂ 6 ಲಕ್ಷ ಬೆಲೆ ಬಾಳುವ 30 ಹಂದಿಗಳು ಕಳ್ಳತನ ಮಾಡಿಕೊಂಡು ಹೋಗಿದ್ದರು. ಇದರ ಕುರಿತು ಕುಷ್ಟಗಿ ಠಾಣೆಯಲ್ಲಿ ಗುನ್ನೆ ನಂ-08/2024 ಕಲಂ-395 ಐಪಿಸಿ ಅಡಿಯಲ್ಲಿ ದಾಖಲಾಗಿತ್ತು. ಹಾಗೂ ಹುಣಸಿಹಾಳ ಗ್ರಾಮದ ತಿಮ್ಮಣ್ಣ ಕೊರವರ ಹಂದಿ ಶೆಡ್ಡಿನಲ್ಲಿ 20 ದೊಡ್ಡ ಹಂದಿ ಹಾಗೂ 20 ಸಣ್ಣ ಹಂದಿ ಮರಿಗಳು ಅಂದಾಜು 1,60,000/- ರೂ ಬೆಲೆಬಾಳುವ ಹಂದಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರ್ ಕುರಿತು ಬೇವೂರು ಪೊಲೀಸ್ ಠಾಣೆ ಪ್ರಕರಣ ದಾಖಲಾಗಿತ್ತು.

ವಿಶೇಷ ತಂಡದ ಅಧಿಕಾರಿ ಮತ್ತು ಸಿಬ್ಬಂದಿಯವರು ಚಾಣಕ್ಷತನದಿಂದ ಮಾಹಿತಿಯನ್ನು ಸಂಗ್ರಹಿಸಿ ಆರೋಪಿತರು ವಾಹನ ಸಮೇತ ಕುಷ್ಟಗಿ ಪಟ್ಟಣದ ಕಡೆಗೆ ಕಳ್ಳತನ ಮಾಡಲು ಪುನಃ ಬಂದಾಗ ಗಜೇಂದ್ರಗಡ ರಸ್ತೆ ಮದಲಗಟ್ಟಿ ಗ್ರಾಮದ ನಿಡಸೇಸಿ ಕ್ರಾಸ್ ಹತ್ತಿರ ಬುಲೆರೋ ವಾಹನ ಸಮೇತ ಹಿಡಿದು ವಶಕ್ಕೆ ಪಡೆದಿದ್ದಾರೆ. , ಯಮನೂರ ದುರಗಪ್ಪ ಕುಶಾಲನಗರ ಕುಕನೂರ, ಕುಮಾರ ಶೇಖಪ್ಪ ರಾಠೋಡ, ಇಬ್ಬರನ್ನು ಬಂಧಿಸಿ ವಿಚಾರಣೆ ಮಾಡಿದಾಗ ಆಪಾದಿತರು ದರೋಡೆ ಮತ್ತು ಸುಲಿಗೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ. ಆಪಾದಿತರಿಂದ ಹಂದಿಗಳನ್ನು ಕಳ್ಳತನ ಮಾಡಿ ಮಾರಾಟ ಮಾಡಿ ಬಂದ ಹಣ 5,03,600/- ಮೊಬೈಲ್ 2000/- ಬುಲೆರೋ ವಾಹನ 75,000/- ಎಲ್ಲಾ ಸೇರಿ ಒಟ್ಟು 5,80,600/- ರೂ ವಶಪಡಿಸಿಕೊಳ್ಳಲಾಗಿದೆ. ಆಪಾದಿತರ ದಸ್ತಗಿರಿ ಮಾಡಲಾಗಿದೆ.

ಹಂದಿ ಕಳ್ಳತನದ ಎರಡೂ ಪ್ರಕರಣಗಳ ಪತ್ತೆ ಮಾಡುವ ಕುರಿತು ಶ್ರೀಮತಿ ಯಶೋಧಾ ವಂಟಗೋಡಿ ಐ.ಪಿ.ಎಸ್. ಜಿಲ್ಲಾ ಪೊಲೀಸ್ ಅಧೀಕ್ಷಕರು ಕೊಪ್ಪಳ ಹಾಗೂ ಹೇಮಂತ್ ಕುಮಾರ್ ಆರ್. ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಕೊಪ್ಪಳ, ಸಿದ್ದಲಿಂಗಪ್ಪಗೌಡ ಪಾಟೀಲ್ ಡಿ.ಎಸ್.ಪಿ. ಗಂಗಾವತಿ ಮತ್ತು ಮುತ್ತಣ್ಣ ಸರವಗೋಳಿ ಡಿವೈಎಸ್‌ಪಿ ಕೊಪ್ಪಳ ರ ಮಾರ್ಗದರ್ಶನದಲ್ಲಿ ಯಶವಂತ ಹೆಚ್. ಬಿಸನಳ್ಳಿ ಸಿ.ಪಿ.ಐ. ಕುಷ್ಟಗಿ ವೃತ್ರ, ಮೌನೇಶ್ವರ ಮಾಲೀಪಾಟೀಲ್ ಸಿ.ಪಿ.ಐ. ಯಲಬುರ್ಗ ವೃತ್ತ ರವರ ನೇತೃತ್ವದಲ್ಲಿ ಮುದ್ದುರಂಗಸ್ವಾಮಿ ಪಿ.ಎಸ್.ಐ. ಕುಷ್ಟಗಿ, ಪ್ರಶಾಂತ ಪಿ.ಎಸ್.ಐ ಬೇವೂರು, ವೆಂಕಟೇಶ ಎ.ಎಸ್‌ಐ, ವಸಂತ ಎ.ಎಸ್.ಐ. ಹನಮಸಾಗರ ಠಾಣೆ, ದುರಗಪ್ಪ ಎ.ಎಸ್.ಐ. ಕುಷ್ಟಗಿ ಠಾಣೆ, ಅಮರೇಶ ಸಿ.ಹೆಚ್.ಸಿ-168, ಶ್ರೀಧರ ಹೆಚ್.ಸಿ-48, ದೇವೆಂದ್ರಪ್ಪ ಹೆಚ್‌ಸಿ-53, ಮೆಹಬೂಬ ಹೆಚ್‌ಸಿ-81, ಶರಣಪ್ಪ ಪಿಸಿ-492, ಪ್ರಶಾಂತ ಪಿ.ಸಿ-161, ಸಂಗಮೇಶ ಪಿ.ಸಿ-116, ಹನಮಂತ ಪಿ.ಸಿ-612, ಪರಶುರಾಮ ಪಿ.ಸಿ-162, ಜೈರಾಮ ಪಿ.ಸಿ-407 ರನ್ನು ಒಳಗೊಂಡ ವಿಶೇಷ ಪತ್ತೆ ತಂಡವನ್ನು ರಚನೆ ಮಾಡಿಲಾಗಿತ್ತು.
ಪತ್ತೆಗೆ ಸವಾಲಾಗಿದ್ದ ಹಂದಿ ಕಳ್ಳತನ ಮಾಡಿದ ಎರಡೂ ಪ್ರಕರಣಗಳನ್ನು ಪತ್ತೆ ಮಾಡಿ ಪ್ರಕರಣ ಭೇದಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡಕ್ಕೆ ಪೊಲೀಸ್ ಅಧೀಕ್ಷಕರು ಕೊಪ್ಪಳ ರವರು ಪ್ರಶಂಸನೆ ವ್ಯಕ್ತಪಡಿಸಿ ಬಹುಮಾನ ಘೋಷಣೆ ಮಾಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!