ಸಿರಿಗನ್ನಡ ವೇದಿಕೆ ಗಂಗಾವತಿ ತಾಲೂಕು ಪದಾಧಿಕಾರಿಗಳ ಪದಗ್ರಹಣ, ಕೃತಿ ಲೋಕಾರ್ಪಣೆ, ಕವಿಗೋಷ್ಠಿ ಹಾಗೂ ಸನ್ಮಾನ ಸಮಾರಂಭ

Get real time updates directly on you device, subscribe now.

ಗಂಗಾವತಿ: ಜೂನ್-೦೯ ರವಿವಾರ ಬೆಳಿಗ್ಗೆ ೧೦:೩೦ಕ್ಕೆ ನಗರದ ತಾ.ಪಂ ಹಿಂಭಾಗದಲ್ಲಿರುವ ಕನ್ನಡ ಸಾಹಿತ್ಯ ಭವನದಲ್ಲಿ ಸಿರಿಗನ್ನಡ ವೇದಿಕೆಯ ಗಂಗಾವತಿ ತಾಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ, ನಾಟಕ ಕೃತಿ ‘ಬಸವನೆಂಬ ಬೆಳಕು’ ಲೋಕಾರ್ಪಣೆ, ಕವಿಗೋಷ್ಠಿ ಹಾಗೂ ಸನ್ಮಾನ ಕಾರ್ಯಕ್ರಮ ಜರುಗಲಿವೆ ಎಂದು ಸಿರಿಗನ್ನಡ ವೇದಿಕೆಯ ನೂತನ ಗಂಗಾವತಿ ತಾಲೂಕು ಅಧ್ಯಕ್ಷರಾದ ಎಸ್. ಬಸವರಾಜ ಹೇರೂರುರವರು ಪ್ರಕಟಣೆಯಲ್ಲಿ ತಿಳಿಸಿದರು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಅರಳಹಳ್ಳಿ ಬೃಹನ್ಮಠದ ಶ್ರೀ ವೇ.ಮೂ ರೇವಣಸಿದ್ದಯ್ಯ ತಾತನವರು, ಅಧ್ಯಕ್ಷತೆಯನ್ನು ಸಿರಿಗನ್ನಡ ವೇದಿಕೆಯ ಕೊಪ್ಪಳ ಜಿಲ್ಲಾಧ್ಯಕ್ಷರು ಹಾಗೂ ಸಾಹಿತಿಗಳಾದ ಮಂಜುನಾತ ಪ. ಚಿತ್ರಗಾರ ವಹಿಸಲಿದ್ದು, ಉದ್ಘಾಟನೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷರಾದ ಶರಣೇಗೌಡ ಪೊಲೀಸ್ ಪಾಟೀಲ್‌ರವರು ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗಂಗಾವತಿ ತಾಲೂಕ ಕಸಾಪ ಅಧ್ಯಕ್ಷರಾದ ಶ್ರೀನಿವಾಸ ಅಂಗಡಿ, ಗಜಲ್ ಕವಿಗಳಾದ ಅಲ್ಲಾಗಿರಿರಾಜ ಕನಕಗಿರಿ, ಹಿರಿಯ ಸಾಹಿತಿಗಳಾದ ಬಸವರಾಜ ರ್‍ಯಾವಳ ಕಾರಟಗಿ, ರಮೇಶ ಗಬ್ಬೂರು, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ನಾಗರಾಜ ಇಂಗಳಗಿ, ಹಿರಿಯ ಪತ್ರಕರ್ತರಾದ ಕೆ. ನಿಂಗಜ್ಜರವರು ಹಾಗೂ ವಿಶೇಷ ಆಹ್ವಾನಿತರಾಗಿ ಹಿರಿಯ ಸಾಹಿತಿ ಡಾ. ಮುಮ್ತಾಜ್ ಬೇಗಂ, ಸಿರಿಗನ್ನಡ ವೇದಿಕೆಯ ರಾಜ್ಯಾಧ್ಯಕ್ಷರಾದ ಜಿ.ಎಸ್ ಗೋನಾಳ, ಚಲನಚಿತ್ರ ಸಾಹಿತಿ ಮಹೇಶ ಮನ್ನಾಪ೦ಉರ, ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಕೆ.ಎಸ್. ಮಲ್ಲಿಕಾರ್ಜುನ, ಪ್ರಾಚಾರ್ಯರಾದ ಟಿ. ಜಗನ್ನಾಥರಾವ್ ಆಗಮಿಸಲಿದ್ದಾರೆ.
ಎಸ್. ಬಸವರಾಜ ಹೇರೂರುರವರ ನಾಟಕ ಕೃತಿ ‘ಬಸವನೆಂಬ ಬೆಳಕು’ ಬಿಡುಗಡೆಯನ್ನು ಹಿರಿಯ ಸಾಹಿತಿಗಳಾದ ಅಜ್ಮೀರ ನಂದಾಪುರ ಬಿಡೆಗೊಳಿಸಲಿದ್ದಾರೆ. ಪುಸ್ತಕದ ಅವಲೋಕವನ್ನು ಸಾಹಿತಿ ಶರಣಪ್ಪ ತಳ್ಳಿ ಮಾಡಲಿದ್ದಾರೆ. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳಾದ ಡಾ. ಜಾಜಿ ದೇವೆಂದ್ರಪ್ಪ ವಹಿಸಲಿದ್ದಾರೆ.
ಈ ಕಾರ್ಯಕ್ರಮಕ್ಕೆ ತಾಲೂಕಿನ ಎಲ್ಲಾ ಸಾಹಿತಿಗಳು, ಕನ್ನಡ ಅಭಿಮಾನಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಎಸ್. ಬಸವರಾಜ ಹೇರೂರು ತಾಲೂಕ ಅಧ್ಯಕ್ಷರು, ಸಿರಿಗನ್ನಡ ವೇದಿಕೆ, ಗಂಗಾವತಿ.
 ತಿಳಿಸಿದರು.

Get real time updates directly on you device, subscribe now.

Comments are closed.

error: Content is protected !!