ಭಾಗ್ಯನಗರದ ಇನ್ನರ್‌ವ್ಹೀಲ್ ಕ್ಲಬ್ ಕಾರ್ಯ ಶ್ಲಾಘನೀಯ – ಟಿ.ಎಸ್ ಶಂಕರಯ್ಯ

Get real time updates directly on you device, subscribe now.

ಕೊಪ್ಪಳ: ಸರಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಸದಾ ಕೈಜೋಡಿಸುತ್ತಾ ಗುಣಾತ್ಮಕ ಶಿಕ್ಷಣ ನೀಡುವಲ್ಲಿ, ಸಹಕರಿಸುತ್ತಿರುವ ಭಾಗ್ಯನಗರದ ಇನ್ನರ್‌ವ್ಹೀಲ್ ಕ್ಲಬ್ ನ ಕಾರ್ಯ ಶ್ಲಾಘನೀಯ ಎಂದು ಕೊಪ್ಪಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್ ಶಂಕರಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಧನ್ವಂತರಿ ಕಾಲೋನಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಹೊಸದಾಗಿ ದಾಖಲಾಗುವ ಪ್ರತಿ ಮಗುವಿಗೂ ೧೦೦೦.೦೦ ರೂ.ಗಳನ್ನು ನಿಶ್ಚಿತ ಠೇವಣಿ ವಿತರಣಾ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಎಫ್.ಡಿ ವಿತರಿಸಿ ಮಾತನಾಡಿದ ಇವರು ಶ್ರೀಮತಿ ಶಾರದಾ ಪಾನಘಂಟಿ ಇವರ ಅಧ್ಯಕ್ಷತೆಯಲ್ಲಿ ಸದರಿ ಶಾಲೆಯನ್ನು ಹ್ಯಾಪಿ ಸ್ಕೂಲ್ ಎಂಬ ತಲೆಬರಹದಡಿಯಲ್ಲಿ ಶಾಲೆಗೆ ಹೊಸದಾಗಿ ದಾಖಲಾಗುವ ಪ್ರತಿ ಮಗುವಿಗೂ ೧೦೦೦.೦೦ ರೂ.ಗಳನ್ನು ನಿಶ್ಚಿತ ಠೇವಣಿ ನೀಡುವುದರ ಜೊತೆಗೆ ೫ ಡೆಸ್ಕ್, ೩೦ ತಟ್ಟ ಲೋಟ, ಸ್ಪೀಕರ್, ರೆಡಿಯೋ ೩ ನಲಿಕಲಿ ರ್‍ಯಾಕ್, ಕುಡಿಯುವ ನೀರಿಗಾಗಿ ೫೦೦ ಲೀಟರ್ ಸಾಮರ್ಥ್ಯದ ಸಿಂಟೆಕ್ಸ್, ಮಿಕ್ಸರ್, ಫ್ಯಾನ್, ಥರ್ಮಲ್ ಸ್ಕ್ಯಾನರ್, ಪ್ರತಿ ಮಗುವಿಗೂ ಚೈಲ್ಡ್ ಪ್ರೋಫೈಲ್ ಫೈಲ್ ನೀಡುವುದರ ಜೊತೆಗೆ ಶೌಚಾಲಯ ದುರಸ್ಥಿ ಮತ್ತು ಧ್ವಜ ಸ್ಥಂಬ ಅಂದಚಂದವನ್ನು ಹೆಚ್ಚಿಸುವ ಕಾರ್ಯ ಹಾಗೂ ಕ್ರೀಢಾ ಸಾಮಾಗ್ರಿಗಳನ್ನು ನೀಡಿರುವುದು ತುಂಬ ಅನುಕರಣೀಯ ಹಾಗೂ ಶ್ಲಾಘನೀಯ ಕಾರ್ಯವೆಂದು ಅಭಿಮತ ವ್ಯಕ್ತಪಡಿಸಿದರು.
ಇದೇ ಸಮಯದಲ್ಲಿ ಶಾಲಾ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷರಾಧ ಶ್ರೀಮತಿ ಶಾರದಾ ಪಾನಘಂಟಿ, ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಪ್ರತಿಭಾವಂತರಿರುತ್ತಾರೆ. ಅಂತಹ ಮಕ್ಕಳಿಗೆ ಮೂಲಭೂತ ಸೌಲಭ್ಯಗಳನ್ನು ನೀಡುವುದರ ಜೊತೆಗೆ ಶೈಕ್ಷಣಿಕವಾಗಿ ಪ್ರೋತ್ಸಾಹಿಸಿದರೆ ಆ ಮಗು ಶಾಲೆಯಿಂದ ಹೊರಗುಳಿಯದೆ ಕಲಿಕೆಯಲ್ಲಿ ಉತ್ತಮ ಪ್ರಗತಿಯನ್ನು ಕಾಣಲು ಸಾಧ್ಯ. ಈ ನಿಟ್ಟಿನಲ್ಲಿ ನಮ್ಮ ಇನ್ನರ್‌ವ್ಹೀಲ್ ಕ್ಲಬ್ ಸಮಾಜಮುಖಿ ಕಾರ್ಯ ಮಾಡುವುದರ ಜೊತೆಗೆ ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಶ್ರಮಿಸುತ್ತಿದೆ. ಆಗೆಯೇ ಸದರಿ ಶಾಲೆಯಲ್ಲಿನ ಸಿಬ್ಬಂದಿ ವರ್ಗದವರು ಕೂಡ, ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಶ್ರಮಿಸುತ್ತಿರುವುದು ಅಭಿನಂದನಾರ್ಹ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಶ್ರೀಮತಿ ಸುವರ್ಣ ಗಂಟಿ, ಕಾರ್ಯದರ್ಶಿಗಳು ಇನ್ನರ್‌ವ್ಹೀಲ್ ಕ್ಲಬ್, ಗೌರಿ, ನಿರ್ಮಲಾ ಭಾಗವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಲೂಕು ಸಂಪನ್ಮೂಲ ವ್ಯಕ್ತಿಗಳಾದ ಶರಣಪ್ಪ ರೆಡ್ಡರ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು, ಬಹದ್ದೂರು ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿ ಹನುಮಂತಪ್ಪ ಕುರಿ, ಮುಖ್ಯೋಪಾಧ್ಯಾಯರಾದ ಮಮತಾ ಚಕ್ರಸಾಲಿ, ಶಿಕ್ಷಕರಾದ ಪೂರ್ಣಿಮಾ ಮಾಗಳ ಉಪಸ್ಥಿತರಿದ್ದು.

Get real time updates directly on you device, subscribe now.

Comments are closed.

error: Content is protected !!
%d bloggers like this: