ಮುಂಗಾರು ಹಂಗಾಮಿನ ಬೆಳೆ ವಿಮೆಗೆ ನೋಂದಾಯಿಸಲು ರೈತರಿಗೆ ಸೂಚನೆ
2024-25 ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯನ್ನು ಮುಂಗಾರು ಹಂಗಾಮಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಬೆಳೆವಿಮೆಗೆ ನೋಂದಾವಣೆ ಪ್ರಕ್ರಿಯೆ ಆರಂಭಗೊAಡಿದೆ.
ಕೃಷಿ ಇಲಾಖೆ ಅಧಿಕಾರಿಗಳು, ಬ್ಯಾಂಕ್ ಸಿಬ್ಬಂದಿ ಮತ್ತು ಟಾಟಾ ಎ.ಐ.ಜಿ ಕಂಪನಿಯ ಪ್ರತಿನಿಧಿಗಳೊಂದಿಗೆ ಜಿಲ್ಲಾಧಿಕಾರಿಗಳು ಸಭೆ ಜರುಗಿಸಿ ಪ್ರಸಕ್ತ ಸಾಲಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ನೋಂದಾವಣೆ ಮಾಡುವಂತೆ ಹಾಗೂ ಇನ್ಸೂರೆನ್ಸ್ ಕಂಪನಿಯ ಪ್ರತಿನಿಧಿಗಳಿಗೆ ಹೋಬಳಿ ಮಟ್ಟದಲ್ಲಿ ಮತ್ತು ತಾಲ್ಲೂಕು ಮಟ್ಟದಲ್ಲಿ ತಮ್ಮ ಕಛೇರಿಯನ್ನು ತೆರೆದು ರೈತರಿಗೆ ಬೆಳೆವಿಮೆ ನೋಂದಾವಣೆಯಲ್ಲಿ ಸಹಾಯ ಮಾಡುವಂತೆ ಸೂಚಿಸಿದ್ದಾರೆ.
ಅಧಿಸೂಚಿತ ಬೆಳೆಗಳಾದ ಹತ್ತಿ (ನೀರಾವರಿ) ಮತ್ತು ಹೆಸರು (ಮಳೆಯಾಶ್ರಿತ) ಬೆಳೆಗಳಿಗೆ ನೋಂದಾಯಿಸಲು ಜುಲೈ 15 ಕೊನೆಯ ದಿನವಾಗಿದೆ. ಇತರೆ ಅಧಿಸೂಚಿತ ಎಲ್ಲಾ ಬೆಳೆಗಳಿಗೆ ನೋಂದಾಯಿಸಲು ಜುಲೈ 31 ಕೊನೆಯ ದಿನವಾಗಿದೆ. ಆದ್ದರಿಂದ ರೈತರು ಬೆಳೆವಿಮೆ ನೋಂದಾಯಿಸಿ ಬೆಳೆವಿಮೆ ಪರಿಹಾರ ಲಾಭ ಪಡೆಯಲು ಈ ಮೂಲಕ ಕೋರಲಾಗಿದೆ. ರೈತರು ಕಡ್ಡಾಯವಾಗಿ ಫ್ರೂಟ್ಸ್ ಐಡಿಯನ್ನು ಹೊಂದಿರಬೇಕು. ರೈತರು ಬಿತ್ತನೆ ಮಾಡುವ ಬೆಳೆಯನ್ನೇ ನೋಂದಾಯಿಸಬೇಕು ಮತ್ತು ತಮ್ಮ ಬೆಳೆಯನ್ನು ತಾವೇ ಖುದ್ದಾಗಿ ಬೆಳೆ ಸಮೀಕ್ಷೆಯನ್ನು ಮಾಡಬೇಕು.
ಗಂಗಾವತಿ ತಾಲ್ಲೂಕಿನ ಗ್ರಾಮ ಪಂಚಾಯತಿ ಮಟ್ಟದಲ್ಲಿ ಭತ್ತ(ನೀರಾವರಿ), ಕೊಪ್ಪಳ ಮತ್ತು ಕುಷ್ಟಗಿ ತಾಲ್ಲೂಕಿನ ಗ್ರಾಮ ಪಂಚಾಯತಿ ಮಟ್ಟದಲ್ಲಿ ಮುಸಕಿನ ಜೋಳ(ಮಳೆಯಾಶ್ರಿತ), ಸಜ್ಜೆ(ಮಳೆಯಾಶ್ರಿತ) ಹಾಗೂ ಯಲಬುರ್ಗಾ ತಾಲ್ಲೂಕಿನ ಗ್ರಾಮ ಪಂಚಾಯತಿ ಮಟ್ಟದಲ್ಲಿ ಹೆಸರು(ಮಳೆಯಾಶ್ರಿತ), ಮುಸುಕಿನಜೋಳ(ಮಳೆಯಾಶ್ರಿತ) ಬೆಳೆಗಳನ್ನು ಅಧಿಸೂಚಿತ ಬೆಳೆಗಳೆಂದು ಘೋಷಿಸಲಾಗಿದೆ.
ಹೋಬಳಿ ಮಟ್ಟದಲ್ಲಿ ಭತ್ತ (ಮಳೆಯಾಶ್ರಿತ/ನೀರಾವರಿ), ಜೋಳ (ಮಳೆಯಾಶ್ರಿತ/ನೀರಾವರಿ), ಮುಸುಕಿನ ಜೋಳ(ಮಳೆಯಾಶ್ರಿತ/ನೀರಾವರಿ), ಸಜ್ಜೆ (ಮಳೆಯಾಶ್ರಿತ/ನೀರಾವರಿ), ಸೂರ್ಯಕಾಂತಿ (ಮಳೆಯಾಶ್ರಿತ/ನೀರಾವರಿ), ಅಲಸಂದಿ (ಮಳೆಯಾಶ್ರಿತ), ನವಣೆ (ಮಳೆಯಾಶ್ರಿತ), ತೊಗರಿ(ಮಳೆಯಾಶ್ರಿತ/ನೀರಾವರಿ), ಹೆಸರು (ಮಳೆಯಾಶ್ರಿತ), ಹುರಳಿ (ಮಳೆಯಾಶ್ರಿತ), ಎಳ್ಳು (ಮಳೆಯಾಶ್ರಿತ), ನೆಲಗಡಲೆ (ಶೇಂಗಾ) (ಮಳೆಯಾಶ್ರಿತ/ನೀರಾವರಿ), ಹತ್ತಿ (ಮಳೆಯಾಶ್ರಿತ/ನೀರಾವರಿ), ಈರುಳ್ಳಿ (ನೀರಾವರಿ/ ಮಳೆಯಾಶ್ರಿತ), ಟೊಮ್ಯಾಟೊ ಬೆಳೆಗಳನ್ನು ಅಧಿಸೂಚಿತ ಬೆಳೆಗಳೆಂದು ಘೋಷಿಸಲಾಗಿದೆ.
2024-25ರ ಮುಂಗಾರು ಹಂಗಾಮಿನಲ್ಲಿ ನಿರ್ಧರಿತ ಬೆಳೆಗಳಾದ ಭತ್ತ (ನೀರಾವರಿ ಮತ್ತು ಮಳೆಯಾಶ್ರಿತ), ಮುಸುಕಿನಜೋಳ (ನೀರಾವರಿ ಮತ್ತು ಮಳೆಯಾಶ್ರಿತ), ಜೋಳ(ನೀರಾವರಿ ಮತ್ತು ಮಳೆಯಾಶ್ರಿತ), ಸಜ್ಜೆ (ನೀರಾವರಿ ಮತ್ತು ಮಳೆಯಾಶ್ರಿತ), ನವಣೆ (ಮಳೆಯಾಶ್ರಿತ), ತೊಗರಿ (ನೀರಾವರಿ ಮತ್ತು ಮಳೆಯಾಶ್ರಿತ), ಹೆಸರು (ಮಳೆಯಾಶ್ರಿತ), ಹುರುಳಿ (ಮಳೆಯಾಶ್ರಿತ), ಸೂರ್ಯಕಾಂತಿ (ನೀರಾವರಿ ಮತ್ತು ಮಳೆಯಾಶ್ರಿತ), ಎಳ್ಳು (ಮಳೆಯಾಶ್ರಿತ), ನೆಲಗಡಲೆ (ಶೇಂಗಾ) (ನೀರಾವರಿ ಮತ್ತು ಮಳೆಯಾಶ್ರಿತ), ಅಲಸಂದೆ (ಮಳೆಯಾಶ್ರಿತ) ಬೆಳೆಗಳಿಗೆ ಸಾಮಾನ್ಯ ವಿಮೆಗೆ ಪ್ರತಿ ಹೆಕ್ಟೆರ್‌ಗೆ ರೈತರು ವಿಮಾ ಮೊತ್ತದ ಶೇ.2 ರಷ್ಟು ಮೊತ್ತದ ಕಂತನ್ನು, ಹತ್ತಿ(ನೀರಾವರಿ) ಮತ್ತು ಈರುಳ್ಳಿ(ಮಳೆಯಾಶ್ರಿತ) ಬೆಳೆಗಳಿಗೆ ರೈತರು ವಿಮಾ ಮೊತ್ತದ ಶೇ.5 ರಷ್ಟು ಮೊತ್ತದ ಕಂತನ್ನು, ಹತ್ತಿ(ಮಳೆಯಾಶ್ರಿತ) ಬೆಳೆಗೆ ಶೇ.3.87 ರಷ್ಟು, ಟೊಮ್ಯಾಟೋ ಬೆಳೆಗೆ ಶೇ.4 ರಷ್ಟು ಹಾಗೂ ಈರುಳ್ಳಿ(ನೀರಾವರಿ) ಬೆಳೆಗಳಿಗೆ ಶೇ.4.36 ರಷ್ಟು ಮೊತ್ತದ ಕಂತನ್ನು ಪಾವತಿಸಬೇಕು.
ಪ್ರಸಕ್ತ ಸಾಲಿಗೆ ಟಾಟಾ ಏಐಜಿ ಇನ್ಸೂರೆನ್ಸ್ ಕೋ.ಲಿಮಿಟೆಡ್ ವಿಮಾ ಸಂಸ್ಥೆಯನ್ನು ಆಯ್ಕೆ ಮಾಡಲಾಗಿದೆ. ರೈತರು ಹೆಚ್ಚಿನ ಮಾಹಿತಿಗಾಗಿ ಇನ್ಸೂರೆನ್ಸ್ ಕಂಪನಿಯ ಪ್ರತಿನಿಧಿ/ಹತ್ತಿರದ ರೈತ ಸಂಪರ್ಕ ಕೇಂದ್ರ/ಸಾಮಾನ್ಯ ಸೇವಾ ಕೇಂದ್ರ/ಗ್ರಾಮ್ ಒನ್/ ಸಂಬAಧಪಟ್ಟ ಬ್ಯಾಂಕ್ ಶಾಖೆ ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರಾದ ರುದ್ರೇಶಪ್ಪ ಟಿ.ಎಸ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.