ಜೂನ್-೨೯ಕ್ಕೆ ಸ್ವಾಭಿಮಾನಿ ಸಂಘರ್ಷ ರಾಜ್ಯ ಸಮಾವೇಶ: ಹಂಪೇಶ್ ಹರಿಗೋಲು

Get real time updates directly on you device, subscribe now.

ಗಂಗಾವತಿ: ಪ್ರೋ.ಬಿ.ಕೃಷ್ಣಪ್ಪ ಜನುಮದಿನದ ಅಂಗವಾಗಿ ಹಾಸನದ ಹರ್ಷ ಮಹಲ್ ಹೊಟೇಲ್ ರಸ್ತೆಯಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜೂನ್ ೨೯ ಶನಿವಾರ ಬೆಳಗ್ಗೆ ೧೧-೦೦ ಗಂಟೆಗೆ ದಲಿತ ಚಳುವಳಿ ಸುವರ್ಣ ಮಹೋತ್ಸವ ರಾಜ್ಯಮಟ್ಟದ ಸ್ವಾಭಿಮಾನಿ ಸಂಘರ್ಷ ಸಮಾವೇಶ ಹಮ್ಮಿಕೊಳ್ಳಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಬೇಕೆಂದು ದಲಿತ ಸಂಘರ್ಷ ಸಮಿತಿ ಸ್ವಾಭಿಮಾನಿ ಕೃಷ್ಣಪ್ಪ ಬಣದ ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷ ಹಂಪೇಶ್ ಹರಿಗೋಲು ತಿಳಿಸಿದ್ದಾರೆ.
ದಲಿತ ಸಮುದಾಯದ ಏಳಿಗೆ, ಸರಕಾರದಿಂದ ಸಿಗಬೇಕಾದ ಸೌಲಭ್ಯ, ಅಸ್ಪಶ್ಯತಾ ಆಚರಣೆ ನಿಷೇಧ, ಶಿಕ್ಷಣಕ್ಕೆ ಆದ್ಯತೆ, ಸಮುದಾಯದ ಯುವಕರ ಸಾಮಾಜಿಕ ಚಿಂತನೆ ಇತರೆ ವಿಷಯಗಳ ಕುರಿತು ಚರ್ಚೆ ನಡೆಸಲಿದ್ದು, ಅತ್ಯಂತ ಪರಿಣಾಮಕಾರಿ ಕಾರ್ಯಕ್ರಮದಲ್ಲಿ ಗಣ್ಯಾತಿಗಣ್ಯರು ಪಾಲ್ಗೊಳ್ಳುವರು ಎಂದು ತಿಳಿಸಿದರು.
ಕೊಪ್ಪಳ ಜಿಲ್ಲಾ ಸಂಚಾಲಕರಾದ ವೆಂಕಟೇಶ್ ನೀರಲೂಟಿ ಮಾತನಾಡಿ, ಕಾರ್ಯಕ್ರಮವನ್ನು ಹಾಸನ ಉಸ್ತುವಾರಿ, ಸಹಕಾರಿ ಸಚಿವ ರಾಜಣ್ಣ ಉದ್ಘಾಟಿಸುವರು. ಸಮಾಜ ಕಲ್ಯಾಣ ಸಚಿವ ಡಾ ಮಹಾದೇವಪ್ಪ ಅವರು ಡಾ.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವರು, ಪ್ರೊ.ಬಿ.ಕೃಷ್ಣಪ್ಪ ಅವರು ಭಾವಚಿತ್ರಕ್ಕೆ ಲೋಕಸಭಾ ಸದಸ್ಯ ಶ್ರೇಯಸ್ ಪಟೇಲ್ ಪುಷ್ಪ ನಮನ ಸಲ್ಲಿಸುವರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಸಂಚಾಲಕರಾದ ಎಂ.ಸೋಮಶೇಖರ್ ವಹಿಸುವರು ಎಂದು ವಿವರಿಸಿದರು.
ಗಂಗಾವತಿ ತಾಲೂಕು ಸಂಚಾಲಕರ ಬೆಟ್ಟಪ್ಪ ಹಿರೇಕುರುಬರ ಮಾತನಾಡಿ, ಅತ್ಯಂತ ಅರ್ಥಪೂರ್ಣ ಈ ಕಾರ್ಯಕ್ರಮಕ್ಕೆ ಹಿಂದುಳಿದ, ಅಲ್ಪ ಸಂಖ್ಯಾತ ಹಾಗು ಮೇಲ್ವರ್ಗದ ಬಡವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮಕ್ಕೆ ಶೋಭೆ ತರಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಸಂಘಟನಾ ಸಂಚಾಲಕರಾದ ಯಮನೂರಪ್ಪ ನಾಯಕ, ನೂರ್ ಮಹ್ಮದ್ ಸಂತ್ರಾಸ್, ಜಂಬುನಾಥ್ ಹೆಬ್ಬಾಳ್ ಇದ್ದರು.

Get real time updates directly on you device, subscribe now.

Comments are closed.

error: Content is protected !!