ಕಾಂಗ್ರೆಸ್ ನಾಯಕರ ಒಗ್ಗಟ್ಟು ಹಿಟ್ನಾಳ್ ಗೆಲುವಿಗೆ ಕಾರಣ: ಶೇಖ್ ನಬೀಸಾಬ್

Get real time updates directly on you device, subscribe now.

ಗಂಗಾವತಿ: ಕೊಪ್ಪಳ ಲೋಕಸಭಾ ಸಂಸದ ರಾಜಶೇಖರ್ ಹಿಟ್ನಾಳ್ ಅವರ ನಿರಂತರ ಪ್ರಯತ್ನ, ಕಾರ್ಯಕರ್ತರು, ಮುಖಂಡರು, ಶಾಸಕರು, ಮಾಜಿ ಶಾಸಕರು, ಮಾಜಿ, ಮಾಜಿ ಸಂಸದರು, ಸಚಿವರು ಹಾಗು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರ ಒಗ್ಗಟ್ಟಿನ ಶ್ರಮದಿಂದ ಹಿಟ್ನಾಳ್ ಅವರಿಗೆ ಗೆಲುವು ದಕ್ಕಿದೆ ಎಂದು ನಗರಸಭಾ ಮಾಜಿ ಸದಸ್ಯ ಹಾಗು ಕಾಂಗ್ರೆಸ್ ಮುಖಂಡ ಶೇಖ್ ನಬೀಸಾಬ್ ಹೇಳಿದರು,
ಅವರು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಶನಿವಾರ ಮಾತನಾಡಿದರು, ಕೊಪ್ಪಳ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ, ಮಾಜಿ ಸಂಸದ ಸಂಗಣ್ಣ ಕರಡಿ, ಮಾಜಿ ಸಚಿವರಾದ ಇಕ್ಬಾಲ್ ಅನ್ಸಾರಿ, ಮಲ್ಲಿಕಾರ್ಜುನ ನಾಗಪ್ಪ, ಶಾಸಕರಾದ ರಾಘವೇಂದ್ರ ಹಿಟ್ನಾಳ್, ರಾಯರೆಡ್ಡಿ, ಮಾಜಿ ಶಾಸಕರಾದ ಹೆಚ್.ಆರ್.ಶ್ರೀನಾಥ್, ಲಲಿತಾರಾಣಿ ಶ್ರೀರಂಗದೇವರಾಯಲು ಸೇರಿ ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲರು ಉತ್ತಮ ಫಲಿತಾಂಶಕ್ಕೆ ಶ್ರಮಿಸಿದ್ದಾರೆ, ಚುನಾವಣೆಗೆ ಮುನ್ನಾ ಹೇಳಿಕೆ ನೀಡಿ ಕೆಲವರು ಗೊಂದಲ ಸೃಷ್ಟಿಸಿದ್ದರು ಆದರೆ ಮುಸ್ಲಿಂಬಾಂಧವರು ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಒಗ್ಗಟ್ಟಿನಿಂದ ಕಾಂಗ್ರೆಸ್‌ನ್ನು ಬೆಂಬಲಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಸಂವಿಧಾನ ರಕ್ಷಣೆಗಾಗಿ ಕಾಂಗ್ರೆಸ್‌ನ್ನು ಜನತೆ ಆಯ್ಕೆ ಮಾಡಿದ್ದಾರೆ. ಇಡೀ ದೇಶದಲ್ಲಿಯೇ ಇಂಥ ವಾತಾವರಣ ನಿರ್ಮಾಣವಾಗಿದೆ, ಬಡವರು, ಅಲ್ಪಸಂಖ್ಯಾತರು, ಮದ್ಯಮವರ್ಗ, ದುಡಿಯುವರ್ಗದ ಕೈಗಳಿಗೆ ಕೆಲಸ ಕೇಳಿ ಜನತೆ ತಮ್ಮ ಮತ ಕಾಂಗ್ರೆಸ್‌ಗೆ ಹಾಕಿದ್ದಾರೆ. ಗಂಗಾವತಿ ಗ್ರಾಮೀಣ ಹಾಗು ನಗರ ಪ್ರದೇಶದಲ್ಲಿ ಸುಮಾರು ೪೦ ಸಾವಿರ ಮುಸ್ಲಿಂ ಮತದಾರರಿದ್ದು, ಶಾಸಕರಾದ ಜನಾರ್ದನರೆಡ್ಡಿ ಬೆಂಬಲಿಗರು ಸೇರಿ ಎಲ್ಲರೂ ಒಗ್ಗಟ್ಟಿನಿಂದ ಕಾಂಗ್ರೆಸ್ ಗೆ ಮತ ಹಾಕಿದ್ದಾರೆ. ಇತರೆ ಸಮುದಾಯ, ಪ್ರಗತಿಪರ ಸಂಘಟನೆಗಳು ಕೂಡಾ ಬೆಂಬಲಿಸಿದ್ದಾರೆಂದರು.
ರೆಡ್ಡಿ ಕಡಿವಾಣ ಹಾಕಲಿ: ಗಂಗಾವತಿಯಲ್ಲಿ ಕಾನೂನು ಬಾಹೀರ ಚಟುವಟಿಕೆಗಳು ಮಿತಿ ಮೀರಿದ್ದು ಶಾಸಕರಾದ ಜನಾರ್ದನರೆಡ್ಡಿ ಬೆಂಬಲಿಗರೂ ಕೂಡಾ ಇಂಥ ದಂದೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಶಾಸಕರು ಕೂಡಲೆ ಕಡಿವಾಣ ಹಾಕಿ ಸಾರ್ವಜನಿಕರು ನೆಮ್ಮದಿಯಾಗಿ ಬದುಕಲು ಅವಕಾಶ ನೀಡಬೇಕು, ಮಟಗಾ, ಇಸ್ಪೀಟ್, ಡಗ್ಸ್, ಗಾಂಜಾ ಹಾಗು ಅಕ್ರಮ ಮದ್ಯ ಮಾರಾಟ ಮಿತಿ ಮೀರಿದ್ದು ಜನರಿಗೆ ತೊಂದರೆಯಾಗುತ್ತಿದೆ, ಸಾವಿರಾರು ಕುಟುಂಬಗಳು ಬೀದಿಗೆ ಬರುವ ಸ್ಥಿತಿ ನಿರ್ಮಾಣವಾಗಿದೆ, ನಗರದ ಎಪಿಎಂಸಿ ಗಂಜ್, ಸಿದ್ದಿಕೇರಿ ಭಾಗದಲ್ಲಿ, ಪಾಪಾಯ ಕೆನಾಲ್ ಹಾಗು ಕೆಲ ಗುಡ್ಡಗಾಡು ಪ್ರದೇಶಗಳಲ್ಲಿ ಹೇಳವಾಗಿ ಅಕ್ರಮ ಚಟುವಟಿಕೆಗಳು ಜರುಗುತ್ತಿದ್ದು ಶಾಸಕರು ಗಮನ ಹರಿಸಬೇಕು, ಜನರಿಗೆ ಕೈಗೆ ಸಿಗಬೇಕು. ಕೆಲ ದಿನಗಳಲ್ಲೇ ಈ ಕುರಿತು ಕೊಪ್ಪಳ ಎಸ್ಪಿ ಹಾಗು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿಯವರಿಗೆ ದೂರು ನೀಡಿ ಕಠಿಣ ಕ್ರಮಕ್ಕೆ ಆಗ್ರಹಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಗುತ್ತೇದಾರರಾದ ಅಯ್ಯೂಬ್ ಸಗರಿ, ನಗರಸಭೆ ಮಾಜಿ ಸದಸ್ಯ ಸೈಯ್ಯದ್ ಇಬಾಹಿಂ, ಗೌಸ್ ಪಾಶಾ, ಅಸ್ಲಂ ಪಾಶಾ, ಎಸ್.ಎ.ತಾರೀಖ್ ಪಟೇಲ್ ಮತ್ತು ಭಾಷಾಸಾಬ್ ಮಸ್ಕಿ ಇದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: