ಸಾಹಿತಿ ಅಲ್ಲಮಪ್ರಭು ಬೆಟ್ಟದೂರರಿಗೆ ಚಂಪಾ ಸಿರಿಗನ್ನಡ ಪ್ರಶಸ್ತಿ

Get real time updates directly on you device, subscribe now.

ಕನ್ನಡದ ಕವಿ, ನಾಟಕಕಾರ, ವಿಮರ್ಷಕ ಹಾಗೂ ಧೀಮಂತ ಹೋರಾಟಗಾರರಾದ “ಚಂಪಾ” ಹೆಸರಿನಿಂದಲೇ ಖ್ಯಾತರಾದ ಪ್ರೊ. ಚಂದ್ರಶೇಖರ ಪಾಟೀಲರು ಸ್ಥಾಪಿಸಿದ ಕರ್ನಾಟಕ ಸ್ವಾಭಿಮಾನಿ ವೇದಿಕ ಕಳೆದ ಹತ್ತಾರು ವರ್ಷಗಳಿಂದ ಸಾಹಿತ್ಯ, ಸಾಂಸ್ಕೃತಿಕ, ಹೋರಾಟದ ಚಟುವಟಿಕೆಗಳಿಂದ ಕ್ರಿಯಾಶೀಲವಾಗಿರುತ್ತದೆ.

ಪ್ರೊ. ಚಂದ್ರಶೇಖರ ಪಾಟೀಲರ ನಾಡು, ನುಡಿ ಹೋರಾಟದ ಅಭಿಮಾನದ ಸ್ಫೂರ್ತಿಯಿಂದ ಕರ್ನಾಟಕ ಸ್ವಾಭಿಮಾನ ವೇದಿಕೆ “ಚಂಪಾ ಸಿರಿಗನ್ನಡ ಪ್ರಶಸ್ತಿ” ಸ್ಥಾಪಿಸಿದ್ದು ಅದನ್ನು 2023 ರಿಂದ ನೀಡಲಾಗುತ್ತಿದೆ. ಈ 2ನೇ ವರ್ಷದ ಪ್ರಶಸ್ತಿಗೆ ಸಮಾಜವಾದಿ ಚಿಂತಕರು, ಬಂಡಾಯ ಸಾಹಿತಿಗಳು, ಹೋರಾಟಗಾರರು, ಕವಿಯಾಗಿ ಗುರುತಿಸಿಕೊಂಡಿರುವ ಕೊಪ್ಪಳದ ಪ್ರೊ. ಅಲ್ಲಮಪ್ರಭು ಬೆಟ್ಟದೂರು ಅವರು ಸರ್ವಾನುಮತದಿಂದ ಆಯ್ಕೆಯಾಗಿರುತ್ತಾರೆ. ಪ್ರಶಸ್ತಿ ಪುರಸ್ಕೃತರಿಗೆ ರೂ. 10,000/- ನಗದು, ಕಂಚಿನ ಫಲಕ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.

ಈ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ದಿನಾಂಕ 20-06-2024 ಗುರುವಾರದಂದು ಕನ್ನಡ ಭವನದ ನಯನ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ಖ್ಯಾತ ವಿದ್ವಾಂಸರಾದ ಪ್ರೊ. ಹಂಪಾ ನಾಗರಾಜಯ್ಯ ನವರು ಅಧ್ಯಕ್ಷತೆ ವಹಿಸುತ್ತಾರೆ. ನಾಡೋಜ ಡಾ. ಬರಗೂರು ರಾಮಚಂದ್ರಪ್ಪನವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಿ.ಕೆ. ರಾಮೇಗೌಡರು ಮತ್ತು ಮೀನಾ ಪಾಟೀಲರು (ಚಂಪಾ ಪುತ್ರಿ) ಭಾಗವಹಿಸುತ್ತಾರೆ.

Get real time updates directly on you device, subscribe now.

Comments are closed.

error: Content is protected !!