ಕೊಪ್ಪಳ ಚಾರಣ ಬಳಗದಿಂದ ವನಮಹೋತ್ಸವ ನಿಮಿತ್ಯ ಸಸಿನೆಡುವ ಕಾರ್ಯಕ್ರಮ
ಕೊಪ್ಪಳ; – ಕೊಪ್ಪಳ ಚಾರಣ ಬಳಗ ಮತ್ತು ಪರಿಸರ ಪ್ರೇಮಿಗಳಿಂದ ಬಾನುವಾರ ಬೆಳಿಗ್ಗೆ ೭ಕ್ಕೆ ಕೊಪ್ಪಳ ಜಿಲ್ಲಾ ಕ್ರೀಡಾಂಗಣದ ಪರಿಸರದಲ್ಲಿ ವನಮಹೋತ್ಸವ ನಿಮಿತ್ಯ ಸಸಿನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಕೊಪ್ಪಳ ಚಾರಣ ಬಳಗ ಮತ್ತು ಪರಿಸರ ಪ್ರೇಮಿಗಳು ಅಲ್ಲದೇ ವಿದ್ಯಾರ್ಥಿಗಳು, ಉಪನ್ಯಾಸಕರು, ಸಂಶೋಧಕರು, ವೈದ್ಯರು, ಪತ್ರಕರ್ತರು, ವರ್ತಕರು ಮುಂತಾದವರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತಿ ಇರುವವರು ಸಂಯೋಜಕರಾದ ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್(೯೪೪೮೫೭೦೩೪೦) ಮತ್ತು ಡಾ.ವಿಜಯ ಸುಂಕದ(೯೯೮೦೬೬೧೫೭೧) ಇವರನ್ನು ಸಂಪರ್ಕಿಸಬಹುದು.
Comments are closed.