ಕಾರ್ಯಗಾರದ ಸಮಾರೋಪ
ಕೊಪ್ಪಳ : ಕರ್ನಾಟಕ ಸರ್ಕಾರದ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ , ವಾಧ್ವಾನಿ ಫೌಂಡೇಶನ್ ಬೆಂಗಳೂರು ಇವರ ಸಹಭಾಗಿತ್ವದಲ್ಲಿ ಕೊಪ್ಪಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚಿಗೆ ಆರ್ಟಿಫಿಸಿಯಲ್ ಇಂಟಲಿಜೆನ್ಸಿ ಆಧಾರಿತ ಎರಡು ದಿನಗಳ ಉದ್ಯೋಗ ಕೌಶಲ್ಯ ತರಬೇತಿ ಕಾರ್ಯಗಾರವು ಯಶಸ್ವಿಯಾಗಿ ಜರುಗಿತು .
ಎರಡು ದಿನಗಳವರೆಗೆ ನಡೆದ ಕಾರ್ಯಗಾರದಲ್ಲಿ
ಸಂಪನ್ಮೂಲ ವ್ಯಕ್ತಿಯಾಗಿ ವಾಧ್ವಾನಿ ಫೌಂಡೇಶನ್ ಬೆಂಗಳೂರಿನ ಮಾಸ್ಟರ್ ಟ್ರೇನರ್ ಕು. ಸ್ವಾತಿ ಪುತ್ರನ್ ತರಬೇತಿ ನೀಡುತ್ತಾ ಕೈಗಾರಿಕೆಗಳು ವಿದ್ಯಾರ್ಥಿಗಳಿಂದ ನಿರೀಕ್ಷಿಸುತ್ತಿರುವ ಕೌಶಲ್ಯಗಳು ಹಾಗೂ ಪ್ರಸ್ತುತ ವಿದ್ಯಾರ್ಥಿಗಳಿಗಿರುವ ಕೌಶಲ್ಯಗಳು ಕುರಿತು ಉಪಯುಕ್ತ ಮಾತನಾಡಿದರು. ಅಲ್ಲದೆ ಉದ್ಯೋಗಕ್ಕೆ ಬೇಕಾಗಿರುವ ಎಲ್ಲ ಕೌಶಲ್ಯಗಳನ್ನು ಹೇಗೆ ಮತ್ತು ಯಾವ ಮೂಲಗಳಿಂದ ಕಲಿತುಕೊಳ್ಳಬೇಕೆಂಬುದರ ಕುರಿತು ಸವಿಸ್ತಾರವಾಗಿ ತರಬೇತಿಯನ್ನು ನೀಡಿದರು.
20 ಪದವಿ ಕಾಲೇಜುಗಳಿಂದ 40 ಜನ ಪ್ರಾಧ್ಯಾಪಕರು ಪ್ರತಿನಿಧಿಗಳಾಗಿ ಆಗಮಿಸಿದ್ದರು. ಎರಡನೇ ದಿನದಲ್ಲಿ ಮಧ್ಯಾಹ್ನ ಜರುಗಿದ ಸಮಾರೋಪ ಸಮಾರಂಭದಲ್ಲಿ ಕಾ. ಶಿ. ಇ ಪ್ರಾದೇಶಿಕ ಕಚೇರಿ ವಿಶೇಷ ಅಧಿಕಾರಿಗಳಾದ ಡಾ. ಬಿ. ಸರೋಜಾ , ತರಬೇತುದಾರರಾದ ಕು.ಸ್ವಾತಿ ಪುತ್ರನ್, ಪ್ರಾಂಶು ಪಾಲರಾದ ತಿಮ್ಮಾರೆಡ್ಡಿ ಮೇಟಿ , ಸ್ಥಾನೀಕರಣ ಕೋಶ ವಿಭಾಗದ ಸಂಚಾಲಕರು ಮತ್ತು ಪ್ರಾಧ್ಯಾಪಕರಾದ ಶಿವನಾಥ್ ಇ.ಜಿ ಇದ್ದರು.
gfgc_koppal_college_koppal
Comments are closed.