ಉಮಾಶಂಕರ ಪ್ರತಿಷ್ಠಾನ ಹುಬ್ಬಳ್ಳಿಯವರು ಪ್ರತಿ ವರ್ಷ ಪುಸ್ತಕ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ. 2023 ನೇ ಸಾಲಿನ ಪುಸ್ತಕ ಪ್ರಶಸ್ತಿಗಾಗಿ ಅರುಣಾ ನರೇಂದ್ರ ಅವರ “ಗದ್ದಲದೊಳಗ್ಯಾಕ ನಿಂತಿ” ಕೃತಿ ಆಯ್ಕೆಯಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ರಾಜೇಂದ್ರ ಪಾಟೀಲ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಜೂನ್ 23 ರಂದು ನಡೆಯಲಿರುವ ಭಾವಸಂಗಮ ದಶಮಾನೋತ್ಸವ ಸಮಾರಂಭದಲ್ಲಿ ಇವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಸರಕಾರಿ ಪದವಿ ಪೂರ್ವ ಕಾಲೇಜ ಪ್ರೌಢಶಾಲಾ ವಿಭಾಗ ಕಿನ್ನಾಳದ ಉಪಪ್ರಾಂಶುಪಾಲರು ಮತ್ತು ಶಿಕ್ಷಕ ಸಿಬ್ಬಂದಿ ವರ್ಗ ಹಾಗೂ ಕೊಪ್ಪಳದ ಸಾಹಿತ್ಯಿಕ ವಲಯದ ಪ್ರೊ.ಅಲ್ಲಮ ಪ್ರಭು ಬೆಟ್ಟದೂರ,ಎ.ಎಮ್. ಮದರಿ,ಮಹಾಂತೇಶ ಮಲ್ಲನಗೌಡರ, ಕವಿಸಮಯ ಬಳಗ, ಬಹುತ್ವ ಭಾರತ ಬಳಗ ಮತ್ತು ಕದಳಿ ವೇದಿಕೆಯ ಅಧ್ಯಕ್ಷರು ,ಸರ್ವ ಸದಸ್ಯರು ಅರುಣಾ ನರೇಂದ್ರ ಅವರನ್ನು ಅಭಿನಂದಿಸಿದ್ದಾರೆ.
Comments are closed.