ಜಿಲ್ಲಾ ಕ್ರೀಡಾ ವಸತಿ ನಿಲಯ : ಜೂ.29 ರಂದು ಕ್ರೀಡಾ ಪಟುಗಳ ಆಯ್ಕೆ ಪ್ರಕ್ರಿಯೆ

Get real time updates directly on you device, subscribe now.

2024-25ನೇ ಸಾಲಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕೊಪ್ಪಳ ಜಿಲ್ಲಾ ಕ್ರೀಡಾ ವಸತಿ ನಿಲಯಕ್ಕೆ ಕ್ರೀಡಾಪಟುಗಳನ್ನು ಆಯ್ಕೆ ಮಾಡುವ ಸಂಬAಧ ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಜೂನ್ 29 ರಂದು ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಕೊಪ್ಪಳ ಜಿಲ್ಲೆಯ ಆಸಕ್ತಿ ಇರುವ ಕ್ರೀಡಾಪಟುಗಳು, ಪಾಲಕರು/ಪೋಷಕರು ಇದರ ಸದುಪಯೋಗ ಪಡೆದುಕೊಳ್ಳಬಹುದು.

ಪ್ರಸಕ್ತ ಸಾಲಿನಲ್ಲಿ 5ನೇ ತರಗತಿ ವ್ಯಾಸಂಗ ಮಾಡುತ್ತಿರುವ ಬಾಲಕ/ಬಾಲಕಿಯರು ಜೂನ್ 29 ರ ಶನಿವಾರದಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ಅಂದು ಬೆಳಿಗ್ಗೆ 10.30 ರಿಂದ ಆಯ್ಕೆ ಪ್ರಕ್ರಿಯೆ ಆರಂಭಗೊಳ್ಳುತ್ತದೆ.
2024-25ನೇ ಸಾಲಿಗೆ 5ನೇ ತರಗತಿ ಪ್ರವೇಶಕ್ಕಾಗಿ ಅಥ್ಲೆಟಿಕ್ಸ್ ಕ್ರೀಡಾ ವಿಭಾಗದಲ್ಲಿ ಬಾಲಕರು ಹಾಗೂ ಬಾಲಕಿಯರು ಕನಿಷ್ಟ 140 ಸೆಂ.ಮೀ. ಎತ್ತರ ಮತ್ತು ವಾಲಿಬಾಲ್ ಕ್ರೀಡಾ ವಿಭಾಗದಲ್ಲಿ ಬಾಲಕರು ಹಾಗೂ ಬಾಲಕಿಯರು ಕನಿಷ್ಠ 145 ಸೆಂ.ಮೀ ಎತ್ತರ ಹೊಂದಿರಬೇಕು.
ನಿಗದಿತ ದಿನಾಂಕದAದು ವಿದ್ಯಾರ್ಥಿಗಳು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಕ್ರೀಡಾಂಗಣ ಕೊಪ್ಪಳದಲ್ಲಿ ಹಾಜರಿರತಕ್ಕದ್ದು. ಆಯ್ಕೆ ಪ್ರಕ್ರಿಯೆ ಒಂದೇ ದಿನ ಮಾತ್ರ ಜರುಗುತ್ತದೆ. ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಪ್ರಸಕ್ತ ಸಾಲಿನಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ಶಾಲೆಯ ಮುಖ್ಯೋಪಾಧ್ಯಾಯರಿಂದ ದೃಢೀಕೃತ ಶಾಲಾ ಧೃಡೀಕರಣ ಪತ್ರ ಕಡ್ಡಾಯವಾಗಿರುತ್ತದೆ ಅಥವಾ ಆಧಾರ್ ಕಾರ್ಡ್ನಲ್ಲಿ ಜನ್ಮ ದಿನಾಂಕ ನಮೂದಿಸಿದ್ದರೂ ಅರ್ಹತೆ ನೀಡಲಾಗುವುದು. ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಯಾವುದೇ ಪ್ರಯಾಣ ಭತ್ಯೆ ಹಾಗೂ ದಿನಭತ್ಯೆ  ನೀಡಲಾಗುವುದಿಲ್ಲ. ಕೊಪ್ಪಳ ಜಿಲ್ಲಾ ಕ್ರೀಡಾ ವಸತಿ ಶಾಲೆಗೆ ಕೊಪ್ಪಳ ಜಿಲ್ಲೆಯವರಿಗೆ ಮಾತ್ರ  ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ.
ಆಯ್ಕೆಯಾದ ಕ್ರೀಡಾಪಟುಗಳಿಗೆ ಕ್ರೀಡಾ ವಸತಿ ನಿಲಯದಲ್ಲಿ ನುರಿತ ತರಬೇತುದಾರರಿಂದ ದೈನಂದಿನ ಕ್ರೀಡಾ ತರಬೇತಿ ನೀಡಲಾಗುವುದು. ಕ್ರೀಡಾಪಟುಗಳು ತಂಗಲು ಸುಸಜ್ಜಿತ ಕೊಠಡಿಗಳ ವ್ಯವಸ್ಥೆ, ದಿನನಿತ್ಯ ಉತ್ತಮ ಪೌಷ್ಠ್ಠಿಕಾಂಶಯುಕ್ತ ಊಟೋಪಹಾರ ವ್ಯವಸ್ಥೆ, ಉತ್ತಮ ಕ್ರೀಡಾ ಅಂಕಣಗಳ ಹಾಗೂ ಕ್ರೀಡಾ ಉಪಕರಣಗಳ ಸೌಲಭ್ಯ, ಕ್ರೀಡಾಪಟುಗಳಿಗೆ ವಾರದ ಒಂದು ದಿನ ಈಜು ತರಬೇತಿ, ಒಳಾಂಗಣ ಕ್ರೀಡಾಂಗಣ ಚಟುವಟಿಕೆಗಳು, ಜಿಮ್ ತರಬೇತಿ, ಕ್ರೀಡಾಪಟುಗಳು ರಾಜ್ಯ/ರಾಷ್ಟçಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಇಚ್ಚಿಸಿದಲ್ಲಿ ಇಲಾಖೆಯಿಂದ ಹಣಕಾಸಿನ ನೆರವು ನೀಡಲಾಗುವುದು. ರಾಜ್ಯ/ರಾಷ್ಟç ಮಟ್ಟದ ಕ್ರೀಡಾಪಟುಗಳಾದಲ್ಲಿ ಮುಂದಿನ ಉನ್ನತ ಶಿಕ್ಷಣಕ್ಕೆ ಅನುವು ಮಾಡಿಕೊಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಎ.ಎನ್ ಯತಿರಾಜು, ಖೋಖೋ ತರಬೇತುದಾರರು, ಮೊ.ಸಂ: 94486-33146, ಕಮಲ್ ಸಿಂಗ್, ಬಿಸ್ಟ್ ವಾಲಿಬಾಲ್ ತರಬೇತಿದಾರರು, ಮೊ.ಸಂ:6360146300, ಸುರೇಶ, ವಾಲಿಬಾಲ್ ತರಬೇತುದಾರರು, ಮೊ.ಸಂ.99015-27333, ದೀಪಾ, ವಾಲಿಬಾಲ್ ತರಬೇತುದಾರರು, ಸಣ್ಣ ವಾಲಿಬಾಲ್ ತರಬೇತಿ ಕೇಂದ್ರ ಕೊಪ್ಪಳ ಮೊ.ಸಂ.80881-43003 ಇವರನ್ನು ಸಂಪರ್ಕಿಸಬಹುದು ಎಂದು ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!
%d bloggers like this: