ಹಂಪಿಯ ಪರಿಸರದಲ್ಲಿ ಪ್ರಾಗೈತಿಹಾಸಿಕ ಕಾಲದ ಗವಿವರ್ಣ ಚಿತ್ರಗಳು ಪತ್ತೆ

Get real time updates directly on you device, subscribe now.

: ಹಂಪಿ ವಿಶ್ವ ಪರಂಪರೆ ಪ್ರದೇಶದಲ್ಲಿರುವ ಜಿಲ್ಲೆಯ ಗಂಗಾವತಿ ತಾಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ ರಾಜ್ಯ ಪುರಾತತ್ತ್ವ ಸಂಗ್ರಹಾಲಯಗಳು ಪರಂಪರೆ ಇಲಾಖೆ ಕಮಲಾಪುರ-ಹಂಪಿಯ ಉಪ ನಿರ್ದೇಶಕರಾದ ಡಾ.ಆರ್.ಶೇಜೇಶ್ವರ ಹಾಗೂ ಪುರಾತತ್ತ್ವ ಸಹಾಯಕರಾದ ಡಾ.ಆರ್.ಮಂಜನಾಯ್ಕ ಇವರುಗಳು ಕ್ಷೇತ್ರ ಕಾರ್ಯ ಕೈಗೊಂಡಾಗ ಆನೆಗೊಂದಿಯ ಹತ್ತಿರದ ಪಂಪ ಸರೋವರಕ್ಕೆ ಹೋಗುವ ದಾರಿಯ ಎಡಬದಿಯ ಗುಡ್ಡದಲ್ಲಿರುವ ಬಂಡೆಯಲ್ಲಿ ಗವಿವರ್ಣ ಚಿತ್ರಗಳು ಪತ್ತೆಯಾಗಿವೆ.

ಇವುಗಳು ಕಿತ್ತಳೆ ಕೆಂಪು ವರ್ಣದಿಂದ ಮೂಡಿಸಿದ ಚಿತ್ರಗಳಾಗಿದ್ದು, ನಿಂತಿರುವ ಗೂಳಿಯು ಡುಬ್ಬದಿಂದ ಕೂಡಿದ್ದು, ಈ ಗೂಳಿಯ ಕಾಲುಗಳನ್ನು ಹುಲಿಯು ಹಿಡಿದಿರುವಂತೆ ಚಿತ್ರಿಸಲಾಗಿದ್ದು, ಹುಲಿಯು ದಷ್ಟ ಪುಷ್ಟವಾಗಿದ್ದು ಪಟ್ಟೆಗಳಿಂದ ಕೂಡಿದೆ. ಹುಲಿಯು 50 ಸೆಂ.ಮೀ ಉದ್ದ ಹಾಗೂ 20 ಸೆಂ.ಮೀ ಅಗಲವಾಗಿದೆ ಹಾಗೂ ಗೂಳಿಯು 40.ಸೆಂ.ಮೀ ಉದ್ದ ಹಾಗೂ 20 ಸೆಂ.ಮೀ ಅಗಲವಾಗಿದೆ. ಇನ್ನೆರಡು ಚಿಕ್ಕ ಚಿಕ್ಕ ಗೂಳಿಗಳ ಅಸ್ಪಷ್ಟ ಚಿತ್ರಗಳು ಗೋಚರಿಸುತ್ತವೆ. ಈ ಚಿತ್ರಗಳ ಅಕ್ಕಪಕ್ಕದಲ್ಲಿ ಅಸ್ಪಷ್ಟ ಕಿತ್ತಳೆ ಕೆಂಪು ವರ್ಣದಿಂದ ಮೂಡಿಸಿದ ಇತರ ಚಿತ್ರಗಳು ಸಹ ಕಂಡುಬರುತ್ತವೆ. ಈ ಗವಿ ವರ್ಣ ಚಿತ್ರಗಳು ನೈಸರ್ಗಿಕವಾಗಿ ಎರಡು ಬಂಡೆಗಳಿರುವ ಒಂದು ಬೃಹದಾಕಾರದ ಬಂಡೆಯು ಸಣ್ಣ ಪ್ರಮಾಣದ ಬಂಡೆಯ ಮೇಲೆ ವಾಲಿ ನಿಂತಿದ್ದು ಇದರಲ್ಲಿ ವರ್ಣ ಚಿತ್ರ ಮೂಡಿರುವ ಸಣ್ಣ ಬಂಡೆಗೆ ರಕ್ಷಣೆಯಂತಿದೆ. ಇದನ್ನು ಬಳಸಿಕೊಂಡು ವರ್ಣ ಚಿತ್ರಕ್ಕೆ ನೈಸರ್ಗಿಕವಾಗಿ ಮಳೆ ಗಾಳಿ ಬಿಸಿಲು ಮುಂತಾದ ನೈಸರ್ಗಿಕ ವಿಕೋಪಕ್ಕೆ ಹಾಳಾಗದೆ ಇರುವ ಜಾಗವನ್ನು ಆಯ್ಕೆ ಮಾಡಿಕೊಂಡಿರುವುದು ಗವಿ ವರ್ಣ ಚಿತ್ರಗಳನ್ನು ಚಿತ್ರಿಸಿರುವುದು ಚಿತ್ರಕಾರನ ಕೌಶ್ಯಲತೆಯನ್ನು ಸೂಚಿಸುತ್ತದೆ.
ಇವುಗಳು ಪ್ರಾಗೈತಿಹಾಸ ಕಾಲದ ಗವಿವರ್ಣ ಚಿತ್ರಗಳಾಗಿದ್ದು, ಇವುಗಳು ಸುಮಾರು 2500 ವರ್ಷಗಳ ಪುರಾತನ ವರ್ಣ ಚಿತ್ರಗಳೆಂದು ಹೇಳಬಹುದಾಗಿದೆ. ಗವಿ ವರ್ಣಚಿತ್ರಗಳ ಶೋಧನೆಯಲ್ಲಿ ಸಹಕರಿಸಿದ ಸಿಬ್ಬಂದಿ ವೆಂಕಟೇಶ ಇವರಿಗೆ ಡಾ.ಆರ್.ಶೇಜೇಶ್ವರ ಇವರು ಧನ್ಯವಾದಗಳನ್ನು ತಿಳಿಸಿದ್ದಾರೆ ಎಂದು ಕಮಲಾಪುರ-ಹಂಪಿಯ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಪ್ರಕಟಣೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!
%d bloggers like this: